
ಬೆಂಗಳೂರು: ಬೆಂಗಳೂರು ನಗರ ನಿರ್ವಹಣೆ ಕುರಿತು ಪಾಲಿಕೆ ವಿರುದ್ಧ ತಮ್ಮ ವಾಗ್ದಾಳಿಯನ್ನು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ಮುಂದುವರೆಸಿದ್ದು, ಬೆಂಗಳೂರು ಕೊಳಕಾಗಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಸಮರ್ಥತೆಯೇ ಕಾರಣ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಗರಿಕ ಕೆಲಸದ ಪ್ರಜ್ಞೆಯ ಕೊರತೆ ಮತ್ತು ನಗರದ ಕಸರಾಶಿಗಳನ್ನು ನಿರ್ವಹಿಸುವಲ್ಲಿ ಪಾಲಿಕೆಯ ಅಸಮರ್ಥತೆಯು ನಮ್ಮ ನಗರವನ್ನು ಕೊಳಕಾಗಿಸಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ನಿಲ್ಲಿಸಬೇಕು. ಬ್ಲಾಕ್ ಸ್ಪಾಟ್ ಗಳನ್ನು ಸೃಷ್ಟಿಸದೆ ಸಹಕರಿಸಬೇಕೆಂದು ನಾಗರೀಕರಿಗೆ ಕರೆ ನೀಡಿದ್ದಾರೆ.
ನಗರವನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರಿಗೆ ಉತ್ತಮ ಉಪಕರಣಗಳು ಮತ್ತು ತರಬೇತಿಯನ್ನು ನೀಡಬೇಕೆಂದೂ ಒತ್ತಾಯಿಸಿದ್ದಾರೆ. ವಲಯ ಆಯುಕ್ತರು ಘನ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.
Advertisement