

ಬೆಂಗಳೂರು: ಸುರಂಗ ರಸ್ತೆ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಲಾಲ್ ಬಾಗ್ ಪೂರ್ವದ್ವಾರದ ಡಬ್ಬಲ್ ರೋಡ್ ಬಳಿ ಬಿಜೆಪಿಯಿಂದ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನವನ್ನು ಭಾನುವಾರ ಆಯೋಜಿಸಲಾಗಿತ್ತು. ಸಂಸದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದ ತೇಜಸ್ವಿ ಸೂರ್ಯ, ಶಾಸಕರುಗಳಾದ ರವಿ ಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡರು.
VIP ಟನಲ್ ಯೋಜನೆ: ಈ ವೇಳೆ ಮಾತನಾಡಿದ ಆರ್. ಅಶೋಕ್, ಬೆಂಗಳೂರಿನ ಸಸ್ಯ ಕಾಶಿಯಲ್ಲಿ ಗುಂಡಿ ತೊಡ್ತಿದ್ದಾರೆ. ಲಾಲ್ ಬಾಗ್ ಅನ್ನು ಪ್ರೀತಿಸುವ ಸಾಕಷ್ಟು ಜನರಿದ್ದಾರೆ. ಈ ಸುರಂಗ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತೆ.ಇದು ವಿಐಪಿ ಟನಲ್ ಯೋಜನೆ ಆಗಿದೆ, ಕಾರುಗಳಿಗೆ ಮಾತ್ರ ಪರ್ಮಿಷನ್ ಸಿಗುತ್ತೆ. ರೂ. 8000 ಸಾವಿರ ಕೋಟಿಗೆ ಕಾಂಟ್ರ್ಯಾಕ್ಟ್ ಕೊಟ್ಟಿದ್ದಾರೆ. ಕಾರ್ಮಿಕರಿಗೆ 4 ಸಾವಿರ ಕೋಟಿ ಸಾಲ ಕೊಡುವುದಿದೆ. ಬೆಂಗಳೂರಿನ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳುವ ಯೋಜನೆ ಎಂದು ಕಿಡಿಕಾರಿದರು.
ಸರ್ಕಾರದಿಂದ ಕಾನೂನು ಉಲ್ಲಂಘನೆ: ಲಾಲ್ ಬಾಗ್ ನಲ್ಲಿ 3 ಸಾವಿರ ದಶಲಕ್ಷ ಹಿಂದಿನ ಶಿಲೆ ಇದೆ. ಇಲ್ಲಿ ಭೂಕಂಪದ ಭಯ ವಿಲ್ಲ. ಟನಲ್ ರಸ್ತೆಗೆ ಜಿಯಾಲಜಿಕಲ್ ಸರ್ವೆದವರು ಪರ್ಮಿಷನ್ ಕೊಟ್ಟಿದಾರಾ? ಎಂದು ಪ್ರಶ್ನಿಸಿದ ಅಶೋಕ್, ಸರ್ಕಾರದಿಂದಲೇ ಲಾಲ್ ಬಾಗ್ ರಕ್ಷಿತ ಪ್ರದೇಶ ಎಂಬ ಬೋರ್ಡ್ ಹಾಕಿದ್ದಾರೆ. ಈಗ ಸರ್ಕಾರದವರೇ ಕಾನೂನನ್ನ ಉಲ್ಲಂಘನೆ ಮಾಡ್ತಿದ್ದಾರೆ. ಈ ಟನಲ್ ಯೋಜನೆಯಿಂದ ಟ್ರಾಪಿಕ್ ಸಮಸ್ಯೆ ಸರಿಯಾಗಲ್ಲ. ಈ ಯೋಜನೆ ಮಾಡುವ ಮೊದಲು ಗುಂಡಿಗಳನ್ನು ಮುಚ್ಚಿ ಎಂದು ಒತ್ತಾಯಿಸಿದರು.
ಒಂದು ಕಿಲೋಮೀಟರ್ ಗೆ ರೂ. 1,800 ಕೋಟಿ ಬೇಕಾಗುತ್ತೆ: ಈ ಟನಲ್ ನಲ್ಲಿ ಓಡಾಡೋ ಜನರಿಗೆ ಹಣದ ಹೊರೆ ಬೀಳುತ್ತೆ. ಒಂದು ತಿಂಗಳಿಗೆ ರೂ. 16 ಸಾವಿರದಿಂದ 20 ಸಾವಿರ ಕೊಡಬೇಕಾಗುತ್ತೆ. ಅದರ ಬದಲು ಜನರು ಒಂದು ಕಾರು, ಲೋನ್ ಮೂಲಕ ಮನೆ ತಗೋಬಹುದು.ಸ್ಯಾಂಕಿ ಟ್ಯಾಂಕಿ ರೋಡ್ ಮಾಡುವಾಗ ನೀವೇ ನಿಲ್ಲಿಸಿದ್ದೀರಾ, ಈ ಪ್ರಾಜೆಕ್ಟ್ ನ ನೀವು ಹೇಗೆ ಮಾಡ್ತೀರಾ? ಎಂದು ಪ್ರಶ್ನಿಸಿದ ಆರ್.ಅಶೋಕ್, ಒಂದು ಕಿಲೋಮೀಟರ್ ಗೆ ರೂ. 1,800 ಕೋಟಿ ಬೇಕಾಗುತ್ತೆ. ಅನ್ಯಗ್ರಹಕ್ಕೆ ಹೋಗುವ ಸ್ಯಾಟ್ ಲೈಟ್ ಗಿಂತಲೂ ದುಬಾರಿ. ಈ ಟನಲ್ ಮಾಡುವ ಬದಲು ಮೆಟ್ರೋ ಮಾಡೋದು ಉತ್ತಮ. ಅಲ್ಲಿ ಕಮಿಷನ್ ಸಿಗಲ್ಲ ಅಂತ ಈ ಟನಲ್ ಯೋಜನೆ ಮಾಡ್ತಿದೀರಾ.?
120 ಇಲಾಖೆ ಪರ್ಮಿಷನ್ ಬೇಕು: ನಿಮ್ಮ ಹತ್ತಿರ ಸಂಬಳ ಕೊಡುವುದಕ್ಕೂ ದುಡ್ಡಿಲ್ಲ. ಕಾಂಟ್ರ್ಯಾಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಹತ್ತಿರ ದುಡ್ಡಿಲ್ಲ ಆದರೂ ಮಾಡ್ತಿದೀರಾ? 120 ಇಲಾಖೆ ಇಂದ ಈ ಟನಲ್ ಯೋಜನೆ ಗೆ ಪರ್ಮಿಷನ್ ಬೇಕು. ಬಿಹಾರ್ ಅಥವಾ ತಮಿಳುನಾಡು ಎಲೆಕ್ಷನ್ ಗೆ ಈ ಪ್ರಾಜೆಕ್ಟ್ ಮಾಡ್ತಿದೀರಾ.? ಈ ಟನಲ್ ಯೋಜನೆಗೆ ಕೋರ್ಟ್ ಕೂಡ ಪರ್ಮಿಷನ್ ಕೊಟ್ಟಿಲ್ಲ. ಪ್ರವೆಟ್ ಜಾಗದಲ್ಲಿ ಟನಲ್ ಮಾಡಿದರೆ ದುಡ್ಡು ಬೇಕಾಗುತ್ತೆ. ಅದಕ್ಕಾಗಿಯೇ ಪಾರ್ಕ್, ಕೆರೆಗಳನ್ನು ಹುಡುಕಿದ್ದಾರೆ
ಕೆಂಪೇಗೌಡರ ಕೆರೆ, ಪಾರ್ಕ್ ಗಳನ್ನ ಮುಳುಗಿಸಲಿಕ್ಕೆ ಹೊರಟಿದ್ದಾರೆ.ಡಿಕೆಶಿ ಅವರು ಕೆಂಪೇಗೌಡರ ಕುಟುಂಬದವರು ಅಂತಾರೆಇದೇನಾ ಡಿ.ಕೆ ಶಿವಕುಮಾರವರ ಸಂಸ್ಕೃತಿ? ಎಂದು ವಾಗ್ದಾಳಿ ನಡೆಸಿದರು.
ಇದು ಕನಕಪುರ ಬಂಡೆ ಅಲ್ಲ: ಇದು ಕನಕಪುರ ಬಂಡೆ ಅಲ್ಲ, ಲಾಲ್ ಬಾಗ್ ಬಂಡೆ. ಡಿಕೆಶಿ ಅವರೇ ಇದನ್ನ ಕೊರಿಯ ಬೇಡಿ . ಲಾಲ್ ಬಾಗ್ ಬೆಂಗಳೂರಿನ ಜನರಿಗೆ ಲ್ಯಾನ್ಸ್ ಪಾರ್ಕ್ ಆಗಿದೆ. ಮೊದಲು ಬೆಂಗಳೂರಿನ ಗುಂಡಿಗಳನ್ನ ಮುಚ್ಚಿ ನಂತರ ಏನು ಬೇಕಾದರೂ ಮಾಡಿ ಸರ್ಕಾರ ಈ ಟನಲ್ ಯೋಜನೆ ಯನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದರು.
Advertisement