
ಬೆಳಗಾವಿ: ಮಹಾರಾಷ್ಟ್ರದ ಎನ್‌ಸಿಪಿ ನಾಯಕ ರಾಜೇಂದ್ರ ಹಗವಣೆ ಅವರ ಸೊಸೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯದ ಮಾಜಿ ಸಚಿವ ವೀರಕುಮಾರ ಪಾಟೀಲ ಅವರ ಪುತ್ರ ಪ್ರೀತಂ ಪಾಟೀಲ ಅವರನ್ನು ಮಹಾರಾಷ್ಟ್ರದ ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ನಿವಾಸಿಯಾದ ಪ್ರೀತಂ ಪಾಟೀಲ ಅವರನ್ನು ಬಂಧಿಸಿ, ಮಹಾರಾಷ್ಟ್ರದ ಪುಣೆ ಜೈಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ವೈಷ್ಣವಿ ಶಶಾಂಕ ಹಗವಣೆ(23) ಕೊಲೆಯಾದ ಯುವತಿ. ಣೆ ಜಿಲ್ಲೆಯಲ್ಲಿ ಮೇ.16 ರಂದು ಅನುಮಾನಾಸ್ಪದವಾಗಿ ಸಾವಿಗಿಡಾಗಿದ್ದರು. ಈ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ, ಶವ ಪರೀಕ್ಷೆಯ ನಂತರ ತನಿಖೆಯಿಂದ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು.
ಕೊಲೆ ಮಾಡಿ ವೈಷ್ಣವಿ ಮಾವ ,ಎನ್ ಸಿ ಪಿ ಪಕ್ಷದ ನಾಯಕ ರಾಜೇಂದ್ರ ಹಗವಣೆ ಮತ್ತು ಮೈದುನ ಸುಶೀಲ ತಲೆ ಮರೆಸಿಕೊಂಡಿದ್ದರು.
ಆರೋಪಿತರಿಗೆ ಆಶ್ರಯ ಹಾಗುೂ ಆರ್ಥಿಕ ಸಹಾಯ ನೀಡಿದ ಆರೋಪದಡಿ ಪ್ರೀತಂ ಪಾಟೀಲ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಎನ್‌ಸಿಪಿ ನಾಯಕ ರಾಜೇಂದ್ರ ಹಗವಾನೆ ಅವರ ಸೊಸೆಯನ್ನು ಒಳಗೊಂಡ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವೀರಕುಮಾರ್ ಪಾಟೀಲ್ ಅವರ ಪುತ್ರ ಪ್ರೀತಂ ಪಾಟೀಲ್ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಪುಣೆ ಪೊಲೀಸರ ತಂಡವು ಬೆಳಗಾವಿ ಜಿಲ್ಲೆಯ ನಿಪಾನಿ ತಾಲ್ಲೂಕಿನ ಕುಗ್ನೋಲಿಯಲ್ಲಿರುವ ಪ್ರೀತಂ ಅವರನ್ನು ಅವರ ಮನೆಯಿಂದ ಬಂಧಿಸಿದೆ
Advertisement