ರಾಜ್ಯ ಸರ್ಕಾರದಿಂದ ಮಾಜಿ ಪ್ರಧಾನಿ ದೇವೇಗೌಡರಿಗೆ 1.2 ಕೋಟಿ ರೂ ಮೌಲ್ಯದ ವಿಶೇಷ ಕಾರು!

ಈ ಕಾರು 2.0 ಲೀಟರ್ ಟರ್ಬೋ ಎಂಜಿನ್ ಹೊಂದಿದ್ದು, ಕಾರು ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. 250 hp ಪವರ್ ಹಾಗೂ 360 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.
HD Devegowda
ಎಚ್.ಡಿ ದೇವೇಗೌಡonline desk
Updated on

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್‌ಡಿ ದೇವೇಗೌಡರಿಗೆ ರಾಜ್ಯ ಸರ್ಕಾರ ವಿಶೇಷ ಕಾರು ಖರೀದಿಗೆ ಅನುಮತಿ ನೀಡಿದೆ.

ಸಿಎಂ, ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ದೇವೇಗೌಡ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದು, ಅವರಿಗೆ 1.2 ಕೋಟಿ ರೂಪಾಯಿ ಮೌಲ್ಯದ ದುಬಾರಿ ಕಾರು ಖರೀದಿಗೆ ಅನುಮತಿ ನೀಡಿ ಈ ಸಂಬಂಧ ಅಧಿಸೂಚನೆ ಪ್ರಕಟಿಸಿದೆ. ಐಷಾರಾಮಿ ಹಾಗೂ ಗರಿಷ್ಠ ಸುರಕ್ಷತೆಯ Volvo XC 90 (ವೋಲ್ವೋ ಎಕ್ಸ್‌ಸಿ 90 ) ಕಾರನ್ನು ದೇವೇಗೌಡ ಅವರಿಗೆ ನೀಡಲಾಗುತ್ತಿದೆ.

ಸರ್ಕಾರದ ಅಧಿಸೂಚನೆ

ಹೆಚ್.ಡಿ ದೇವೇಗೌಡರು ಇವರಿಗೆ VOLVO-XC90 ವಾಹನವನ್ನು ರೂ.1,25,65,388/-ಗಳ ವೆಚ್ಚದಲ್ಲಿ ಮೆ: Martial Motors Pvt. Ltd., ಬೆಂಗಳೂರು ಇವರಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದೃಢಪಡಿಸಿಕೊಳ್ಳುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

HD Devegowda
ನನ್ನ 60 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಸರ್ಕಾರ ನೋಡಿಲ್ಲ; ರಾಜಕೀಯ ಸ್ವಾರ್ಥಕ್ಕೆ ಸಾಮಾಜಿಕ ನ್ಯಾಯದ ಜಪ: ಎಚ್.ಡಿ ದೇವೇಗೌಡ

ಈ ಕಾರು 2.0 ಲೀಟರ್ ಟರ್ಬೋ ಎಂಜಿನ್ ಹೊಂದಿದ್ದು, ಕಾರು ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ. 250 hp ಪವರ್ ಹಾಗೂ 360 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.

ದೇವೇಗೌಡರಿಗಾಗಿ ಕೆಲವು ಬದಲಾವಣೆ

ಇನ್ನು ಈ ಕಾರನ್ನು ಮಾಡಿಫಿಕೇಶನ್ ಮಾಡಲು ಸಾಧ್ಯವಿದೆ. ಸದ್ಯ ದೇವೇಗೌಡರಿಗೆ ಕಾರು ಹತ್ತಿ ಇಳಿಯಲು, ಕಾರಿನಲ್ಲಿ ಕುಳಿತುಕೊಳ್ಳಲು ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com