'ಇದ್ರೆ ನೆಮ್ದಿಯಾಗಿರ್ಬೇಕು': 'ನಂಗೆ ಒಂಚೂರು ವಿಷ ಬೇಕು'... ನಟ Darshan ಬೇಡಿಕೆಗೆ ಕೋರ್ಟ್ ಶಾಕ್! ಅಗಿದ್ದೇನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಆರೋಪಿ ನಟ ದರ್ಶನ್, ಕೋರ್ಟ್ ನಲ್ಲಿ ಜಡ್ಜ್ ಮುಂದೆ ತನಗೆ ವಿಷಬೇಕು ಎಂದು ಕೇಳಿದ್ದಾರೆ.
Depressed Actor Darshan Spends Sleepless Night in Parappana Agrahara
ನಟ ದರ್ಶನ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಇತ್ತೀಚೆಗಷ್ಟೇ 'ಇದ್ರೆ ನೆಮ್ದಿಯಾಗಿರ್ಬೇಕು' ಹಾಡು ಹಾಡಿದ್ದ ನಟ ದರ್ಶನ್ ಈಗ ಕೋರ್ಟ್ ನಲ್ಲಿ ನಂಗೆ ವಿಷಬೇಕು ಎಂದು ಕೇಳಿರುವ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಆರೋಪಿ ನಟ ದರ್ಶನ್, ಕೋರ್ಟ್ ನಲ್ಲಿ ಜಡ್ಜ್ ಮುಂದೆ ತನಗೆ ವಿಷಬೇಕು ಎಂದು ಕೇಳಿದ್ದಾರೆ. ನಟ ದರ್ಶನ್ ಬೇಡಿಕೆ ಕೇಳಿದ ಜಡ್ಜ್ ಕೂಡ ಶಾಕ್ ಆಗಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೇ ಸವಲತ್ತು ಸಿಗುತ್ತಿಲ್ಲ. ಇದರಿಂದ ದರ್ಶನ್ ಹೈರಾಣಾಗಿ ಹೋಗಿದ್ದಾರೆ. ಈ ಕಾರಣದಿಂದಲೇ ದರ್ಶನ್ (Darshan) ಅವರು ಜಡ್ಜ್ ಎದುರು ಬೇಡಿಕೆ ಒಂದನ್ನು ಇಟ್ಟಿದ್ದು, ‘ನನಗೆ ವಿಷ ನೀಡಲು ಆದೇಶಿಸಿ’ ಎಂದು ಜಡ್ಜ್ ಎದುರೇ ಕೇಳಿದ್ದಾರೆ.

ದರ್ಶನ್ ಬೇಡಿಕೆ ಕೇಳಿ ಜಡ್ಜ್ ಒಮ್ಮೆ ಶಾಕ್ ಆಗಿದ್ದು, ‘ಹಾಗೆಲ್ಲ ಕೇಳಬಾರದು’ ಎಂದು ಜಡ್ಜ್ ದರ್ಶನ್​ಗೆ ಕಿವಿ ಮಾತು ಹೇಳಿದ್ದಾರೆ.

Depressed Actor Darshan Spends Sleepless Night in Parappana Agrahara
ದರ್ಶನ್ ನಟನೆಯ 'ದಿ ಡೆವಿಲ್' ಹಾಡು 'ಇದ್ರೆ ನೆಮ್ದಿಯಾಗ್ ಇರ್ಬೇಕ್' ಸದ್ಯಕ್ಕೆ ನಂ.1

ದರ್ಶನ್ ಬೇಡಿಕೆ ಏನು? ಸಮಸ್ಯೆಗಳೇನು?

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಇಡಲಾಗಿದೆ. ವಿಶೇಷ ಸವಲತ್ತು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಿನ ಕಠಿಣ ನಿಯಮಗಳಿಂದ ಅವರಿಗೆ ನರಕಯಾತನೆ ಉಂಟಾಗುತ್ತಿದೆ. ಹೆಚ್ಚುವರಿ ದಿಂಬು ಹಾಗೂ ಬೇಡ್​​ಶೀಟ್​ಗಾಗಿ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ವಿಡಿಯೋ ಕಾಲ್​ ಮೂಲಕ ದರ್ಶನ್ ವಿಚಾರಣೆಗೆ ಹಾಜರಾದರು. ಆಗ ಅವರು, ಮೊದಲಿಗೆ ಕೈ ಎತ್ತಿ ‘ಒಂದು ಮನವಿ ಇದೆ’ ಎಂದು ಹೇಳಿದ್ದಾರೆ. ಮನವಿ ಏನು ಎಂದು ಕೇಳಿದಾಗ, ದರ್ಶನ್ ಕೊಟ್ಟ ಉತ್ತರ ಜಡ್ಜ್​ಗೆ ಶಾಕ್ ತಂದಿತು.

‘ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ನೀಡಲಿ. ಕೋರ್ಟ್​​ನಿಂದಲೇ ಈ ಆದೇಶ ನೀಡಬೇಕು’ ಎಂದು ದರ್ಶನ್ ಮನವಿ ಮಾಡಿದ್ದಾರೆ. ಆಗ ಜಡ್ಜ್ಜ್ ‘ಹಾಗೆಲ್ಲಾ ನೀವು ಕೇಳುವಂತಿಲ್ಲ’ ಎಂದು ಹೇಳಿದ್ದಾರೆ.

‘ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ’ ಎಂದು ವಿಚಾರಣೆಯನ್ನು 3 ಗಂಟೆಗೆ ಮುಂದೂಡಿದ್ದಾರೆ.

Depressed Actor Darshan Spends Sleepless Night in Parappana Agrahara
ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ?: ಹಾಸಿಗೆ, ದಿಂಬು ಬೇಡಿಕೆ; ಸೆಪ್ಟೆಂಬರ್ 9ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್!

ಏನಿದು ಪ್ರಕರಣ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಕಳೆದ ವರ್ಷ ಅರೆಸ್ಟ್ ಆಗಿದ್ದರು. ಆ ಬಳಿಕ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್​​ನಲ್ಲಿ ಪ್ರಶ್ನೆ ಮಾಡಿತ್ತು. ಸುಪ್ರೀಂಕೋರ್ಟ್​ ದರ್ಶನ್ ಅವರ ಜಾಮೀನನ್ನು ರದ್ದು ಮಾಡಿತು. ಅಲ್ಲದೆ, ಅವರಿಗೆ ಯಾವುದೇ ವಿಶೇಷ ಸವಲತ್ತು ಸಿಗಬಾರದು ಎಂದು ಎಚ್ಚರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com