
ಬೆಂಗಳೂರು: ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುವಾಗ ಪೋಷಕರು ತುಂಬಾ ಜಾಗರೂಕರಾಗಿರಬೇಕು.. ಇಲ್ಲವಾದಲ್ಲಿ ಈ ಬಾಲಕನಿಗೆ ಆದ ಸ್ಥಿತಿಯೇ ಆಗುತ್ತದೆ.
ಹೌದು... ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಇದೀಗ ಪೋಷಕರ ಆತಂಕಕ್ಕೆ ಕಾರಣವಾಗಿದೆ. ಸನ್ ರೂಫ್ ಸಹಿತ ಕಾರಿನಲ್ಲಿ ತೆರಳುತ್ತಿದ್ದ ಬಾಲಕನೋರ್ವ ಸನ್ ರೂಫ್ ನಿಂದ ತಲೆ ಹೊರಗೆ ಹಾಕಿದ್ದಾಗ ರಸ್ತೆಯಲ್ಲಿದ್ದ ರೋಡ್ ಓವರ್ ಹೆಡ್ ಬ್ಯಾರಿಕೇಡ್ ಆತನ ತಲೆಗೆ ತಗುಲಿದೆ.
ಈ ವೇಳೆ ಕೂಡಲೇ ಬಾಲಕ ಕಾರಿನೊಳಗೇ ಕುಸಿದಿದ್ದು, ಬಾಲಕ ಕುಸಿಯುತ್ತಿದ್ದಂತೆಯೇ ಕಾರು ನಿಲ್ಲಿಸಿದ ಚಾಲಕ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Advertisement