
ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾನುವಾರ ತಮ್ಮ ಬೈಕ್ ನಲ್ಲಿ ನಗರ ಸುತ್ತಾಡಿದ್ದಾರೆ.
ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿಯವರೆಗೂ ತಾವೇ ಬೈಕ್ ಓಡಿಸಿಕೊಂಡು ಹೋಗಿದ್ದಾರೆ. ತದನಂತರ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ಬಿಡುವಿಲ್ಲದ ವೇಳಾಪಟ್ಟಿ ನಡುವೆ ಇಂದು ನನ್ನ ಯೌವ್ವನ ದಿನಗಳನ್ನು ಮೆಲುಕು ಹಾಕಲು ಸ್ವಲ್ಪ ಸಮಯ ತೆಗೆದುಕೊಂಡೆ. ನನ್ನ ಬೈಕ್‌ನಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿನ ಬೀದಿಗಳಲ್ಲಿ ಸುತ್ತಾಡಿದೆ ಎಂದು ಬರೆದುಕೊಂಡಿದ್ದಾರೆ.
ಇದು ಕೇವಲ ಒಂದು ರೈಡ್ ಗಿಂತಲೂ ಹೆಚ್ಚಾಗಿ ನಗರದೊಂದಿಗೆ ಮರು ಸಂಪರ್ಕಕ್ಕೆ ಮತ್ತು ನಮ್ಮ ನಾಗರಿಕರು ಎದುರಿಸುತ್ತಿರುವ ಗುಂಡಿಗಳಂತಹ ದೈನಂದಿನ ಸವಾಲುಗಳನ್ನು ನೇರವಾಗಿ ವೀಕ್ಷಿಸಲು ಒಂದು ಅವಕಾಶವಾಗಿತ್ತು.
ನಾವು ಅಲ್ಲಿದ್ದೇವೆ, ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ ಮತ್ತು ಉತ್ತಮ ಬೆಂಗಳೂರನ್ನು ನಿರ್ಮಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
Advertisement