ಗಂಗಾವತಿಯಲ್ಲಿ BJP ಯುವ ಮೋರ್ಚಾ ಅಧ್ಯಕ್ಷನ ಹತ್ಯೆ: ನಾಲ್ವರು ಆರೋಪಿಗಳ ಬಂಧನ

ಗಂಗಾವತಿಯ ಲೀಲಾವತಿ ಆಸ್ಪತ್ರೆಯ ಮುಂಭಾಗ ಮಧ್ಯರಾತ್ರಿ ಕ್ರೌರ್ಯ ನಡೆದಿದ್ದು, ಮಧ್ಯರಾತ್ರಿ 2 ಗಂಟೆಗೆ ಕಾರಲ್ಲಿ ಅಗಮಿಸಿದ್ದ ದುಷ್ಕರ್ಮಿಗಳು ವೆಂಕಟೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.
BJP Yuva Morcha president
ಗಂಗಾವತಿಯ BJP ಯುವ ಮೋರ್ಚಾ ಅಧ್ಯಕ್ಷ
Updated on

ಕೊಪ್ಪಳ: ಜಿಲ್ಲೆಯ ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಬೆನ್ನತ್ತಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆ ಪ್ರಕರಣ ಸಂಬಂಧ ಐವರು ಆರೋಪಿಗಳ ಪೈಕಿ ನಾಲ್ವರು ಆರೋಪಿಗಳನ್ನು ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಧನಂಜಯ್, ಮೈಲಾರಿ ಅಲಿಯಾಸ್ ವಿಜಯ್,ಸಲೀಂ, ಭೀಮ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಧನಂಜಯ್, ಮೈಲಾರಿ ಅಲಿಯಾಸ್ ವಿಜಯ್, ಸಲೀಂ, ಭೀಮ ಸ್ವಯಂ ಪೊಲೀಸರ ಎದುರು ಶರಣಾಗಿದ್ದಾರೆ. ಇನ್ನುಳಿದ ಇಬ್ಬರು ಆರೋಪಿಗಳಾದ ಕಾರ್ತಿಕ್ ಮತ್ತು ಲಕ್ಷ್ಮಣ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಗಂಗಾವತಿಯ ಲೀಲಾವತಿ ಆಸ್ಪತ್ರೆಯ ಮುಂಭಾಗ ಮಧ್ಯರಾತ್ರಿ ಕ್ರೌರ್ಯ ನಡೆದಿದ್ದು, ಮಧ್ಯರಾತ್ರಿ 2 ಗಂಟೆಗೆ ಕಾರಲ್ಲಿ ಅಗಮಿಸಿದ್ದ ದುಷ್ಕರ್ಮಿಗಳು ವೆಂಕಟೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

BJP Yuva Morcha president
ಕೊಪ್ಪಳ: ಗಂಗಾವತಿಯಲ್ಲಿ BJP ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಹತ್ಯೆ

ಮೊನ್ನೆ ತಡರಾತ್ರಿ ಆಗಿದ್ದೇನು?

ಸ್ನೇಹಿತರೊಂದಿಗೆ ಊಟ ಮುಗಿಸಿದ ವೆಂಕಟೇಶ್ ದೇವಿ ಕ್ಯಾಂಪ್ ನಿಂದ ಗಂಗಾವತಿಗೆ ಹೋಗುತ್ತಿದ್ದ ವೇಳೆ ಬೈಕ್ ಫಾಲೋ ಮಾಡಿದ ದುಷ್ಕರ್ಮಿಗಳು ಕಾರಿನಿಂದ ವೆಂಕಟೇಶ್ ಇದ್ದ ಬೈಕ್ ಗೆ ಗುದ್ದಿಸಿದ್ದಾರೆ. ವೆಂಕಟೇಶ್ ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.

ವೆಂಕಟೇಶ್‌ ಕೊಲೆ ಘಟನೆ ಗಂಗಾವತಿ ಪಟ್ಟಣವನ್ನೇ ಬೆಚ್ಚಿಬಿಳಿಸಿದೆ. ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆ ಚುರುಕುಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com