
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 'ಬೆಳಕಿನ ಹಬ್ಬ' ದೀಪಾವಳಿ ಆಚರಣೆಯ ಕುರಿತು ಬೆಂಗಳೂರಿನ ಶ್ರೀಹರಿ ಕಾರನಾಥ್ ಸೆರೆಹಿಡಿದಿರುವ ಅತ್ಯಾಕರ್ಷಕ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.
ಕರ್ನಾಟಕ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ DGCA-ಪ್ರಮಾಣೀಕೃತ ಡ್ರೋನ್ ಪೈಲಟ್ ಆಗಿರುವ ಕಾರನಾಥ್, ಪಟಾಕಿಗಳಿಂದ ಆಗಸದಲ್ಲಿ ಮೂಡಿದ ಚಿತ್ತಾರಗಳು, ವಿದ್ಯುತ್ ದೀಪಗಳಿಂದ ಝಗಮಗಿಸಿದ ಬೆಂಗಳೂರನ್ನು ಡ್ರೋನ್ ಹೈಪರ್‌ಲ್ಯಾಪ್ಸ್ (Drone Hyperlapse)ಯಿಂದ ಸೆರೆ ಹಿಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಮಾತ್ರವಲ್ಲದೇ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಕರ್ಷಿಸಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ನಿರ್ಮಲಾ ಸೀತಾರಾಮನ್, ಇದು ಅತ್ಯಾದ್ಬುತವಾಗಿ ಮೂಡಿಬಂದಿದೆ. ಕ್ಯಾನ್ವಾಸ್ ಕಲಾತ್ಮಕವಾಗಿದೆ. ಉತ್ತಮ ಪ್ರಯತ್ನ" ಎಂದು ಸೀತಾರಾಮನ್ ಬರೆದುಕೊಂಡಿದ್ದಾರೆ.
Advertisement