file photo
ಸಂಗ್ರಹ ಚಿತ್ರ

ಕರ್ನೂಲ್ ಬಸ್ ದುರಂತ: ಎಚ್ಚೆತ್ತ ಸರ್ಕಾರ; ನಗರದಲ್ಲಿ ದಿಢೀರ್ ಕಾರ್ಯಾಚರಣೆ, 25ಕ್ಕೂ ಹೆಚ್ಚು ಖಾಸಗಿ ಬಸ್'ಗಳು ವಶಕ್ಕೆ

ಸಾರಿಗೆ ಇಲಾಖೆ ಅಧಿಕಾರಿಗಳು ವಿವಿಧ ಪ್ರದೇಶಗಳಿಂದ ನಗರದಕ್ಕೆ ಬಂದ ಖಾಸಗಿ ಬಸ್'ಗಳನ್ನು ಪರಿಶೀಲನೆ ನಡೆಸಿದೆ. ಈ ವೇಳೆ ನಿಯಮಗಳನ್ನು ಪಾಲಿಸದ 25ಕ್ಕೂ ಹೆಚ್ಚು ಖಾಸಗಿ ಬಸ್'ಗಳನ್ನು ವಶಪಡಿಸಿಕೊಂಡಿದ್ದಾರೆ.
Published on

ಬೆಂಗಳೂರು: ಕರ್ನೂಲ್ ಬಸ್ ಬೆಂಕಿ ದುರಂತ ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ನಗರದಲ್ಲಿ ಶುಕ್ರವಾರ ದಿಢೀರ್ ಕಾರ್ಯಾಚರಣೆ ನಡಸಿದೆ.

ಸಾರಿಗೆ ಇಲಾಖೆ ಅಧಿಕಾರಿಗಳು ವಿವಿಧ ಪ್ರದೇಶಗಳಿಂದ ನಗರದಕ್ಕೆ ಬಂದ ಖಾಸಗಿ ಬಸ್'ಗಳನ್ನು ಪರಿಶೀಲನೆ ನಡೆಸಿದೆ. ಈ ವೇಳೆ ನಿಯಮಗಳನ್ನು ಪಾಲಿಸದ 25ಕ್ಕೂ ಹೆಚ್ಚು ಖಾಸಗಿ ಬಸ್'ಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಸಾರಿಗೆ ಆಯುಕ್ತ ಓಂಕಾರೇಶ್ವರಿ ನೇತೃತ್ವದಲ್ಲಿ ಈ ಶೋಧ ನಡೆಸಲಾಯಿತು.

ಜಂಟಿ ಸಾರಿಗೆ ಆಯುಕ್ತರಾದ ಶೋಭಾ ಮತ್ತು ಗಾಯತ್ರಿ ಬೆಂಗಳೂರಿನ ಹೊರವಲಯದಲ್ಲಿ ದಿಢೀರ್ ತಪಾಸಣೆ ನಡೆಸಿದರು, ಕಾರ್ಯಾಚರಣೆಯು ಬೆಳಿಗ್ಗೆ 4 ಗಂಟೆಯಿಂದ ಬೆಳಿಗ್ಗೆ 10.30 ರವರೆಗೆ ನಡೆಯಿತು.

ರಾಜ್ಯ ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ 25 ಕ್ಕೂ ಹೆಚ್ಚು ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಓಂಕಾರೇಶ್ವರಿ ಹೇಳಿದ್ದಾರೆ.

file photo
ಕರ್ನೂಲ್ ಬಸ್ ಬೆಂಕಿ ದುರಂತ: ರಾಜ್ಯದ 6 ಮಂದಿ ಸಾವು

ತಮಿಳುನಾಡು, ಕೇರಳ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದಂತಹ ಇತರ ರಾಜ್ಯಗಳಲ್ಲಿ ನೋಂದಾಯಿಸಲಾದ ಈ ವಾಹನಗಳು ತಮ್ಮ ರಾಜ್ಯಗಳ ತೆರಿಗೆಗಳನ್ನು ಮಾತ್ರ ಪಾವತಿಸಿದ್ದವು, ಆದರೆ, ಕರ್ನಾಟಕ ರಾಜ್ಯ ರಸ್ತೆ ತೆರಿಗೆಯನ್ನು ಪಾವತಿಸದೆ ವಾಣಿಜ್ಯ ಸೇವೆಗಳನ್ನು ನಿರ್ವಹಿಸುತ್ತಿದ್ದವು. ಈ ಬಸ್‌ಗಳು ಅಖಿಲ ಭಾರತ ಪ್ರವಾಸಿ ಪರವಾನಗಿಗಳನ್ನು (AITP) ಹೊಂದಿದ್ದರೂ, ಪ್ರವಾಸಿ ಒಪ್ಪಂದದ ಸಾಗಣೆಯಾಗಿ ಕಾರ್ಯನಿರ್ವಹಿಸುವ ಬದಲು ವೈಯಕ್ತಿಕ ಪ್ರಯಾಣಿಕರನ್ನು ಕರೆದುಕೊಂಡು ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೀಟು ಸೇರಿದಂತೆ ಇತರೆ ಲೆಕ್ಕಾಚಾರಗಳ ಆಧಾರದ ಮೇಲೆ ನಿಯಮ ಉಲ್ಲಂಘಿಸಿದ ವಾಹನಗಳಿಂದ ಸುಮಾರು 1 ಕೋಟಿ ರೂ.ದಂಡವನ್ನು ವಿಧಿಸಬಹುದು ಎಂದು ಸಾರಿಗೆ ಇಲಾಖೆ ಹೇಳಿದೆ.

ಕಾರ್ಯಾಚರಣೆ ವೇಳೆ ಯಾವುದೇ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆಯಾಗಿಲ್ಲ. ಪ್ರಯಾಣಿಕರಿಗೆ ಬಿಎಂಟಿಸಿ ಹಾಗೂ ಇತರೆ ಖಾಸಗಿ ಬಸ್ ಗಳಿಂದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

file photo
Kurnool Bus Fire: ಬಸ್ಸನ್ನು ಅಕ್ರಮವಾಗಿ ಸ್ಲೀಪರ್ ಕೋಚ್ ಆಗಿ ಮಾರ್ಪಡಿಸಲಾಗಿತ್ತು; ದಾಖಲೆಗಳಿಂದ ಬಹಿರಂಗ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com