ಚಲಿಸುವ ಕಾರಿನ ಸನ್‌ರೂಫ್ ತೆಗೆದು ಜೋಡಿ Kissing: ವಿಡಿಯೋ ವೈರಲ್, ನೆಟ್ಟಿಗರಿಂದ ಭಾರೀ ಟೀಕೆ

ವಿಡಿಯೋದಲ್ಲಿ ಜೋಡಿಗಳು ಚಲಿರುವ ಕಾರಿನ ಸನ್ ರೂಫ್ ತೆಗೆದು ಚುಂಬಿಸುತ್ತಿರುವುದು ಕಂಡು ಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದು, ದಂಪತಿಗಳ ವರ್ತನೆಯನ್ನು ಅನುಚಿತ ಹಾಗೂ ಅಪಾಯಕಾರಿ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಕಾರಿನ ಸರ್ ರೂಫ್ ತೆರೆದು ರೊಮ್ಯಾನ್ಸ್ ಮಾಡುತ್ತಿರುವ ಜೋಡಿಗಳು.
ಕಾರಿನ ಸರ್ ರೂಫ್ ತೆರೆದು ರೊಮ್ಯಾನ್ಸ್ ಮಾಡುತ್ತಿರುವ ಜೋಡಿಗಳು.
Updated on

ಬೆಂಗಳೂರು: ನಗರದ ಟ್ರಿನಿಟಿ ರಸ್ತೆಯಲ್ಲಿ ಕಾರಿನ ಸನ್ ರೂಫ್ ತೆರೆದು ಜೋಡಿಯೊಂದು ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

ಈ ಕುರಿತ ವಿಡಿಯೋವನ್ನು ಕರ್ನಾಟಕ ಪೋರ್ಟ್‌ಫೋಲಿಯೋ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ದಂಪತಿಗಳ ಈ ವರ್ತನೆ ಸಂಚಾರ ನಿಯಮಗಳು ಮತ್ತು ಸಾರ್ವಜನಿಕ ಸಭ್ಯತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ರಸ್ತೆಯಲ್ಲಿರುವ ಪ್ರತಿಯೊಬ್ಬರ ಸುರಕ್ಷತೆಗೆ ಇದು ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದೆ.

ಅಲ್ಲದೆ ವಾಹನದ ನೋಂದಣಿ ಸಂಖ್ಯೆಯನ್ನು ಕೂಡ ಹಂಚಿಕೊಂಡಿದ್ದು, ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವಿಟರ್ ಖಾತೆಗೆ ಟ್ವೀಟ್ ನ್ನು ಟ್ಯಾಗ್ ಮಾಡಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ವಿಡಿಯೋದಲ್ಲಿ ಜೋಡಿಗಳು ಚಲಿರುವ ಕಾರಿನ ಸನ್ ರೂಫ್ ತೆಗೆದು ಚುಂಬಿಸುತ್ತಿರುವುದು ಕಂಡು ಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದು, ದಂಪತಿಗಳ ವರ್ತನೆಯನ್ನು ಅನುಚಿತ ಹಾಗೂ ಅಪಾಯಕಾರಿ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

ವಿಡಿಯೋ ಪರಿಶೀಲನೆ ನಡೆಸುತ್ತಿರುವುದಾಗಿ ಪೂರ್ವ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಘಟನೆಯ ನಿಖರವಾದ ಸ್ಥಳವನ್ನು ಪರಿಶೀಲಿಸಿದ ನಂತರ, ಅದು ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆಯೋ ಆ ಪೊಲೀಸ್ ಠಾಣೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ಕಾರಿನ ಸರ್ ರೂಫ್ ತೆರೆದು ರೊಮ್ಯಾನ್ಸ್ ಮಾಡುತ್ತಿರುವ ಜೋಡಿಗಳು.
ರೀಲ್ಸ್ ಹುಚ್ಚಾಟ: ದೀಪಾವಳಿ ಆಚರಣೆ ಹೆಸರಿನಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿದ ವಿದ್ಯಾರ್ಥಿಗಳು, ವೀಡಿಯೋ ವೈರಲ್

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com