

ಬೆಂಗಳೂರು: ಈರುಳ್ಳಿ ಬೆಲೆ ಕುಸಿತದ ಕಾರಣ ಪಿಡಿಪಿಎಸ್ (ಪ್ರೈಸ್ ಡಿಫಿಷಿಯನ್ಸಿ ಪ್ರೊಕ್ಯುರ್‌ಮೆಂಟ್ ಸ್ಕೀಮ್) ಅಡಿ ಈರುಳ್ಳಿ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಕುರಿತು ಸಚಿವ ಶಿವಾನಂದ ಪಾಟೀಲ್ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಈರುಳ್ಳಿ ಬೆಲೆ ಕುಸಿತವಾಗಿದೆ. ಹೀಗಾಗಿ, ಪಿಡಿಪಿಎಸ್ ಅಡಿಯಲ್ಲಿ ಬೆಳೆಗಳ ಖರೀದಿಸಲು ಕೇಂದ್ರಕ್ಕೆ ಪತ್ರ ಬರೆಯುತ್ತೇವೆಂದು ಹೇಳಿದ್ದಾರೆ.
ವಿಜಯಪುರ, ಚಿತ್ರದುರ್ಗ, ವಿಜಯನಗರ, ಬೆಳಗಾವಿ, ಧಾರವಾಡ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ 2.05 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ರಾಜ್ಯವು 27 ಲಕ್ಷ ಟನ್ ಉತ್ಪಾದಿಸುತ್ತದೆ. ಬೆಳೆ ಕೊಯ್ಲಿಗೆ ಸಿದ್ಧವಾಗಿದೆ. ಆದರೆ ಅಕಾಲಿಕ ಮಳೆಯಿಂದ ಈರುಳ್ಳಿ ಹಾನಿಯಾಗಿದೆ. ಇದರಿಂದಾಗಿ ಬೆಲೆಗಳು ಕುಸಿದಿದೆ.
ಈ ನಡುವೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಕೆಲವರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (ಎಂಐಎಸ್) ಅಡಿಯಲ್ಲಿ ಈರುಳ್ಳಿ ಖರೀದಿಗೆ ಒಲವು ತೋರಿದರೆ, ಇತರರು ಪಿಡಿಪಿಎಸ್‌ಗೆ ಆದ್ಯತೆ ನೀಡಿದರು. ಆದ್ದರಿಂದ ಕೇಂದ್ರಕ್ಕೆ ಬರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
Advertisement