ಬೆಂಗಳೂರು ಎಟಿಎಂ ವ್ಯಾನ್ ದರೋಡೆ: '5.76 ಕೋಟಿ ಹಣ ಸೀಜ್, ತನಿಖೆಗೆ 11 ತಂಡ ರಚನೆ': ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್

ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ಹಣ ಸಾಗಾಟ ವೇಳೆ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
Seemant Kumar Singh
ಸೀಮಂತ್ ಕುಮಾರ್ ಸಿಂಗ್
Updated on

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಎಟಿಎಂ ವ್ಯಾನ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ನಾಲ್ವರನ್ನು ಬಂಧಿಸಿ, ಅವರಿಂದ ಸುಮಾರು 5.76 ಕೋಟಿ ಹಣ ಸೀಜ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ಇಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದಿದ್ದ ಎಟಿಎಂ ಹಣ ಸಾಗಾಟ ವೇಳೆ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

'ಒಟ್ಟು 8 ಜನರ ಗುಂಪಿನಿಂದ ಕೃತ್ಯ ನಡೆದಿದೆ. ಈಗ ಸದ್ಯ 3 ಆರೋಪಗಳನ್ನು ಬಂಧಿಸಲಾಗಿದೆ. 5.76 ಕೋಟಿ ಹಣ ಸೀಜ್ ಮಾಡಲಾಗಿದೆ. ಒಟ್ಟು 8 ಜನರ ಗುಂಪಿನಿಂದ ಕೃತ್ಯ ನಡೆದಿದೆ. ಈಗ ಸದ್ಯ 3 ಆರೋಪಿಗಳನ್ನು ಬಂಧನ ಮಾಡಲಾಗಿದೆ. 30 ತಾಸು ತಡವಾಗಿ ಮಾಹಿತಿ ಬಂದಿದೆ. ಮೊದಲು ಡಿಜೆ ಹಳ್ಳಿಯಲ್ಲಿ ಆಗಿದೆ ಅಂತ ಮಾಹಿತಿ ಬಂದಿತ್ತು.

ಘಟನೆ ನಡೆದ ಒಂದೂವರೆ ಗಂಟೆಯ ಬಳಿಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಲ್ಲಾ ಭಾಗಗಳಲ್ಲಿ ನಾಕಾಬಂಧಿ ಹಾಕಲಾಗಿತ್ತು. ದರೋಡೆಕೋರರು ಮೊಬೈಲ್ ಬಳಸುತ್ತಿರಲಿಲ್ಲ. ಸಿಸಿಟಿವಿ ಕಾಣದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದ್ದರು. ತನಿಖೆಯ ದಾರಿ ತಪ್ಪಿಸಲು ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಿದ್ದಾರೆ. ಘಟನೆ ನಡೆದ ದಿನ ಹಣ ತೆಗೆದುಕೊಂಡು ಹೋದ ವಾಹನ ಹಿಡಿಯಲಿಕ್ಕೆ ಆಗ್ಲಿಲ್ಲ. ಅನೇಕ ವಾಹನ ಬಳಸಿದ್ದಾರೆ. ವಾಹನಗಳ ನಂಬರ್ ಪದೇ ಪದೇ ಬದಲಿಸಿದ್ದಾರೆ ಎಂದು ಸೀಮಂತ್ ಕುಮಾರ್ ಮಾಹಿತಿ ನೀಡಿದರು.

Seemant Kumar Singh
ಬೆಂಗಳೂರು ಎಟಿಎಂ ದರೋಡೆ: ಮತ್ತೋರ್ವ ಪ್ರಮುಖ ಆರೋಪಿ Xavier ತಮಿಳುನಾಡಿನಲ್ಲಿ ಬಂಧನ!

5 ರಾಜ್ಯಗಳಲ್ಲಿ ಶೋಧ, ತನಿಖೆಗೆ 11 ತಂಡ ರಚನೆ

ಇದೇ ವೇಳೆ 5 ರಾಜ್ಯಗಳಲ್ಲಿ ಶೋಧ ನಡೆಸಲಾಗಿದ್ದು, ತನಿಖೆಗೆ ಒಟ್ಟು 11 ತಂಡಗಳನ್ನು ರಚನೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮೊದಲ 24 ಗಂಟೆಗಳ ಅಂತ್ಯದ ವೇಳೆಗೆ, ಆರೋಪಿಗಳು ಮತ್ತು ಬಳಸಿದ ವಾಹನಗಳನ್ನು ನಿರ್ದಿಷ್ಟ ಮಾಹಿತಿಯ ಮೂಲಕ ಗುರುತಿಸಲಾಯಿತು.

ಇದು ಅವರ ಬಂಧನಕ್ಕೆ ಕಾರಣವಾಯಿತು. ಆರ್‌ಬಿಐ ಅಧಿಕಾರಿಗಳಂತೆ ನಟಿಸಿದ ಗ್ಯಾಂಗ್ ಹಣದೊಂದಿಗೆ ಪರಾರಿಯಾಗಿದ್ದ ಸಂವೇದನಾಶೀಲ ದರೋಡೆಯ ಕುರಿತು ವರದಿಗಾರರಿಗೆ ವಿವರಿಸಿದ ಸಿಂಗ್, ಇಲ್ಲಿಯವರೆಗೆ 5.76 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಮತ್ತು ಉಳಿದ ಮೊತ್ತವನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಸಿಸಿಟಿವಿ ಇಲ್ಲದ ಕಡೆಯಲ್ಲಿ ಆರೋಪಿಗಳು ಓಡಾಡಿದ್ದಾರೆ. ವಾಹನವನ್ನು ಸಿಸಿಟಿವಿ ಇಲ್ಲದ ಜಾಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾದಲ್ಲಿ ಆರೋಪಿಗಳನ್ನು ಹುಡುಕಾಟ ನಡೆಸಿದ್ದಾರೆ. ಇನ್ನೂ ಹಣ ರಿಕವರಿ ಆಗಬೇಕು. 200 ಸ್ಟಾಪ್ ಬಳಕೆ ಮಾಡಲಾಗಿದೆ. 30 ಕ್ಕೂ ಹೆಚ್ಚು ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಮೂವರು ಬಂಧಿಸಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ವಿವರಿಸಿದ್ದಾರೆ.

3 ತಿಂಗಳಿಂದ ಸಂಚಿಗೆ ಪ್ಲಾನಿಂಗ್

ಗೋವಿಂದಪುರ ಪೇದೆ ಸೇರಿ ಮೂವರ ಬಂಧನವಾಗಿದೆ. ಮಾಜಿ ನೌಕರ, ಪೊಲೀಸ್ ಕಾನ್‌ಸ್ಟೇಬಲ್ ಬಂಧನ ಮಾಡಲಾಗಿದೆ. ಗೋಪಿ, ಕ್ಸೇವಿಯರ್, ಅಣ್ಣಪ್ಪನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ಕ್ಲೂ ಇಲ್ಲದೆ ಆರೋಪಿಗಳು ಕೆಲಸ ಮಾಡಿದ್ದಾರೆ. ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಬಂಧನ ಮಾಡಲಾಗಿದೆ. 6 ರಿಂದ ಏಂಟು ಮಂದಿ ಸೇರಿ ಕೃತ್ಯ ಎಸಗಿದ್ದಾರೆ.

ಒಂದು ಇನ್ನೋವಾ ಗಾಡಿ ಚಿತ್ತೂರಿನಲ್ಲಿ ಸಿಕ್ಕಿತ್ತು. ಬೆಂಗಳೂರಿನ ಹೊರ ಭಾಗದಲ್ಲಿ ಹಣ ರಿಕವರಿ ಮಾಡಲಾಗಿದೆ. ಅಪರಾಧಿಗಳನ್ನು ಪತ್ತೆಹಚ್ಚಲು ದಕ್ಷಿಣದ ಎಲ್ಲಾ ರಾಜ್ಯಗಳು ಮತ್ತು ಗೋವಾಕ್ಕೆ ಆರು ತಂಡಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.

ದರೋಡೆಕೋರರಿಗೆ ಶಿಕ್ಷೆ ಕೊಡಿಸುವ ನಿಟ್ಡಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣವನ್ನ ಪ್ರತಿಷ್ಠೆಯಾಗಿ ತಗೆದುಕೊಂಡು ಕೆಲಸ ಮಾಡಲಾಗಿದೆ. ಸಿಸಿಬಿ ಡಿಸಿಪಿ, ದಕ್ಷಿಣ ವಿಭಾಗದ ಡಿಸಿಪಿ ಹಾಗೂ ಇಬ್ಬರು ಜಂಟಿ ಪೊಲೀಸ್ ಆಯುಕ್ತರಿಂದ ಕಾರ್ಯಚರಣೆ ಮಾಡಲಾಗಿದೆ.

3 ತಿಂಗಳಿಂದ ಪ್ಲಾನಿಂಗ್ ಮಾಡಿದ್ದಾರೆ. 15 ದಿನದಿಂದ ರೇಖಿ ಮಾಡಿದ್ರು. ಸಿಸಿಟಿವಿ ಇಲ್ಲದೇ ಇರೋ ಜಾಗವನ್ನು ನೋಡಿಕೊಂಡು ದಾಳಿ ಮಾಡಿದರು. ಸಿಎಂಎಸ್ ಕಂಪನಿಯ ಲೋಪ ಕೂಡ ಇದೆ. ಸಿಎಂಎಸ್ ಕಂಪನಿಯು ರೂಲ್ಸ್ ವೈಲೇಷನ್ ಮಾಡಿದ್ದಾರೆ. ವೆಹಿಕಲ್ ಇನ್‌ಚಾರ್ಜ್ ಶಾಮೀಲಾಗಿ ಕೃತ್ಯ ಎಸಗಿದ್ದಾರೆ. ವಾಹನದ ಚಾಲಕ ಹೊರಗುತ್ತಿಗೆ ಡ್ರೈವರ್‌ ಆಗಿದ್ದ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com