ಕೇರಳ ರಾಜ್ಯ ಆರೋಗ್ಯ ರಕ್ಷಣಾ ವ್ಯವಸ್ಥೆ ಕೊಂಡಾಡಿದ ಸಚಿವ ದಿನೇಶ್ ಗುಂಡೂರಾವ್

ನನ್ನ ಇಲಾಖೆಯ ವಿಷಯಕ್ಕೆ ಬಂದಾಗ, ನಾನು ಯಾವಾಗಲೂ ಕರ್ನಾಟಕವನ್ನು ಭಾರತದೊಂದಿಗೆ ಅಲ್ಲದೆ, ಕೇರಳ ಮತ್ತು ತಮಿಳುನಾಡಿನೊಂದಿಗೆ ಹೋಲಿಸುತ್ತೇನೆ. ಈ ರಾಜ್ಯಗಳು ಗುಣಮಟ್ಟದ ಆರೋಗ್ಯ ರಕ್ಷಣೆ ನೀಡುವ ವಿಷಯದಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸಿವೆ.
Dinesh Gundu Rao
ದಿನೇಶ್ ಗುಂಡೂರಾವ್online desk
Updated on

ಕಾಸರಗೋಡು/ಕೇರಳ: ಆರೋಗ್ಯ ರಕ್ಷಣೆ ವಿಷಯದಲ್ಲಿ ಕೇರಳ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಗುರುವಾರ ಹೇಳಿದ್ದಾರೆ.

ಭಾರತದ ಪ್ರಮುಖ ಆರೋಗ್ಯ ಸೇವೆಒದಗಿಸುವ ಆಸ್ಟರ್ ಡಿಎಂ ಹೆಲ್ತ್‌ಕೇರ್ ಸಂಸ್ಥೆ ಕೇರಳದಲ್ಲಿ ತನ್ನ ಎಂಟನೇ ಆಸ್ಪತ್ರೆಯಾಗಿ ಅತ್ಯಾಧುನಿಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ 'ಆಸ್ಟರ್ ಮಿಮ್ಸ್ ಕಾಸರಗೋಡು' ಅನ್ನು ಗುರುವಾರ ಪ್ರಾರಂಭಿಸಿತು.

ಆಸ್ಪತ್ರೆ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ವೇದಿಕೆ ಹಂಚಿಕೊಂಡ ದಿನೇಶ್ ಗುಂಡೂರಾವ್ ಅವರು, ಕೇರಳದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿದರು. ಆರೋಗ್ಯ ರಕ್ಷಣೆ ವಿಷಯದಲ್ಲಿ ಕೇರಳ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಉತ್ತಮ ಆರೋಗ್ಯ ವ್ಯವಸ್ಥೆಯಿಂದಾಗಿ ಸರಾಸರಿ ಜೀವಿತಾವಧಿ ಈಗ ಸುಮಾರು 70 ವರ್ಷಗಳಿಗೆ ಏರಿದೆ. ದಕ್ಷಿಣ ರಾಜ್ಯಗಳು ಎಲ್ಲಾ ಮಾನವ ಸೂಚ್ಯಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆಯ ಆರೋಗ್ಯ ರಕ್ಷಣೆಯ ವಿಷಯದಲ್ಲಿ ಕೇರಳ ನಮ್ಮ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ ಎಂದು ತಿಳಿಸಿದರು.

ನನ್ನ ಇಲಾಖೆಯ ವಿಷಯಕ್ಕೆ ಬಂದಾಗ, ನಾನು ಯಾವಾಗಲೂ ಕರ್ನಾಟಕವನ್ನು ಭಾರತದೊಂದಿಗೆ ಅಲ್ಲದೆ, ಕೇರಳ ಮತ್ತು ತಮಿಳುನಾಡಿನೊಂದಿಗೆ ಹೋಲಿಸುತ್ತೇನೆ. ಈ ರಾಜ್ಯಗಳು ಗುಣಮಟ್ಟದ ಆರೋಗ್ಯ ರಕ್ಷಣೆ ನೀಡುವ ವಿಷಯದಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸಿವೆ. ಆದ್ದರಿಂದ, ಆರೋಗ್ಯ ಸೌಲಭ್ಯಗಳ ವಿಷಯದಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳೊಂದಿಗೆ ಸ್ಪರ್ಧಿಸುವಂತೆ ನಾನು ಯಾವಾಗಲೂ ನನ್ನ ಜನರಿಗೆ ಹೇಳುತ್ತೇನೆ. ಇದು ನಮ್ಮ ಮಾನದಂಡದಂತಿದೆ ಎಂದ ಶ್ಲಾಘಿಸಿದರು. ಇದೇ ವೇಳೆ ಚೆರ್ಕಳದಲ್ಲಿರುವ ಹೊಸ ಆಸ್ಪತ್ರೆ ಕಾಸರಗೋಡಿನ ಜನರಿಗೆ ಉಪಯುಕ್ತವಾಗಲಿದೆ ಎಂದೂ ಹೇಳಿದರು.

Dinesh Gundu Rao
ತಾಯಿ-ನವಜಾತ ಶಿಶು ಸಾವಿನ ಪ್ರಮಾಣ ತಗ್ಗಿಸಲು ತಾಲ್ಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ: ದಿನೇಶ್ ಗುಂಡೂರಾವ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com