ಬೆಂಗಳೂರು ಅರಮನೆ ಮೈದಾನ ಭೂ ವಿವಾದ​: ಕಾನೂನು ಹೋರಾಟ ಮುಂದುವರಿಸಲಿದ್ದು, ಅಂತಿಮ ತೀರ್ಪಿನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ; ಹೆಚ್.ಕೆ ಪಾಟೀಲ್

ಟಿಡಿಆರ್‌ಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಕೈಗೆತ್ತಿಕೊಂಡಿದೆ. ಇಲ್ಲಿಯವರೆಗೆ ನಮಗೆ ಹಿನ್ನಡೆಯಾಗಿತ್ತು. ನ್ಯಾಯಾಲಯದಲ್ಲಿ ನಮ್ಮ ವಾದವನ್ನು ನಾವು ಮಾಡುತ್ತೇವೆ.
HK Patil
ಸಚಿವ ಹೆಚ್.ಕೆ.ಪಾಟೀಲ್
Updated on

ಬೆಂಗಳೂರು: ಬೆಂಗಳೂರು ಅರಮನೆ ಜಾಗದ ಟಿಡಿಆರ್ ನೀಡುವ ಸಂಬಂಧ ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದುವರಿಸಲಿದ್ದು, ಸುಪ್ರೀಂಕೋರ್ಟ್ ಅಂತಿಮ ತೀರ್ಪಿನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂಗು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಗುರುವಾರ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಡಿಆರ್‌ಗೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಕೈಗೆತ್ತಿಕೊಂಡಿದೆ. ಇಲ್ಲಿಯವರೆಗೆ ನಮಗೆ ಹಿನ್ನಡೆಯಾಗಿತ್ತು. ನ್ಯಾಯಾಲಯದಲ್ಲಿ ನಮ್ಮ ವಾದವನ್ನು ನಾವು ಮಾಡುತ್ತೇವೆ. ಇಲ್ಲಿಯವರೆಗೆ ನಾಲ್ಕು ಆದೇಶಗಳು ಬಂದಿವೆ. ಇದೆಲ್ಲವನ್ನು ಮತ್ತೆ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಅರಮನೆ ಮೈದನಾನಕ್ಕೆ ಸಂಬಂಧಿಸಿದಂತೆ 3400 ಕೋಟಿ ರೂ. ಟಿಡಿಆರ್ ನೀಡುವ ಸುಪ್ರೀಂ ಕೋರ್ಟಿನ ಸಲಹೆಗೆ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ. ಈ ವಿಚಾರದ ವಿಚಾರಣೆ ನಡೆಯುತ್ತಲೇ ಇದೆ. 15 ಎಕರೆಗೆ 3400 ಕೋಟಿ ರೂ. ಕೊಡುವುದು ಸರಿಯಲ್ಲ, ಇದು ಅವೈಜ್ಞಾನಿಕ ಬೆಲೆ ಇದ್ದಂತೆ. ಒಮ್ಮೆ ಈ ರೀತಿ ಕೊಟ್ಟರೆ ಬೇರೆಯದಕ್ಕೂ ಇದು ಅನ್ವಯವಾಗುತ್ತದೆ. ಅರಮನೆಯ 400 ಎಕರೆ ಭೂಮಿಯನ್ನು ಕಾನೂನು ಪ್ರಕಾರವೇ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

11 ಕೋಟಿ ರೂ.ಗಳನ್ನು ಅವತ್ತಿನ ಕಾಲದಲ್ಲೇ ನೀಡಲಾಗಿದೆ. ಇದನ್ನು ವಿರೋಧಿಸಿ ಅರಮನೆಯವರು ಕೋರ್ಟ್‌ಗೆ ಹೋಗಿದ್ದರು. ಈ ವಿಚಾರದಲ್ಲಿ ಯಾವುದೇ ತಡೆಯಾಜ್ಞೆ ಇರಲಿಲ್ಲ. ಕಳೆದ 28 ವರ್ಷದಿಂದ ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಾಗಿದೆ. ನಾಲೈದು ದಿನದ ಹಿಂದೆ ಸುಪ್ರೀಂ ಕೋರ್ಟಿನ ಪೀಠ 3400 ಕೋಟಿ ರೂ. ಕೊಡುವಂತೆ ನಿರ್ಣಯ ನೀಡಿದೆ. ನಾವು ಸುಪ್ರೀಂ ಕೋರ್ಟಿಗೆ ಮನವರಿಕೆ ಪ್ರಯತ್ನ ಮಾಡಿದ್ದೆವು. ಮೊತ್ತ ತುಂಬಾ ದುಬಾರಿಯಾಗಿದೆ. ಇದು ನಮ್ಮ ಆಸ್ತಿಯಾಗಿರುವುದರಿಂದ ಟಿಡಿಆರ್ ಬರಲ್ಲ. ಆದರೂ ಟಿಡಿಆರ್ ಕೊಡಬೇಕು ಎಂದು ನ್ಯಾಯಾಲಯ ಹೇಳಿದ್ದು, ನಮ್ಮ ಮನವಿಯನ್ನ ನ್ಯಾಯಾಲಯ ತಿರಸ್ಕಾರ ಮಾಡಿತ್ತು.

ನಾವು ಈ ಬಗ್ಗೆ ಕಾನೂನನ್ನು ಜಾರಿಗೆ ತಂದಿದ್ದೆವು. ನಮಗೆ ಜಾಗವೇ ಬೇಡವೆಂದು ಹೇಳಿದ್ದವು. ಆದರೂ ಸುಪ್ರೀಂ ಕೋರ್ಟ್ ನಮ್ಮ ಮನವಿ ಪರಿಗಣಿಸದೇ ನೀವು ಕೊಡಲೇಬೇಕೆಂದು ವಿಭಾಗೀಯ ಪೀಠ ಆದೇಶ ನೀಡಿತ್ತು. ಅರಮನೆ ಮೈದಾನ ಸರ್ಕಾರದ ಆಸ್ತಿ. ಟಿಡಿಆರ್‌ ಕೊಡುವುದು ಸಮಂಜಸವಲ್ಲ. ಅಷ್ಟು ಹಣ ಕೊಟ್ಟರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ತ್ರಿಸದಸ್ಯ ಪೀಠದ ಗಮನಕ್ಕೆ ತಂದೆವು. ಕೋರ್ಟ್ ನಮ್ಮ ಮನವಿ ಪುರಸ್ಕರಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಂದಿನ ವಿಚಾರಣೆ ಆಗಸ್ಟ್‌ನಲ್ಲಿ ಆರಂಭವಾಗಲಿದ್ದು, ಅಂತಿಮ ತೀರ್ಪಿನಲ್ಲಿ ರಾಜ್ಯಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ಇದೇ ವೇಳೆ ಮುಸ್ಲಿಂ ಮೀಸಲಾತಿ ವಿಧೇಯಕ ರಾಜ್ಯಪಾಲರಿಂದ ವಾಪಸ್ ಬಂದಿರುವ ವಿಚಾರ ಕುರಿತು ಮಾತನಾಡಿದ ಅವರು, ಈ ಸುದ್ದಿಯನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಇದರ ಬಗ್ಗೆ ಕಾನೂನು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆಂದು ಹೇಳಿದರು.

HK Patil
ಸರ್ಕಾರಕ್ಕೆ ಬಿಗ್ ರಿಲೀಫ್: Bengaluru Palace Grounds ಸಂಬಂಧಿಸಿದ TDR ಪ್ರಮಾಣಪತ್ರ ಕುರಿತ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com