

ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಟೆಕ್ಕಿಯೊಬ್ಬರು ಲಾರಿ ಚಕ್ರಕ್ಕೆ ಸಿಲುಕಿ ಬ್ಯಾಂಕ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ.
ಮೃತ ಮಹಿಳೆಯನ್ನು ಪ್ರಿಯಾಂಕಾ ಕುಮಾರ್ ಪೂನಿಯಾ ಎಂದು ಗುರುತಿಸಲಾಗಿದೆ. ಯುವತಿ ಅಣ್ಣನ ಜೊತೆ ಬೈಕ್‍ನಲ್ಲಿ ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದಾವರಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ನಡೆದಿದೆ.
ಲೈಟ್ಸ್ ಮೆಕ್ಯಾನಿಕ್ ಕಂಪನಿ ಬಳಿ ಬೆಳಿಗ್ಗೆ 10.55 ರ ಸುಮಾರಿಗೆ ಆಕೆಯ ಸಹೋದರ ಮಾದವರ ಮೆಟ್ರೋ ನಿಲ್ದಾಣದಲ್ಲಿ ಆಕೆಯನ್ನು ಇಳಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಾಸನಪುರದ ಎಪಿಎಂಸಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದ ಟ್ರಕ್ ಒಂದು ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾಗ ಬಲಕ್ಕೆ ತಿರುಗಿತು. ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ನ ಹ್ಯಾಂಡಲ್‌ಗೆ ತಗುಲಿದೆ.
ಈ ವೇಳೆ ಬೈಕ್ ಸವಾರ ಸಮತೋಲನ ಕಳೆದುಕೊಂಡು ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಬಲಕ್ಕೆ ಬಿದ್ದ ಪ್ರಿಯಾಂಕಾ ಮೇಲೆ ಟ್ರಕ್‌ನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದರೆ, ಸಹೋದರ ಗಾಯಗೊಂಡರು. ಪ್ರಿಯಾಂಕ ಕುಮಾರಿ ಪೂನಿಯಾ, ದಾಸನಪುರದ ಆಲೂರು ಕ್ರಿಕೆಟ್ ಕ್ರೀಡಾಂಗಣದ ಬಳಿಯ ಹುಸ್ಕೂರು ಮುಖ್ಯರಸ್ತೆಯಲ್ಲಿರುವ ಆಲೂರು ಬಿಡಿಎ ಹಂತ 2 ರ ನಿವಾಸಿ. ಅವರು ತಮ್ಮ ಸಹೋದರ ನರೇಶ್ ಕುಮಾರ್ ಜೊತೆ ಬೈಕ್ ನಲ್ಲಿ (34) ಹಿಂದೆ ಕುಳಿತಿದ್ದರು.
ಓಲ್ಡ್ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾಳನ್ನು ಆಕೆಯ ಸಹೋದರ ದಿನ ನಿತ್ಯ ಡ್ರಾಪ್ ಮಾಡುತ್ತಿದ್ದರು. ಆಕೆಯ ತಂದೆ ಮಹಾವೀರ್ ಸಿಂಗ್ ಪೂನಿಯಾ ಅವರು ಸಾಗಣೆದಾರರು ಮತ್ತು ಆಲೂರು ಬಿಡಿಎ ಹಂತ 2 ನಿವಾಸಿ ಕಲ್ಯಾಣ ಸಂಘದ ಉಪಾಧ್ಯಕ್ಷರಾಗಿದ್ದಾರೆ.
ಟ್ರಕ್ ಚಾಲಕ ಗುಂಡಿ ತಪ್ಪಿಸಲು ಪ್ರಯತ್ನಿಸಿ ಹಠಾತ್ತನೆ ಬಲಕ್ಕೆ ತಿರುಗಿಸಿದಾಗ ತನ್ನ ಬೈಕ್‌ನ ಹ್ಯಾಂಡಲ್ ತಾಗಿಸಿದ, ಇದರಿಂದಾಗಿ ನಾನು ಮತ್ತು ನನ್ನ ಸಹೋದರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದರು ಎಂದು ನರೇಶ್ ಪೊಲೀಸರಿಗೆ ತಿಳಿಸಿದ್ದಾರೆ
ಎತ್ತಿನಹೊಳೆ ಯೋಜನೆಗಾಗಿ ಪೈಪ್ ಹಾಕುವ ಕೆಲಸದ ನಂತರ, ರಸ್ತೆಯನ್ನು ವೈಜ್ಞಾನಿಕವಾಗಿ ಸರಿಪಡಿಸಿಲ್ಲ ಎಂದು ಕಲ್ಯಾಣ ಸಂಘದ ಕಾರ್ಯದರ್ಶಿ ಶಶಿಧರ್ ಹೇಳಿದ್ದಾರೆ. ಎಪಿಎಂಸಿ ಮಾರುಕಟ್ಟೆಯನ್ನು ತಲುಪಲು ಟ್ರಕ್‌ಗಳು ನಿಯಮಿತವಾಗಿ ಈ ರಸ್ತೆಯನ್ನು ಬಳಸುವುದರಿಂದ ಗುಂಡಿಗಳು ರೂಪುಗೊಂಡಿವೆ. ಕಳೆದ ಒಂದು ವರ್ಷದಿಂದ, ಆಲೂರು ಬಿಡಿಎ ಹಂತ 2 ರಲ್ಲಿ ಸುಮಾರು 10 ಜನರು ಗಾಯಗೊಂಡಿದ್ದಾರೆ. ನರೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಅವರು ಹೇಳಿದರು.
ಸಂತ್ರಸ್ತೆ ಹೆಲ್ಮೆಟ್ ಧರಿಸದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಹರಿಯಾಣ ನೋಂದಾಯಿತ ವಾಹನವಾದ ಟ್ರಕ್ ವಶಪಡಿಸಿಕೊಳ್ಳಲಾಗಿದೆ, ಚಾಲಕನನ್ನು ಬಂಧಿಸಲಾಗಿದೆ. ಪ್ರಿಯಾಂಕಾ ಅವರ ಕುಟುಂಬ ಹರಿಯಾಣದವರಾಗಿದ್ದು, ಕಳೆದ ಎಂಟು ವರ್ಷಗಳಿಂದ ಆಲೂರಿನಲ್ಲಿ ವಾಸಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement