
ಬೆಂಗಳೂರು: ಬಿಹಾರ ಚುನಾವಣೆಯ ದಿನಾಂಕ ಹೊರಬೀಳುತ್ತಿದ್ದಂತೆ, ವಿಶೇಷವಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಬಿಹಾರಿಗಳನ್ನು ಸೆಳೆಯಲು ಅಲ್ಲಿನ ಪಕ್ಷದ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಜನ ಸುರಾಜ್ ಪಕ್ಷದ ಮನೋಜ್ ಭಾರತಿ, ಬಿಜೆಪಿ ಸಂಸದ ಮನೋಜ್ ತಿವಾರಿ ಅವರಂತಹ ನಾಯಕರು ಹೆಬ್ಬಾಳ, ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ. ಏಕೆಂದರೆ ಅಲ್ಲಿ ಹೆಚ್ಚಿನ ಸಂಖ್ಯೆಯ ಬಿಹಾರಿಗಳು ನೆಲೆಸಿದ್ದಾರೆ, ಬಿಹಾರಿಗಳನ್ನು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ಬಾರಿಗಿಂತ ಭಿನ್ನವಾಗಿ, ಕರ್ನಾಟಕದಲ್ಲಿ ಉಳಿದುಕೊಂಡಿರುವ ಸುಮಾರು 15 ಲಕ್ಷ ಬಿಹಾರಿಗಳು ಬಿಹಾರದ ರಾಜಕೀಯಲ್ಲಿ ಬದಲಾವಣೆ ತರುತ್ತಾರೆ ಎಂದು ಕರ್ನಾಟಕದ ಬಿಹಾರ ಮೂಲದ ಸಂಘವಾದ ಸಿದ್ಧಾರ್ಥ ಸಂಸ್ಕೃತಿ ಸಮಿತಿಯ ಪ್ರತಿನಿಧಿ ರಾಮ್ ಕೆವಲ್ ಸಿಂಗ್ ತಿಳಿಸಿದ್ದಾರೆ.
ಬಿಹಾರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಹೆಚ್ಚಿನ ಬಿಹಾರಿಗಳು ಬೆಂಗಳೂರಿನಲ್ಲಿದ್ದಾರೆ. ಬಿಹಾರದ ಭವಿಷ್ಯಕ್ಕಾಗಿ ಮತ ಚಲಾಯಿಸಲು ಅವರಿಗೆ ಸೂಚಿಸಲಾಗಿದೆ ಎಂದು ಸಿಂಗ್ ಹೇಳಿದರು.
ಬಿಹಾರ ಮತ್ತೆ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುತ್ತದೆ, ಆದರೆ ಯಾರನ್ನು ಅಧಿಕಾರಕ್ಕೆ ತರಲಾಗುತ್ತದೆ ಎಂಬುದು ನಿಗೂಢವಾಗಿದೆ . ಬಿಹಾರಗಲ್ಲಿ ಮದ್ಯ ನಿಷೇಧಿಸಲಾಗಿದ್ದರೂ, ಅದು ಮನೆಗಳಲ್ಲಿ ಕಂಡುಬರುತ್ತದೆ, ಇದು ಆತಂಕಕಾರಿ ಪ್ರವೃತ್ತಿಯಾಗಿದೆ ಎಂದು ಅವರು ಹೇಳಿದರು.
ಸಮಿತಿಯ ಮತ್ತೊಬ್ಬ ಪ್ರತಿನಿಧಿ, ಬಿಹಾರದಿಂದ ಅನೇಕ ಯುವಕರು ಬೆಂಗಳೂರಿಗೆ ಬಂದು ನಿರ್ಮಾಣ ಉದ್ಯಮದಲ್ಲಿ ದಿನಗೂಲಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಬಿಹಾರದಲ್ಲಿ ಸರ್ಕಾರಗಳು ಪ್ರಗತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರೆ, ಈ ಯುವಕರು ವಲಸೆ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ನವೆಂಬರ್ 6 ಮತ್ತು 11 ರಂದು ನಡೆಯಲಿರುವ ಎರಡು ಹಂತದ ಬಿಹಾರ ಚುನಾವಣೆಗೆ ಮುನ್ನ ಕರ್ನಾಟಕಕ್ಕೆ ಹೆಚ್ಚಿನ ನಾಯಕರು ಬರುವ ನಿರೀಕ್ಷೆಯಿದೆ.
Advertisement