
ಬೆಳಗಾವಿ: ಬೆಳಗಾವಿಯ ಸದಾಶಿವನಗರದ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತಳನ್ನು ಗೋಕಾಕ್ ನ ಘಟಪ್ರಭಾ ಗ್ರಾಮದ ಸುಮಿತ್ರಾ ಗೋಕಾಕ್ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಟಿಫನ್ ತೆಗೆದುಕೊಂಡು ರೂಮ್ ಗೆ ಹೋಗಿದ್ದ ಸುಮಿತ್ರಾ ಎಷ್ಟು ಹೊತ್ತಾದರೂ ಹೊರಗೆ ಬಾರದರೆ ಇದ್ದಿದ್ದರಿಂದ ಆತಂಕಗೊಂಡ ಸಹಪಾಠಿಗಳು ವಾರ್ಡನ್ ಗೆ ವಿಷಯ ತಿಳಿಸಿದ್ದಾರೆ. ನಂತರ ವಿದ್ಯಾರ್ಥಿನಿ ಸುಮಿತ್ರಾ ತಂದೆ, ಸಂಬಂಧಿಕರ ಸಮ್ಮುಖದಲ್ಲಿ ಹಾಸ್ಟೆಲ್ ರೂಮ್ ಬಾಗಿಲು ಹೊಡೆದು ನೋಡಿದಾಗ ಮಗಳು ನೇಣು ಬಿಗುದುಕೊಂಡಿರುವುದು ಕಾಣಿಸಿದೆ. ಈ ದೃಶ್ಯವನ್ನು ನೋಡಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಕೊಠಡಿಯಲ್ಲಿ ಪರಿಶೀಲನೆ ನಡೆಸಿದಾಗ ಡೆತ್ ನೊಟ್ ಪತ್ತೆಯಾಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆಟ್ ನೋಟ್ ನಲ್ಲಿ ಸುಮಿತ್ರಾ ಬರೆದಿರುವುದು ಪತ್ತೆಯಾಗಿದೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement