

ಕಲಬುರಗಿ: ಕಲಬುರಗಿ ಜಿಲ್ಲೆಯ ಮರಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಸಾಪೂರ ಗ್ರಾಮ ಸೇರಿದಂತೆ ಹಲವೆಡೆ ಶನಿವಾರ ಭೂ ಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ.
ಭೂಕಂಪನದಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಮನೆಗಳಿಂದ ಹೊರಬಂದಿದ್ದಾರೆ. ಈ ಕುರಿತು ಮಾಹಿತಿ ಅರಿತ ಕಮಲಾಪುರ ತಾಲ್ಲೂಕು ತಹಶೀಲ್ದಾರ್ ಅವರು ಮಳಸಾಪೂರ ಮತ್ತು ಪಟವಾದ ಗ್ರಾಮಕ್ಕೆ ಭೇಟಿ ನೀಡಿ. ಸಾರ್ವಜನಿಕರಿಗೆ ಭೂಕಂಪನ ಕುರಿತು ವಿಚಾರಿಸಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿಸಿದ್ದಾರೆ.
ಭೂಕಂಪನದ ತೀವ್ರತೆ ಕಡಿಮೆಯಾಗಿದ್ದು, ಭೂಕಂಪದ ಕೇಂದ್ರ ಬಿಂದುವಿನಿಂದ 30-40 ಕಿ.ಮೀ. ಗರಿಷ್ಠ ರೇಡಿಯಲ್ ದೂರದವರೆಗೆ ಕಂಪನದ ಅನುಭವವಾಗಬಹುದು.
ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ, ಆದರೂ ಸ್ಥಳೀಯವಾಗಿ ಸ್ವಲ್ಪ ಕಂಪನ ಕಂಡುಬರಬಹುದು. ಭೂಕಂಪದ ಕೇಂದ್ರ ಬಿಂದುವು ಭೂಕಂಪ ವಲಯ II ರ ಆಳದಲ್ಲಿ ಕಂಡು ಬರುತ್ತದೆ, ಅಲ್ಲಿ ಭೂಕಂಪದಿಂದ ಹಾನಿಯಾಗುವ ಸಾಧ್ಯತೆ ತುಂಬಾ ಕಡಿಮೆ ಎಂದು ಎಂದು ಮೂಲಗಳು ತಿಳಿಸಿವೆ.
Advertisement