

ಬೆಂಗಳೂರು: ನೆಲಮಂಗಲದಲ್ಲಿ ನಡೆದ ಅಪಘಾತದಲ್ಲಿ ಜರ್ಮನಿಯಲ್ಲಿ ಎಂಎಸ್ ಪದವಿ ಪಡೆಯುತ್ತಿದ್ದ 27 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ನೆಲಮಂಗಲದ ಸಿ ತೇಜಸ್ ಗೌಡ ಮೃತ ವಿದ್ಯಾರ್ಥಿ.
ಬೈಕ್ ಸ್ಕಿಡ್ ಆಗಿ ರಸ್ತೆ ವಿಭಜಕಕ್ಕೆ ಬಿದ್ದ ಪರಿಣಾಮ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಹೆಲ್ಮೆಟ್ ಧರಿಸಿರಲಿಲ್ಲ, ಇದರಿಂದ ತಲೆಗೆ ತೀವ್ರ ಪೆಟ್ಟಾಗಿದೆ. ಸೋಮವಾರ ಬೆಸ್ಕಾಂ ಕಚೇರಿ ಎದುರು, ತೇಜಸ್ ಸ್ನೇಹಿತನ ಮದುವೆಗೆ ಹೋಗಿ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಒಂದು ವಾರದ ಹಿಂದೆ ಜರ್ಮನಿಯಿಂದ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಗುರುವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ತೇಜಸ್ ಮೃತಪಟ್ಟಿದ್ದಾರೆ.
ಗಾಳಿಯಲ್ಲಿ ಅಲುಗಾಡುತ್ತಿದ್ದ ಫ್ಲೆಕ್ಸ್ ಬೋರ್ಡ್ ಬೈಕ್‌ಗೆ ತಗುಲಿ ಸ್ಕಿಡ್ ಆಗಿದೆ ಎಂದು ತೇಜಸ್ ಗೌಡ ಸ್ನೇಹಿತ ಹೇಳಿದ್ದಾರೆ. ಆದಾಗ್ಯೂ, ನೆಲಮಂಗಲ ಸಂಚಾರ ಪೊಲೀಸರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. "ಫ್ಲೆಕ್ಸ್ ಗೂ ಬಹಳ ಹಿಂದೆಯೇ ವ್ಯಕ್ತಿ ಸ್ಕಿಡ್ ಆಗಿದ್ದಾನೆ.
ಹೆಲ್ಮೆಟ್ ಧರಿಸದ ಕಾರಣ, ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಆತನ ತಲೆಗೆ ಮಾರಣಾಂತಿಕ ಗಾಯಗಳಾಗಿವೆ. ಫ್ಲೆಕ್ಸ್ ಬೋರ್ಡ್ ನಿರ್ಮಿಸಲು ಪೂರ್ವಾನುಮತಿ ಪಡೆಯಲಾಗಿದೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement