ಬೆಂಗಳೂರು: ರೈಲ್ವೆ ಹಳಿ ಬಳಿ ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ

"ಮಹಿಳೆಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಮತ್ತು ಶವವನ್ನು ಚಲಿಸುವ ರೈಲಿನಿಂದ ಎಸೆಯಲಾಗಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ(ಬೆಂಗಳೂರು ಗ್ರಾಮೀಣ) ಸಿ ಕೆ ಬಾಬಾ ಅವರು ಹೇಳಿದ್ದಾರೆ.
 ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ
ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ
Updated on

ಬೆಂಗಳೂರು: ಬೆಂಗಳೂರಿನ ಹೊರವಲಯದ ಚಂದಾಪುರದಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸೂರ್ಯನಗರದ ಬಳಿ ಈ ಶವ ಪತ್ತೆಯಾಗಿದ್ದು, ಆನೇಕಲ್‌ನ ರೈಲ್ವೆ ಹಳಿಗಳ ಮೇಲೆ ಸೂಟ್‌ಕೇಸ್ ಬಿದ್ದಿತ್ತು ಎಂದು ಅವರು ಹೇಳಿದ್ದಾರೆ.

ಬೇರೆ ಕಡೆ ಮಹಿಳೆಯನ್ನು ಕೊಂದು ಚಲಿಸುವ ರೈಲಿನಿಂದ ಶವವನ್ನು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

 ಸೂಟ್‌ಕೇಸ್‌ನಲ್ಲಿ ಮಹಿಳೆ ಶವ ಪತ್ತೆ
ಬಿಡದಿ ಬಾಲಕಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: FSL ವರದಿಯಲ್ಲಿ ಅಂಶ ಬಯಲು!

"ಮಹಿಳೆಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಮತ್ತು ಶವವನ್ನು ಚಲಿಸುವ ರೈಲಿನಿಂದ ಎಸೆಯಲಾಗಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ(ಬೆಂಗಳೂರು ಗ್ರಾಮೀಣ) ಸಿ ಕೆ ಬಾಬಾ ಅವರು ಹೇಳಿದ್ದಾರೆ.

"ಈ ಸಂಬಂಧ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಮತ್ತು ಮೃತ ಮಹಿಳೆಯನ್ನು ಗುರುತಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಕರಣದ ತನಿಖೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ಅತ್ಯಾಚಾರ ಅಥವಾ ಇತರ ಗಾಯದ ಗುರುತುಗಳಿಲ್ಲ ಎಂದು ಬಾಬಾ ಅವರು ಹೇಳಿದ್ದಾರೆ.

ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 103 ಮತ್ತು 238 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com