ಬೆಂಗಳೂರು: ಪ್ರೀತಿಸುತ್ತಿದ್ದ ಹುಡುಗಿ ಮದ್ವೆಗೆ ಒಪ್ಪದಿದ್ದಕ್ಕೆ ಯುವಕ ಆತ್ಮಹತ್ಯೆ; ಕಾಲೇಜ್​​ ಲವ್ ದುರಂತ ಅಂತ್ಯ!

ಎಲ್ಲರಿಗೂ ಹೇಳುತ್ತಿದ್ದೇನೆ ದಯವಿಟ್ಟು ಯಾರನ್ನೂ ಪ್ರೀತಿಸಬೇಡಿ. ಈಗಿನ ಕಾಲದಲ್ಲಿ ಎಲ್ಲರೂ ವಂಚಕರೇ. ನನ್ನ ಎಲ್ಲಾ ಸ್ನೇಹಿತರಿಗೆ ಗುಡ್ ಬೈ. ಆ ಪ್ರೀತಿಯ ಕಾರಣದಿಂದ ನಿಮಗೆಲ್ಲರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ.
Youth commits suicide after Girl refused to marry him in Bengaluru
ಅಭಿಷೇಕ್ ಹಾಗೂ ಆತನ ಗೆಳತಿ
Updated on

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಗೆ ಒಪ್ಪದಿದ್ದಕ್ಕೆ ಮನನೊಂದ ಯುವಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಭಿಷೇಕ್(23) ಎಂದು ಗುರುತಿಸಲಾಗಿದ್ದು, ಇತ್ತೀಚೆಗಷ್ಟೇ ಖಾಸಗಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಅಭಿಷೇಕ್, ಅದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಇತ್ತ ಯುವತಿಯ ಪೋಷಕರು ಅಭಿಷೇಕ್ ಜತೆ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಅಭಿಷೇಕ್​ನನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಮನನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Youth commits suicide after Girl refused to marry him in Bengaluru
ನೀನು ಅಲ್ಪಾಯುಷಿ: ಬೆಂಗಳೂರಿನ ಜ್ಯೋತಿಷಿ ಮಾತು ಕೇಳಿ ಕೆಟ್ಟ ಟೆಕ್ಕಿ; ನೇಣು ಬಿಗಿದುಕೊಂಡು ಆತ್ಮಹತ್ಯೆ!

ಡೆತ್‌ನೋಟ್ ನಲ್ಲಿ ಏನಿದೆ?

ನನ್ನ ಜೊತೆ ಇದ್ದವಳು, ಅವಳಿಗೀಗ ಏನಾಯಿತೆಂದು ನನಗೆ ತಿಳಿಯುತ್ತಿಲ್ಲ. ನನ್ನ ಜೀವನ ಪ್ರೀತಿಯಿಂದಲೇ ತುಂಬಿ ತುಳುಕುತ್ತಿತ್ತು. ಈಗ ಆ ಪ್ರೀತಿಯೇ ಅಂತ್ಯವಾಗಿದೆ. ಆದ್ದರಿಂದ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಎಲ್ಲರಿಗೂ ಹೇಳುತ್ತಿದ್ದೇನೆ ದಯವಿಟ್ಟು ಯಾರನ್ನೂ ಪ್ರೀತಿಸಬೇಡಿ. ಈಗಿನ ಕಾಲದಲ್ಲಿ ಎಲ್ಲರೂ ವಂಚಕರೇ. ನನ್ನ ಎಲ್ಲಾ ಸ್ನೇಹಿತರಿಗೆ ಗುಡ್ ಬೈ. ಆ ಪ್ರೀತಿಯ ಕಾರಣದಿಂದ ನಿಮಗೆಲ್ಲರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ಎಲ್ಲರೂ ನನ್ನನ್ನು ಪ್ರೀತಿಸುವುದರ ಜೊತೆಗೆ ನನ್ನೊಂದಿಗೆ ಸಂತೋಷವಾಗಿದ್ದರು. ಆದರೆ ನಾನು ನಿಮಗ್ಯಾರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಅಭಿಷೇಕ್ ಡೆತ್‌ನೋಟ್ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com