ಜಾತಿ ಸಮೀಕ್ಷೆ: ಬೀದಿನಾಯಿ ದಾಳಿ ಆತಂಕ, ಗುರಿ ಮುಟ್ಟುವಲ್ಲಿ ಹೊಸಪೇಟೆ ಗಣತಿದಾರರಿಗೆ ಹಿನ್ನಡೆ..!

ಕೆಲ ದಿನಗಳ ಹಿಂದಷ್ಟೇ ಪಟ್ಟಣದ ಚಿತವಾಡಗಿಯಲ್ಲಿ ಬೀದಿ ನಾಯಿಗಳು ಗಣತಿದಾರರೊಬ್ಬರ ಮೇಲೆ ದಾಳಿ ನಡೆಸಿತ್ತು. ಘಟನೆ ಬೆನ್ನಲ್ಲೇ ಇತರೆ ಗಣತಿದಾರರು ಹೊಸಪೇಟೆಯಲ್ಲಿ ಸಮೀಕ್ಷೆ ನಡೆಸಲು ಭಯಪಡುತ್ತಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಹೊಸಪೇಟೆ: ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಗಣತಿದಾರರು ಬೀದಿ ನಾಯಿಗಳ ಭಯದಿಂದಾಗಿ ಹೊಸಪೇಟೆಯಲ್ಲಿ ಗುರಿ ಮುಟ್ಟುವಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ.

ಕೆಲ ದಿನಗಳ ಹಿಂದಷ್ಟೇ ಪಟ್ಟಣದ ಚಿತವಾಡಗಿಯಲ್ಲಿ ಬೀದಿ ನಾಯಿಗಳು ಗಣತಿದಾರರೊಬ್ಬರ ಮೇಲೆ ದಾಳಿ ನಡೆಸಿತ್ತು. ಘಟನೆ ಬೆನ್ನಲ್ಲೇ ಇತರೆ ಗಣತಿದಾರರು ಹೊಸಪೇಟೆಯಲ್ಲಿ ಸಮೀಕ್ಷೆ ನಡೆಸಲು ಭಯಪಡುತ್ತಿದ್ದಾರೆ.

ವಿಜಯನಗರ ಜಿಲ್ಲಾಡಳಿತವನ್ನು ಸಂಪರ್ಕಿಸಿ ಕಳವಳ ವ್ಯಕ್ತಪಡಿಸಲಾಗಿದೆ. ಆದರೂ, ಸಮಸ್ಯೆ ಪರಿಹರಿಸುವಲ್ಲಿ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಣತಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆ ಪ್ರಾರಂಭವಾಗುವುದಕ್ಕೂ ಮೊದಲೇ ನಾಯಿಗಳ ದಾಳಿ ತಡೆಗಟ್ಟು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವವ್ಲಿ ಜಿಲ್ಲಾಡಳಿತ ಮಂಡಳಿಯು ವಿಫಲವಾಗಿದೆ, ಇದರ ಪರಿಣಾಮವಾಗಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

File photo
ರಾಜಕೀಯ ಒತ್ತಡಕ್ಕೆ ಮಣಿದು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದ್ದಾರೆ: BJP ಟೀಕೆ

ಮನೆ-ಮನೆ ಸಮೀಕ್ಷೆ ನಡೆಸುವುದು ಕಷ್ಟಕರವಾಗತ್ತಿರುವ ಹಿನ್ನೆಲೆಯಲ್ಲಿ ಇದೀಗ ಕೆಲವು ಸಿಬ್ಬಂದಿಗಳು ತಕ್ಷಣದ ಕ್ರಮವನ್ನು ಕೋರುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ನಾನು ಇತ್ತೀಚೆಗೆ ಚಿತಾವಾಡಗಿಯಲ್ಲಿ ಸಮೀಕ್ಷೆ ನಡೆಸಲು ಹೋಗಿದ್ದೆ. ಈ ವೇಳೆ ಇದ್ದಕ್ಕಿದ್ದಂತೆ, ಮೂರು ಬೀದಿ ನಾಯಿಗಳು ಬೊಗಳಲು ಪ್ರಾರಂಭಿಸಿದವು, ಅವುಗಳಲ್ಲಿ ಒಂದು ನನ್ನ ಮೇಲೆ ದಾಳಿ ಮಾಡಿತು. ಅದೃಷ್ಟವಶಾತ್, ಕೆಲವು ಸ್ಥಳೀಯ ನಿವಾಸಿಗಳು ನನ್ನ ಸಹಾಯಕ್ಕೆ ಧಾವಿಸಿದರು ಎಂದು ಗಣತಿದಾರರೊಬ್ಬರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ನಾಯಿಗಳ ದಾಳಿ ಸಾಮಾನ್ಯವಾಗಿ ಹೋಗಿದೆ. ಜಿಲ್ಲಾಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಗಣತಿದಾರರು ಮನವಿ ಮಾಡಿದ್ದಾರೆ.

ಏತನ್ಮಧ್ಯೆ ಜಿಲ್ಲಾಡಳಿತವನ್ನು ದೂಷಿಸಿದ ಸಾಮಾಜಿಕ ಕಾರ್ಯಕರ್ತ ಕುಮಾರ್ ಕೆ ಅವರು, ಹೊಸಪೇಟೆಯಲ್ಲಿ ಬೀದಿ ನಾಯಿಗಳ ದಾಳಿ ಸಾಮಾನ್ಯವಾಗಿದೆ. ಬೀದಿ ನಾಯಿಗಳ ಸಂಖ್ಯೆಯನ್ನು ನೋಡಿ ಸರ್ವೇ ಸಿಬ್ಬಂದಿ ನನ್ನ ಪ್ರದೇಶಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಗಣತಿದಾರರು ಮಾತ್ರವಲ್ಲ; ಸಾರ್ವಜನಿಕರು ಕೂಡ ರಸ್ತೆಯಲ್ಲಿ ನಡೆದು ಸಾಗಲು ಭಯಪಡುತ್ತಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com