ರಾಜ್ಯದ ಜನತೆಗೆ 'ವಿದ್ಯುತ್' ಶಾಕ್: ಇಂದಿನಿಂದ ದರ ಏರಿಕೆ..!

2024-25ರ ವಿದ್ಯುತ್ ಬಳಕೆ, ಎಸ್ಕಾಂಗಳ ಆರ್ಥಿಕ ಸ್ಥಿತಿ, ಇಂಧನ ಹೊಂದಾಣಿಕೆ ಶುಲ್ಕ, ಕಲ್ಲಿದ್ದಲು ಸಂಗ್ರಹ, ವಿದ್ಯುತ್ ಜಾಲದ ಸ್ಥಿತಿ, ಪ್ರಸರಣ ನಷ್ಟ ಹಾಗೂ ನಿರ್ವಹಣಾ ವೆಚ್ಚಗಳ ಆಧಾರದ ಮೇಲೆ ಈ ಶುಲ್ಕ ನಿಗದಿಯಾಗಲಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಹೊಸ ಆರ್ಥಿಕ ವರ್ಷದಿಂದ ಸರ್ಕಾರ ಜನರಿಗೆ ಮತ್ತೊಂದು ಶಾಕ್‌ ಕೊಟ್ಟಿದೆ. ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಹೆಚ್ಚಳದ ಬಳಿಕ ಇದೀಗ ವಿದ್ಯುತ್‌ ದರ ಕೂಡ ಏರಿಕೆಯಾಗುತ್ತಿದೆ.

ಏಪ್ರಿಲ್ 1ರಿಂದಲೇ ಹೊಸ ಶುಲ್ಕಗಳು ಅನ್ವಯವಾಗಲಿವೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧ್ಯಕ್ಷ ಪಿ. ರವಿ ಕುಮಾರ್ ಅವರು ತಿಳಿಸಿದ್ದಾರೆ.

ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳಿಲ್ಲಿ (ಎಸ್ಕಾಮ್‌ಗಳು) ಈ ಶುಲ್ಕಗಳು ವಿಭಿನ್ನವಾಗಿರುತ್ತವೆ. 2024-25ರ ವಿದ್ಯುತ್ ಬಳಕೆ, ಎಸ್ಕಾಂಗಳ ಆರ್ಥಿಕ ಸ್ಥಿತಿ, ಇಂಧನ ಹೊಂದಾಣಿಕೆ ಶುಲ್ಕ, ಕಲ್ಲಿದ್ದಲು ಸಂಗ್ರಹ, ವಿದ್ಯುತ್ ಜಾಲದ ಸ್ಥಿತಿ, ಪ್ರಸರಣ ನಷ್ಟ ಹಾಗೂ ನಿರ್ವಹಣಾ ವೆಚ್ಚಗಳ ಆಧಾರದ ಮೇಲೆ ಈ ಶುಲ್ಕ ನಿಗದಿಯಾಗಲಿದೆ. ಈ ಬಾರಿ ಸರ್ಕಾರದ ಪಿಂಚಣಿ ಮತ್ತು ಗ್ರಾಚ್ಯುಟಿ ವೆಚ್ಚದ ಒಂದು ಭಾಗವನ್ನೂ ಗ್ರಾಹಕರೇ ಭರಿಸಬೇಕಾಗುತ್ತದೆ ಎಂದು ಕೆಇಆರ್‌ಸಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಟ್ರೂ-ಅಪ್ ಶುಲ್ಕ ಜಾರಿಗೆ ಬರುತ್ತಿದೆ. ಇದಕ್ಕೂ ಮೊದಲು 2022-23ರಲ್ಲಿ ಫ್ಯುಯೆಲ್ ಅಡ್ಜಸ್ಟ್‌ಮೆಂಟ್ ಶುಲ್ಕ ಜಾರಿಯಾಗಿತ್ತು.

File photo
ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳ: 3.63 ಗಿಗಾವ್ಯಾಟ್‌ನೊಂದಿಗೆ ಜಲವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿ!

2025 ಮಾರ್ಚ್ 27ರಂದು ಕೆಇಆರ್‌ಸಿ ಮೂರು ವರ್ಷಗಳ ಟಾರಿಫ್ ಆದೇಶ ಹೊರಡಿಸಿ, ಎಲ್ಲಾ ವರ್ಗಗಳಿಗೂ ರೂ.25 ನಿಗದಿತ ಶುಲ್ಕ ಹೆಚ್ಚಳ ಮಾಡಿತ್ತು. ಜೊತೆಗೆ ಯೂನಿಟ್‌ಗೆ 36 ಪೈಸೆ ಪಿಂಚಣಿ ಹಾಗೂ ಗ್ರಾಚ್ಯುಟಿ ಸರ್ಚಾರ್ಜ್ ಕೂಡ ಸೇರಿಸಲಾಗಿತ್ತು.

KERC ಸ್ವತಂತ್ರ ಸಂಸ್ಥೆಯಾಗಿದ್ದರೂ, ಸರ್ಕಾರದ ನಿರ್ದೇಶನಗಳ ಪ್ರಭಾವದಲ್ಲಿದೆ. ಟ್ರೂ-ಅಪ್ ಪ್ರಕ್ರಿಯೆ ಹಿಂದಿನ ಹಣಕಾಸು ವರ್ಷದಲ್ಲೇ ಆರಂಭವಾಗಿದ್ದರೂ, ಅದರ ಪ್ರಕಟಣೆಯಲ್ಲಿ ವಿಳಂಬವಾಗಿರುವುದು ಸರಿಯಲ್ಲ ಎಂದು ತಜ್ಞರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com