ಭಾರೀ ಮಳೆಗೆ ನಗರದಲ್ಲಿ 16 ಮರಗಳು ಧರೆಗೆ: ಹಲವೆಡೆ ಸಂಚಾರ ಅಸ್ತವ್ಯಸ್ತ

ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ರಸ್ತೆಯಲ್ಲಿ ಮರ ಬಿದ್ದು ಸುಮನಹಳ್ಳಿ ಕಡೆಗೆ ಸಾಗುವ ಸಂಚಾರ ಅಸ್ತವ್ಯಸ್ತಗೊಂಡಿತ್ತು.
A gulmohar tree uprooted due to heavy rain and wind on the intervening night of Wednesday and Thursday in Rajajinagar
ಭಾರೀ ಮಳೆ ಮತ್ತು ಗಾಳಿಗೆ ರಾಜಾಜಿನಗರದಲ್ಲಿ ಧರೆಗುರುಳಿದ ಭಾರೀ ಗಾತ್ರದ ಮರ.
Updated on

ಬೆಂಗಳೂರು: ಬುಧವಾರ ತಡರಾತ್ರಿ ನಗರದಲ್ಲಿ 52.8 ಮಿಮೀ ಮಳೆಯಾಗಿದ್ದು, ಭಾರೀ ಮಳೆಗೆ 16 ಮರಗಳು ಧರೆಗುರುಳಿ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅರಣ್ಯ ವಿಭಾಗದಲ್ಲಿ 52 ದೂರುಗಳು ದಾಖಲಾಗಿದ್ದು, 36 ಮರದ ಕೊಂಬೆಗಳು ಧರೆಗುರುಳಿವೆ. ರಾಜಾಜಿನಗರದ 4ನ ಬ್ಲಾಕ್ ನಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಪರಿಣಾಮ 5 ಕಾರುಗಳು, ಒಂಟು ಟಾಟಾ ಏಸ್ ಮತ್ತು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದು 3 ದ್ವಿಚಕ್ರ ವಾಹನಗಳು, ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್'ನ್ನು ಹಾನಿಗೊಳಿಸಿದೆ ಎಂದು ತಿಳಿದುಬಂದಿದೆ.

ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ರಸ್ತೆಯಲ್ಲಿ ಮರ ಬಿದ್ದು ಸುಮನಹಳ್ಳಿ ಕಡೆಗೆ ಸಾಗುವ ಸಂಚಾರದ ಮೇಲೆ ಪರಿಣಾಮ ಬೀರಿತ್ತು.

ಕಸ್ತೂರಿನಗರ, ಹೆಬ್ಬಾಳ, ದೊಮ್ಮಲೂರಿನ ಬಳಿಯ ಎಸಿಎಸ್ ಸೆಂಟರ್, ವರ್ತೂರು-ಗುಂಜೂರು ರಸ್ತೆ, ಹೊರಮಾವು ಮತ್ತು ಹೆಬ್ಬಾಳ ಮುಂತಾದ ಹಲವಾರು ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ನೀರು ನಿಂತ ಕಾರಣ ಸಂಚಾರ ನಿಧಾನವಾಗಿತ್ತು. ಇದಲ್ಲದೆ, ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ ಸಂಚಾರ ದಟ್ಟಣೆ ಸಮಸ್ಯೆಗಳು ಕಂಡು ಬಂದಿತ್ತು. ತಗ್ಗು ಪ್ರದೇಶಗಳಲ್ಲಿನ ಕೆಲವು ಮನೆಗಳಿಗೂ ನೀರು ನುಗ್ಗಿ, ಜನರು ಸಮಸ್ಯೆ ಎದುರಿಸುವಂತಾಗಿತ್ತು.

A gulmohar tree uprooted due to heavy rain and wind on the intervening night of Wednesday and Thursday in Rajajinagar
ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮರ ಬಿದ್ದು ಮನೆ, ವಾಹನಗಳಿಗೆ ಹಾನಿ, ಹಲವು ರಸ್ತೆಗಳು ಜಲಾವೃತ

ಹೊರಮಾವುವಿನ ಸಾಯಿ ಲೇಔಟ್‌ನಲ್ಲಿ ನೀರು ನಿಲ್ಲದಂತೆ ಮಾಡಲು ಆಯುಕ್ತ ಡಿ ಎಸ್ ರಮೇಶ್ ಅವರು 13.36 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಕಾರ್ಯಗಳನ್ನು ಪರಿಶೀಲಿಸಿದರು,

ಕಾಮಗಾರಿ ವೇಳೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ನೈಋತ್ಯ ರೈಲ್ವೆ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಆಯುಕ್ತರು ನಿರ್ದೇಶಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com