
ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ತುಂಗಭದ್ರಾ ನದಿಯಲ್ಲಿ ತನ್ನ 5 ವರ್ಷದ ಮಗಳನ್ನು ಚಿತ್ರಹಿಂಸೆ ನೀಡಿ ಕೊಂದ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ವಿವಾಹೇತರ ಸಂಗಾತಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ಪ್ರಕಾರ, ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದ ಅನ್ವೇರಿಯ ನಿವಾಸಿಗಳಾದ ಅಣ್ಣಪ್ಪ ಮತ್ತು ಜ್ಯೋತಿ ಆಗಸ್ಟ್ 2ರಂದು ಮಗುವನ್ನು ದೈಹಿಕವಾಗಿ ಚಿತ್ರಹಿಂಸೆ ನೀಡಿ ತುಂಗಭದ್ರಾ ನದಿಗೆ ಜೀವಂತವಾಗಿ ಎಸೆದು ಕೊಂದಿದ್ದರು. ಜ್ಯೋತಿ ಮಂಜುನಾಥ್ ಎಂಬುವರ ಜೊತೆ ಮದುವೆಯಾಗಿದ್ದು ದಂಪತಿಗೆ ಮೂರು ಮಕ್ಕಳಿದ್ದರು. ಈ ಮಧ್ಯೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿಗೆ ಅಲ್ಲಿ ಅಣ್ಣಪ್ಪ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ನಂತರ ಜ್ಯೋತಿ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಅಣ್ಣಪ್ಪ ಜೊತೆ ವಾಸಿಸಲು ಕಿರಿಯ ಮಗುವನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಳು.
ಈ ಮೂವರು ಗುಡ್ಡದ ಅನ್ವೇರಿಯಲ್ಲಿ ವಾಸಿಸುತ್ತಿದ್ದರು. ಜ್ಯೋತಿ ಮತ್ತು ಅಣ್ಣಪ್ಪ ತಮ್ಮ ಸಂಬಂಧದ ಬಗ್ಗೆ ಸುತ್ತಮುತ್ತಲಿನ ಎಲ್ಲರಿಗೂ ಹುಡುಗಿ ಹೇಳುತ್ತಿದ್ದಾಳೆಂದು ಹೆದರಿ ಅವಳನ್ನು ಕೊಲ್ಲಲು ನಿರ್ಧರಿಸಿದ್ದಾರೆ. ಮೊದಲಿಗೆ ಮಗುವನ್ನು ಕ್ರೂರವಾಗಿ ಹಿಂಸಿಸಿದ್ದಾರೆ. ಮಗುವಿನ ಕೈಗಳನ್ನು ಕಟ್ಟಿ ಕುದಿಯುವ ನೀರನ್ನು ಸುರಿದಿದ್ದಾರೆ. ಮಗು ನೋವಿನಿಂದ ಕಿರುಚಿಕೊಂಡರು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ನಂತರ ಹೆದರಿದ ಜೋಡಿ ದೇಹದಾದ್ಯಂತ ಸುಟ್ಟುಗಾಯಗಳಾಗಿ ಮಗು ಅಳುತ್ತಿದ್ದರೂ ಎರಡು ದಿನ ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಬಳಿಕ ಮಗುವನ್ನು ಜೀವಂತವಾಗಿ ನದಿಗೆ ಎಸೆದಿದ್ದಾರೆ ಎಂದು ಯಶೋಧಾ ವಂಟಗೋಡಿ ಹೇಳಿದರು.
ಆಗಸ್ಟ್ 8ರಂದು, ಹಾವೇರಿ ತಾಲ್ಲೂಕಿನ ಗುತ್ತಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜ್ಯೋತಿಯ ಪತಿ ಮಂಜುನಾಥ್ ನೀಡಿದ ದೂರಿನ ಮೇರೆಗೆ, ಅಣ್ಣಪ್ಪ ಮತ್ತು ಜ್ಯೋತಿ ವಿರುದ್ಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
Advertisement