
ಬೆಂಗಳೂರು: ಮಾಯಾನಗರಿ ಬೆಂಗಳೂರು ಜೀವನ ಅಂದುಕೊಂಡಷ್ಟು ಸುಲಭವಲ್ಲಾ. ಇಲ್ಲಿ ಕೋಟ್ಯಾಧೀಶರಿಂದ ಹಿಡಿದು ತುತ್ತು ಅನ್ನಕ್ಕಾಗಿ ಪರದಾಡುವ ಜನರಿದ್ದಾರೆ.
ಇದೇ ರೀತಿಯಲ್ಲಿ ಆಟೋ ಚಾಲಕರೊಬ್ಬರು ತನ್ನ ಮಗುವನ್ನು ಎದೆಗೆ ಕಟ್ಟಿಕೊಂಡು ನಗರದ ಜನನಿಬಿಡ ರಸ್ತೆಗಳಲ್ಲಿ ಆಟೋ ಚಾಲನೆ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮನತುಂಬುವ ಈ ವಿಡಿಯೋಗೆ ಅನೇಕ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಕ್ಲಿಪ್ ಅನ್ ಬೆಂಗಳೂರು ಮೂಲದ ಮಹಿಳೆ ರಿತು ಅವರು Instagram ನಲ್ಲಿ ಹಂಚಿಕೊಂಡಿದ್ದಾರೆ. 'ಆತ ಆಟೋ ಓಡಿಸಿ ಹಣ ಗಳಿಸುತ್ತಾರೆ ಆದರೆ, ತಾನು ಯಾರಿಗಾಗಿ ಜೀವಿಸುತ್ತಿದ್ದರೋ ಅವರನ್ನು ಇಟ್ಟುಕೊಂಡು' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ಲೈಕ್, ವೀವ್ಹ್ ಬಂದಿದ್ದು, ನೂರಾರು ಮಂದಿ ಶೇರ್ ಮಾಡುತ್ತಿದ್ದಾರೆ.
ವೀಡಿಯೊದಲ್ಲಿ ಆಟೋ ಡ್ರೈವರ್ ತನ್ನ ಮಗುವನ್ನು ಒಂದು ತೋಳಿನಲ್ಲಿ ಎದೆಗೆ ಕಟ್ಟಿಕೊಂಡು ಜನನಿಬಿಡ ರಸ್ತೆಗಳಲ್ಲಿ ತನ್ನ ಆಟೋವನ್ನು ಓಡಿಸುತ್ತಿರುವುದನ್ನು ಕಾಣಬಹುದು. ಈ ಮನಕರಗುವ ವಿಡಿಯೋಗೆ ನೆಟ್ಟಿಗರು ಮನಸೋತಿದ್ದು, ತಂದೆಯ ಸಮರ್ಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮಗೆ ಯಶಸ್ಸು ಸಿಗಲಿ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ನನ್ನ ತಂದೆ ಹೀಗೆ ಆಟೋ ಓಡಿಸುತ್ತಿದ್ದರು. ಮಿಸ್ ಯು, ಪಾ ಎಂದು ಮತ್ತೋರ್ವರು ಟ್ವೀಟ್ ಮಾಡಿದ್ದಾರೆ. ತನ್ನ ಕುಟುಂಬ ನಿರ್ವಹಣೆಗೆ ಒಬ್ಬ ವ್ಯಕ್ತಿ ಏನೆಲ್ಲಾ ಮಾಡುತ್ತದೆ ಎಂಬುದು ಇದು ನಿದರ್ಶನವಾಗಿದೆ. ನಿಮಗೆ ಹೆಚ್ಚಿನ ಶಕ್ತಿ ಬರಲಿ, ಸೂಪರ್ ಡ್ಯಾಡ್" ಮುಂತಾದ ಹೇಳಿಕೆಗಳೊಂದಿಗೆ ನೆಟ್ಟಿಗರು ಆಟೋ ಡ್ರೈವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement