ಬಾಪ್ಟಿಸ್ಟ್ ಆಸ್ಪತ್ರೆ ಹ್ಯೂಮನ್ ಮಿಲ್ಕ್ ಬ್ಯಾಂಕ್‌ಗೆ 1 ವರ್ಷ: 155ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಜೀವದಾನ..!

ಕಳೆದ ಒಂದು ವರ್ಷದಲ್ಲಿ ಸುಮಾರು 65 ತಾಯಂದಿರು ಸೇರಿ 200 ಲೀಟರ್‌ಗಿಂತ ಹೆಚ್ಚು ತಾಯಿಹಾಲು ದಾನ ಮಾಡಿದ್ದಾರೆ.
Baptist hospital staff pose for a photo during the first anniversary celebration of its Human Milk Bank in Bengaluru on Saturday
ಬಾಪ್ಟಿಸ್ಟ್ ಆಸ್ಪತ್ರೆ ಸಿಬ್ಬಂದಿ
Updated on

ಬೆಂಗಳೂರು: ಬಾಪ್ಟಿಸ್ಟ್ ಆಸ್ಪತ್ರೆಯ (Bangalore Baptist Hospital) ಹ್ಯೂಮನ್ ಮಿಲ್ಕ್ ಬ್ಯಾಂಕ್ ಒಂದು ವರ್ಷ ಪೂರ್ಣಗೊಳಿಸಿದ್ದು, 155ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಜೀವದಾನ ಮಾಡಿ ಶಿಶು ಆರೈಕೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಅತಿ ಅಪಾಯದಲ್ಲಿರುವ ಅಕಾಲಿಕ ಹಾಗೂ ಅಸ್ವಸ್ಥ ಶಿಶುಗಳಿಗೆ ಸುರಕ್ಷಿತ ತಾಯಿಹಾಲು ಒದಗಿಸುವ ಮೂಲಕ ನಗರದ ಆರೋಗ್ಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಕಳೆದ ಒಂದು ವರ್ಷದಲ್ಲಿ ಸುಮಾರು 65 ತಾಯಂದಿರು ಸೇರಿ 200 ಲೀಟರ್‌ಗಿಂತ ಹೆಚ್ಚು ತಾಯಿಹಾಲು ದಾನ ಮಾಡಿದ್ದಾರೆ.

ಈ ಹಾಲು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿರುವ 20ಕ್ಕೂ ಹೆಚ್ಚು ನವಜಾತ ತೀವ್ರ ನಿಗಾ ಘಟಕಗಳಿಗೆ (NICU) ತಲುಪಿದ್ದು, ಅತೀ ಚಿಕ್ಕ ಹಾಗೂ ಅಸ್ವಸ್ಥ ಶಿಶುಗಳ ಜೀವ ಉಳಿಸಲು ಸಹಾಯವಾಗಿದೆ.

Baptist hospital staff pose for a photo during the first anniversary celebration of its Human Milk Bank in Bengaluru on Saturday
ಪತಿಗೆ ಲಿವರ್ ದಾನ ಮಾಡಿದ ಪತ್ನಿ: ಶಸ್ತ್ರ ಚಿಕಿತ್ಸೆ ನಂತರ ಇಬ್ಬರೂ ಸಾವು!

ಬಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕ ಮತ್ತು ಸಿಇಒ ಡಾ. ಸ್ಪರ್ಜಿಯನ್ ಅವರು ಮಾತನಾಡಿ, ಹ್ಯೂಮನ್ ಮಿಲ್ಕ್ ಬ್ಯಾಂಕ್‌ಗಳು ಅಕಾಲಿಕ ಹಾಗೂ ಕಡಿಮೆ ತೂಕದ ಶಿಶುಗಳ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಾಸ್ಚರೈಸ್ ಮಾಡಿದ ತಾಯಿಹಾಲು ಸೋಂಕು ಮತ್ತು ಸಂಕೀರ್ಣತೆಗಳನ್ನು ಕಡಿಮೆ ಮಾಡುವುದರಿಂದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

ಈ ಮಾನದಂಡಗಳು ವಿಶ್ವ ಆರೋಗ್ಯ ಸಂಸ್ಥೆ (World Health Organization) ಹಾಗೂ ಭಾರತೀಯ ಶಿಶುರೋಗ ತಜ್ಞರ ಸಂಘದ (Indian Academy of Pediatrics) ಶಿಫಾರಸುಗಳಿಗೆ ಅನುಗುಣವಾಗಿವೆ ಎಂದು ತಿಳಿಸಿದ್ದಾರೆ.

ಯಾವುದೇ ತಾಯಿ ತನ್ನ ಹೆಚ್ಚುವರಿ ಹಾಲನ್ನು ದಾನ ಮಾಡಬಹುದು. ಸಣ್ಣ ಪ್ರಮಾಣದ ದಾನವೂ ಅಸ್ವಸ್ಥ ಶಿಶುಗಳ ಜೀವ ಉಳಿಸಲು ದೊಡ್ಡ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿ, ದಾನಿಗಳಾಗಿ ಭಾಗವಹಿಸಲು 94831 30743 ಅನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com