ವಾಣಿಜ್ಯ-ಕೈಗಾರಿಕಾ ವಲಯಕ್ಕೆ ಗುಡ್ ನ್ಯೂಸ್: ಮುಂದಿನ 2 ವರ್ಷಗಳ ಕಾಲ DERS ಯೋಜನೆ ವಿಸ್ತರಣೆ

ಈ ಮೊದಲು ಈ ಯೋಜನೆಯಿಂದ ಹೊರಗಿದ್ದ 'ಓಪನ್ ಆಕ್ಸೆಸ್' (ಮುಕ್ತ ಪ್ರವೇಶ)ಗ್ರಾಹಕರಿಗೂ ಈಗ ಈ ಯೋಜನೆಯ ಲಾಭ ಪಡೆಯಲು ಅವಕಾಶ ನೀಡಲಾಗಿದೆ.
File photo
ವಿದ್ಯುತ್ ಪೂರೈಕೆ (ಸಂಗ್ರಹ ಚಿತ್ರ)online desk
Updated on

ಬೆಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಇತ್ತೀಚೆಗೆ (ಮಾರ್ಚ್ 31, 2026) ಮಹತ್ವದ ಆದೇಶ ಹೊರಡಿಸಿದ್ದು, ರಿಯಾಯಿತಿ ವಿದ್ಯುತ್ ದರ ಯೋಜನೆಯನ್ನು (DERS) ಮುಂದಿನ ಎರಡು ವರ್ಷಗಳ ಕಾಲ ಅಂದರೆ 2026-27 ಮತ್ತು 2027-28ನೇ ಹಣಕಾಸು ವರ್ಷಗಳವರೆಗೆ ವಿಸ್ತರಿಸಿರುವುದಾಗಿ ಘೋಷಿಸಿದೆ.

ಈ ಮೊದಲು ಈ ಯೋಜನೆಯಿಂದ ಹೊರಗಿದ್ದ 'ಓಪನ್ ಆಕ್ಸೆಸ್' (ಮುಕ್ತ ಪ್ರವೇಶ)ಗ್ರಾಹಕರಿಗೂ ಈಗ ಈ ಯೋಜನೆಯ ಲಾಭ ಪಡೆಯಲು ಅವಕಾಶ ನೀಡಲಾಗಿದೆ.

ಈ ಹಿಂದೆ ಕೇವಲ ಎಚ್.ಟಿ (HT) ಗ್ರಾಹಕರಿಗೆ ಮಾತ್ರ ಸೀಮಿತವಾಗಿದ್ದ ಈ ಯೋಜನೆಯನ್ನು ಈಗ ಎಲ್‌ಟಿ-3 (ವಾಣಿಜ್ಯ) ಮತ್ತು ಎಲ್‌ಟಿ-5 ((ವಾಣಿಜ್ಯ, ಕೈಗಾರಿಕಾ ಮತ್ತು ಕೃಷಿ ಗ್ರಾಹಕರು) ಸ್ಥಾವರಗಳಿಗೂ ವಿಸ್ತರಿಸಿದೆ.

ಯೋಜನೆಯಂತೆ ಮೂಲ ಬಳಕೆಗಿಂತ (Base Consumption) ಹೆಚ್ಚಿನ ವಿದ್ಯುತ್ ಬಳಸುವ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಲಭ್ಯವಾಗಲಿದೆ. ಪ್ರಸ್ತುತ ಈ ರಿಯಾಯಿತಿ ದರವು ಪ್ರತಿ ಯೂನಿಟ್‌ಗೆ ಸುಮಾರು ರೂ.5 ರಷ್ಟಿದೆ.

File photo
ರಾಜ್ಯದ ಜನತೆಗೆ 'ವಿದ್ಯುತ್' ಶಾಕ್: ಇಂದಿನಿಂದ ದರ ಏರಿಕೆ..!

ಇದೇ ವೇಳೆ ಓಪನ್ ಆಕ್ಸೆಸ್ ಗ್ರಾಹಕರು ಈ ಯೋಜನೆಗೆ ಸೇರಲು ತಮ್ಮ ಹಳೆಯ ವ್ಯವಸ್ಥೆಗಳನ್ನು ತ್ಯಜಿಸಬೇಕಾದ ಅನಿವಾರ್ಯತೆಯನ್ನು ಕೆ.ಇ.ಆರ್.ಸಿ ತೆಗೆದುಹಾಕಿದೆ.

ಈ ಕ್ರಮವು ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ಮತ್ತು ಹೆಚ್ಚುವರಿ ವಿದ್ಯುತ್ ಬಳಕೆಯನ್ನು ಪ್ರೋತ್ಸಾಹಿಸಲು ಸಹಕಾರಿಯಾಗಲಿದೆ.

ಕರ್ನಾಟಕ ಸರ್ಕಾರ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು (ಬೆಸ್ಕಾಂ, ಹೆಸ್ಕಾಂ ಇತ್ಯಾದಿ) ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಬೆಳವಣಿಗೆಯನ್ನು ಉತ್ತೇಜಿಸಲು ರಿಯಾಯಿತಿ ವಿದ್ಯುತ್ ದರ ಯೋಜನೆ (Discounted Energy Rate Scheme - DERS) ಅನ್ನು ಜಾರಿಗೆ ತಂದಿವೆ.

ಈ ಯೋಜನೆ 2021ರಲ್ಲಿ ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿ ಲಿಮಿಟೆಡ್ (BESCOM) ವ್ಯಾಪ್ತಿಯಲ್ಲಿ ಆರಂಭಿಸಲಾಗಿತ್ತು. ಈ ಕ್ರಮದಿಂದ ಸಾಮಾನ್ಯವಾಗಿ ಕಡಿಮೆ ದರದಲ್ಲಿ ವಿದ್ಯುತ್ ಬಳಕೆ ಮಾಡುವ ಉದ್ಯಮಗಳು, ಕೃಷಿ ಬಳಕೆದಾರರು ಮತ್ತು ವ್ಯಾಪಾರ ಕ್ಷೇತ್ರಗಳಿಗೆ ಸಹಕಾರ ದೊರಕಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com