Bengaluru: ದೇಗುಲಕ್ಕೆ ನುಗ್ಗಿ ಚಪ್ಪಲಿ ಕಾಲಲ್ಲಿ ಮೂರ್ತಿಗೆ ಒದ್ದ ಬಾಂಗ್ಲಾ ಪ್ರಜೆ, ಸ್ಥಳೀಯರ 'ಧರ್ಮದೇಟು', Video

ಬೆಂಗಳೂರಿನ ದೇವರ ಬೀಸನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂಲಗಳ ಪ್ರಕಾರ ಅಕ್ಟೋಬರ್ 28, ಮಂಗಳವಾರದಂದು ಮುಸ್ಲಿಂ ವ್ಯಕ್ತಿಯೋರ್ವ ಈ ಪ್ರದೇಶದ ಖ್ಯಾತ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣಕ್ಕೆ ನುಗಿದ್ದ.
Bangladeshi man held for desecrating idol at Bengaluru temple
ದೇಗುಲಕ್ಕೆ ನುಗ್ಗಿ ಚಪ್ಪಲಿ ಕಾಲಲ್ಲಿ ಮೂರ್ತಿಗೆ ಒದ್ದ ಬಾಂಗ್ಲಾ ಪ್ರಜೆ
Updated on

ಬೆಂಗಳೂರು: ಬಾಂಗ್ಲಾದೇಶ ಮೂಲದ ವ್ಯಕ್ತಿಯೋರ್ವ ಬೆಂಗಳೂರಿನ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ನುಗ್ಗಿ ಚಪ್ಪಲಿಕಾಲಿನಲ್ಲೇ ದೇವರ ಮೂರ್ತಿಯನ್ನು ಒದ್ದಿರುವ ಘಟನೆ ಬುಧವಾರ ವರದಿಯಾಗಿದೆ.

ಬೆಂಗಳೂರಿನ ದೇವರ ಬೀಸನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೂಲಗಳ ಪ್ರಕಾರ ಅಕ್ಟೋಬರ್ 28, ಮಂಗಳವಾರದಂದು ಮುಸ್ಲಿಂ ವ್ಯಕ್ತಿಯೋರ್ವ ಈ ಪ್ರದೇಶದ ಖ್ಯಾತ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣಕ್ಕೆ ನುಗಿದ್ದ.

ಸ್ಥಳೀಯರ ಪ್ರಕಾರ ಈತ ಅದೇ ಪ್ರದೇಶದಲ್ಲಿ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ. ವಿಕಲಚೇತನನಾಗಿರುವ ಈತ ಮಂಗಳವಾರ ಕೂಗಾಡುತ್ತಾ ಇಸ್ಲಾಂ ಪರ ಘೋಷಣೆಗಳನ್ನು ಕೂಗುತ್ತಾ ದೇಗುಲದ ಬಳಿ ಇದ್ದ ಮೆಡಿಕಲ್ ಅಂಗಡಿ ಮುಂದೆ ಹಾಕಿದ್ದ ಗಣಪತಿ ದೇವರ ಫೋಟೊಗೆ ಸ್ಟಿಕ್​ನಿಂದ ಹೊಡೆದಿದ್ದ.

ಇದನ್ನು ಗಮನಿಸಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ಅಲ್ಲಿಂದ ಸೀದಾ ಹತ್ತಿರದಲ್ಲೇ ಇದ್ದ ವೇಣುಗೋಪಾಲಸ್ವಾಮಿ ದೇವಸ್ಥಾನದತ್ತ ಓಡಿದ್ದ. ದೇವಸ್ಥಾನ ಬಳಿ ಕೂಗಾಡಿ ಕಲ್ಲಿನಿಂದ ಗರಡುಗಂಬಕ್ಕೆ ಹೊಡೆದಿದ್ದ. ಕೈನಲ್ಲಿ ಆಯಿಲ್ ಮಾದರಿ ವಸ್ತುವನ್ನು ಹಿಡಿದು ಬಂದಿದ್ದ. ಬಳಿಕ ಚಪ್ಪಲಿ ಕಾಲಲ್ಲಿ ಗರ್ಭಗುಡಿಗೆ ನುಗ್ಗಿದ್ದಾನೆ. ದೇವರ ಮೂರ್ತಿ ಎಳೆದಾಡಿ ಚಪ್ಪಲಿ ಕಾಲಲ್ಲಿ ಒದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಆರೋಪಿಯವನ್ನು ಕಬೀರ್ ಎಂದು ಗುರುತಿಸಲಾಗಿದ್ದು ಈ ಬಾಂಗ್ಲಾದೇಶ ಪ್ರಜೆಯಂತೆ. ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಕಬೀರ ಇಲ್ಲಿ ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಆದರೆ ಮಂಗಳವಾರ ಬೆಳಗ್ಗೆ 8.30 ಸುಮಾರಿಗೆ ಇಸ್ಲಾಂ ಧರ್ಮದ ಪರ ಘೋಷಣೆ ಕೂಗುತ್ತಾ ನೀಚ ಕೃತ್ಯವೆಸಗಿದ್ದಾನೆ.

Bangladeshi man held for desecrating idol at Bengaluru temple
ಬೆಂಗಳೂರು: ಕಾರಿಗೆ Bike ಟಚ್ ಆಗಿದ್ದಕ್ಕೆ 2 ಕಿ.ಮೀ ಹಿಂಬಾಲಿಸಿ ಬೈಕ್‌ಗೆ ಗುದ್ದಿ ಸವಾರರನ್ನು ಕೊಂದ ದಂಪತಿ! Video

ಮದ್ಯದ ಅಮಲಿನಲ್ಲಿದ್ದ ಕಬೀರ್

ಇನ್ನು ಕಬೀರ್ ಮಂಡಲ್ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಕಂಠಪೂರ್ತಿ ಕುಡಿದು ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಧರ್ಮದೇಟು, ಪೊಲೀಸ್ ವಶಕ್ಕೆ ಆರೋಪಿ

45 ವರ್ಷದ ಕಬೀರ್​​ ಮಂಡಲ್ ನ ವಿಕೃತಿಯನ್ನು ಕಂಡು ದೇವಸ್ಥಾನ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಜಮಾಯಿಸಿದ ಸ್ಥಳೀಯರು ಆತನನ್ನು ಎಳೆದು ತಂದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ದೇವಾಲಯದ ಆವರಣದ ಹೊರಗೆ ಕಂಬಕ್ಕೆ ಕಟ್ಟಿ, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸದ್ಯ ಆರೋಪಿಯನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬಳಿ ಇದ್ದ ಆಯಿಲ್ ಬಾಟಲಿ, ಚಪ್ಪಲಿ, ಕಲ್ಲು ವಶಕ್ಕೆ ಪಡೆಯಲಾಗಿದೆ. ಆತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.

ಇನ್ನು ಪೊಲೀಸ್ ವಿಚಾರಣೆ ವೇಳೆ ಕಬೀರ್ ತಾನು ಬಾಂಗ್ಲಾದೇಶ ಪ್ರಜೆ ಎಂದು ಹೇಳಿಕೊಂಡಿದ್ದಾನೆ. ಇನ್ನು "ನಾವು ಮೊಂಡಲ್ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ, ನಂತರ ಅವರನ್ನು ಬಂಧಿಸಲಾಯಿತು. ಮೊಂಡಲ್ ಅವರ ದೂರಿನ ಮೇರೆಗೆ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com