Bengaluru: ವಾಲಿದ 5 ಅಂತಸ್ತಿನ ಕಟ್ಟಡ, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ! Video

ಕೊರಮಂಗಲದಲ್ಲಿ ಸಂಪೂರ್ಣವಾಗಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದ ಕಟ್ಟಡವೊಂದು ಕುಸಿಯುವ ಭೀತಿ ಎದುರಾಗಿದೆ.
building in Koramangala tilted
ವಾಲಿಕೊಂಡಿರುವ ಕಟ್ಟಡ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದ್ದು, ಕಟ್ಟಡ ಒಂದು ಬದಿಗೆ ವಾಲಿಕೊಂಡಿರುವುದು ಅಕ್ಕಪಕ್ಕದ ನಿವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ.

ಹೌದು.. ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಗಳ ಹಾವಳಿ ಇನ್ನೂ ನಿಂತಿಲ್ಲ, ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ಕೊರಮಂಗಲದಲ್ಲಿ ಸಂಪೂರ್ಣವಾಗಿ ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದ್ದ ಕಟ್ಟಡವೊಂದು ಕುಸಿಯುವ ಭೀತಿ ಎದುರಾಗಿದೆ.

ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲದ 1ನೇ ಬ್ಲಾಕ್ ನ ವೆಂಕಟಾಪುರದಲ್ಲಿ15X50 ಅಡಿ ಅಥವಾ 750 ಚದರ ಅಡಿ ಜಾಗದಲ್ಲಿ ನಿರ್ಮಾಣವಾಗಿರುವ ಕಟ್ಟಡ ವಾಲಿಕೊಂಡಿದೆ. ನೆಲಮಹಡಿ ಸೇರಿದಂತೆ 5 ಅಂತಸ್ತುಗಳ ಕಟ್ಟಡ ಕುಸಿಯುವ ಆತಂಕ ಎದುರಾಗಿದೆ.

5 ಅಂತಸ್ತಿನ ಕಟ್ಟಡವೊಂದು ಒಂದು ಬದಿಗೆ ವಾಲಿದ್ದು, ನೆರೆಹೊರೆಯವರು ಮತ್ತು ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ನಿಯಮ ಮೀರಿ ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದು, ಕಟ್ಟಡ ವಾಲಿಕೊಳ್ಳುತ್ತಲೇ ಕಟ್ಟಡದ ಮಾಲೀಕರು ತಾವೇ ಅದನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

building in Koramangala tilted
ಬೆಂಗಳೂರು: ಫರ್ನಿಚರ್ ಶಾಪ್‍ನಲ್ಲಿ ಭಾರೀ ಅಗ್ನಿ ಅವಘಡ, ಕೋಟ್ಯಂತರ ರೂ ಮೌಲ್ಯದ ವಸ್ತುಗಳು ಭಸ್ಮ

ಗೃಹ ಪ್ರವೇಶ ಕೂಡ ಆಗದ ಕಟ್ಟಡ

ಹೊಸದಾಗಿ ನಿರ್ಮಾಣವಾಗಿದ್ದ ಈ ಕಟ್ಟಡ ಇನ್ನೂ ಪೂರ್ಣಗೊಂಡಿರಲಿಲ್ಲ. ಗೃಹಪ್ರವೇಶ ಕೂಡ ಆಗಿರಲಿಲ್ಲ. ಕಟ್ಟಡದ ಸಾಕಷ್ಟು ಕೆಲಸಗಳು ಬಾಕಿ ಇದ್ದವು. ಆದಾಗಲೇ ಕಟ್ಟಡ ವಾಲಿಕೊಂಡಿದೆ. ಮಂಜೂರಾತಿ ನಕ್ಷ ಉಲ್ಲಂಘನೆ ಮಾಡಿ 5 ಅಂತಸ್ತಿನವರಗೆ ಕಟ್ಟಡ ಕಟ್ಟಲಾಗಿದೆ ಎಂದು ಆರೋಪಿಸಲಾಗಿದೆ.

ಯಾವುದೇ ಕ್ಷಣದಲ್ಲೂ ಕುಸಿಯುವ ಭೀತಿ

ಕಟ್ಟಡದ ಅಡಿಪಾಯ ಮತ್ತು ಪಿಲ್ಲರ್ ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಟ್ಟಡ ಒಂದು ಬದಿಗೆ ವಾಲಿಕೊಂಡಿದೆ. ಇನ್ನು ವಿಚಾರ ತಿಳಿಯುತ್ತಳೇ ಸ್ಥಳಕ್ಕೆ ದೌಡಾಯಿಸಿರುವ ಮಡಿವಾಳ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಅಂತೆಯೇ ಸ್ಥಳಕ್ಕಾಗಮಿಸಿದ ಸ್ಥಳೀಯ ಬಿಜಿಎ ಅಧಿಕಾರಿಗಳು ಜೆಸಿಬಿ ಮೂಲಕ ಕಟ್ಟಡ ತೆರವು ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಮುಂಜಾಗ್ರತಾ ಕ್ರಮ

ಇನ್ನು ಕಟ್ಟಡ ಅಕ್ಕಪಕ್ಕದ ಕಟ್ಟಡಗಳ ಮೇಲೆ ಬೀಳದಂತೆ ಮುಂಜಾಗ್ರತಾ ಕ್ರಮವಾಗಿ ಕಟ್ಟಡಕ್ಕೆ ಅಕ್ಕಪಕ್ಕದ ಕಟ್ಟಡಗಳಿಂದ ಕಬ್ಬಿಣದ ರಾಡ್ ಗಳನ್ನು ಅಡ್ಡಲಾಗಿ ನಿಲ್ಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com