
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದ್ದು, ಗಾಡಿಗೆ ಟಚ್ ಆಯ್ತು ಎಂದು ಯುವತಿಯೊಬ್ಬಳು ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡಿಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಇಬ್ಬರು ಯುವತಿಯರು ಮತ್ತು ಓರ್ವ ಯುವಕ ಕಾರಿನ ಸನ್ ರೂಫ್ ಟಾಪ್ ತೆಗೆದು ಯುವತಿಯರೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಇದಕ್ಕೂ ಮೊದಲು ಹಿಂದಿ ಭಾಷಿಕ ವ್ಯಕ್ತಿಯೋರ್ವ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಬಳಿಕ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ ಬಳಿಕ ಆತ ಕ್ಷಣೆ ಕೋರಿದ್ದ. ಇದೀಗ ಮತ್ತೆ ಅಂತಹುದೇ ವಿಡಿಯೋ ವೈರಲ್ ಆಗುತ್ತಿದೆ.
@CheKrishnaCk_ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ವಿಡಿಯೋದಲ್ಲಿ ಯುವತಿ ಆಟೋ ಚಾಲಕನಿಗೆ ನಿಂದಿಸುತ್ತಿದ್ದಾರೆ. ಈ ವೇಳೆ ಚಾಲಕ ಯುವತಿಯ ವಿಡಿಯೋ ಮಾಡುತ್ತಿದ್ದು ವಿಡಿಯೋ ಮಾಡದಂತೆ ಯುವತಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ವಿಡಿಯೋದಲ್ಲಿರುವಂತೆ ಯುವತಿ ತನ್ನ ಗಾಡಿಯಲ್ಲಿ ಹೋಗುತ್ತಿದ್ದಾಗ ನಡು ರಸ್ತೆಯಲ್ಲಿ ಆಟೋ ಯುವತಿಯ ಗಾಡಿ ಹತ್ತಿರಕ್ಕೆ ಬಂದಿದ್ದು, ಈ ವೇಳೆ ಯುವತಿ ಆಟೋ ತನ್ನ ಗಾಡಿಗೆ ಟಚ್ ಆಯಿತು ಎಂದು ಜಗಳ ತೆಗೆದಿದ್ದಾಳೆ. ಈ ವೇಳೆ ಆಟೋ ಚಾಲಕ ತಾನು ಟಚ್ ಮಾಡಿಲ್ಲ ವಾದಿಸಿದರೂ ಕೇಳದ ಯುವತಿ ನೋಡ ನೋಡುತ್ತಲೇ ತನ್ನ ಚಪ್ಪಲಿ ತೆಗೆದು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement