

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯಗಳು ಮತ್ತು ಸ್ಮಾರ್ಟ್ ಫೋನ್ಗಳು ದೊರೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಕಳಕಳಿ ಹುಟ್ಟುಹಾಕುತ್ತಿದೆ. ವಿಕೃತಕಾಮಿ ಉಮೇಶ್ ರೆಡ್ಡಿ ಮೊಬೈಲ್ ಬಳಸುತ್ತಾ ಸ್ಮಾರ್ಟ್ ಟಿವಿ ನೋಡುತ್ತಿರುವ ವಿಡಿಯೋ ಹಾಗೂ ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ನಟ ದರ್ಶನ್ ಪ್ರಕರಣದ ಬೆನ್ನಲ್ಲೇ ಯಾವುದೇ ಸೌಲಭ್ಯಗಳನ್ನು ನೀಡದಂತೆ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರ ಕಾರಾಗೃಹದ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿದ್ದರೂ, ಹಲವು ಜೈಲುಗಳಲ್ಲಿ ಇಂತಹ ವಿಐಪಿ ಸೌಲಭ್ಯಗಳು ಮುಂದುವರೆದಿದೆ. ಆಘಾತಕಾರಿ ವಿಷಯವೆಂದರೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಸಿಸ್ನ ಮೋಸ್ಟ್ ವಾಂಟೆಡ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಎಂಬಾತನಿಗೂ ರಾಜಾತಿಥ್ಯ ದೊರೆಯುತ್ತಿರುವುದು ಬಯಲಾಗಿದೆ. ಪರಪ್ಪನ ಅಗ್ರಹಾರ ಜೈಲು ಭಯೋತ್ಪಾದಕರ ಸ್ವರ್ಗವಾಗಿ ಪರಿಣಮಿಸಿದೆಯೇ ಎಂಬ ಅನುಮಾನವೂ ಹುಟ್ಟಿಕೊಂಡಿದೆ.
Advertisement