ಸಚಿವ ಸಂಪುಟ ಪುನಾರಚನೆ: ಮೇ ತಿಂಗಳಿನಲ್ಲಿ ಹೈಕಮಾಂಡ್‍ನಿಂದ ಸಿಹಿ ಸುದ್ದಿ- ಅಶೋಕ್ ಪಟ್ಟಣ್

ಈ ಸಂದೇಶವನ್ನು ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಹಂಚಿಕೊಂಡಿದ್ದಾರೆ ಎಂದು ಪಟ್ಟಣ್ ಅವರು ಹೇಳಿದ್ದಾರೆ.
Congress MLA Ashok Pattan
ವಿಧಾನಸಭೆ ಆಡಳಿತ ಪಕ್ಷದ ಮುಖ್ಯಸಚೇತಕ ಅಶೋಕ್ ಪಟ್ಟಣ್
Updated on

ಬೆಳಗಾವಿ: ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತ ಚರ್ಚೆಗಳು ಗರಿಗೆದರಿದ್ದು, ಕಾಂಗ್ರೆಸ್ ಹೈಕಮಾಂಡ್‌ನಿಂದ ಶೀಘ್ರದಲ್ಲೇ ಮಹತ್ವದ ನಿರ್ಧಾರ ಹೊರ ಬರಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.

ಶಾಸಕರಲ್ಲಿ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಮುಂದುವರಿದಿದ್ದು, ಸುಮಾರು 40 ಮಂದಿ ಶಾಸಕರು ಲಾಬಿ ನಡೆಸುತ್ತಿದ್ದಾರೆ.

ವಿಧಾನಸಭೆ ಆಡಳಿತ ಪಕ್ಷದ ಮುಖ್ಯಸಚೇತಕ ಅಶೋಕ್ ಪಟ್ಟಣ್ ಅವರು ಈ ಕುರಿತು ಮಾತನಾಡಿ, ಮೇ ಎರಡನೇ ವಾರದಲ್ಲಿ “ಗುಡ್ ನ್ಯೂಸ್” ಸಿಗಲಿದೆ ಎಂದು ಹೈಕಮಾಂಡ್ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಈ ಸಂದೇಶವನ್ನು ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಹಂಚಿಕೊಂಡಿದ್ದಾರೆ ಎಂದು ಪಟ್ಟಣ್ ಅವರು ಹೇಳಿದ್ದಾರೆ. ಮೇ ಎರಡನೇ ವಾರದಲ್ಲಿ ಮಹತ್ವದ ಬೆಳವಣಿಗೆ ನಿರೀಕ್ಷಿಸಬಹುದ ಎಂದು ಹೇಳಿದ್ದಾರೆ.

ಮೇ 4ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶಗಳು ಈ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

Congress MLA Ashok Pattan
ಮೇ 15 ರಂದು ಡಿ.ಕೆ ಶಿವಕುಮಾರ್ ಹುಟ್ಟುಹಬ್ಬ; ಅಷ್ಟರಲ್ಲಿ ಡಿಸಿಎಂಗೆ ಬಂಪರ್ ಗಿಫ್ಟ್: ಶಾಸಕ ರಂಗನಾಥ್

ಚುನಾವಣಾ ಫಲಿತಾಂಶಗಳ ನಂತರ, ಸುಮಾರು 40 ಶಾಸಕರು ಮತ್ತೊಮ್ಮೆ ಹೈಕಮಾಂಡ್ ಅನ್ನು ಭೇಟಿ ಮಾಡಲು ನವದೆಹಲಿಗೆ ಪ್ರಯಾಣಿಸುತ್ತಾರೆ" ಎಂದು ಹೇಳಿದ್ದಾರೆ.

ಇದೀಗ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ “ಹುಟ್ಟುಹಬ್ಬದ ಉಡುಗೊರೆ” ಸಿಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತಿಮ ನಿರ್ಧಾರ ಸಂಪೂರ್ಣವಾಗಿ ಹೈಕಮಾಂಡ್ ಕೈಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ಡಿ.ಸುಧಾಕರ್ ಕುರಿತು ನೀಡಿದ ಹೇಳಿಕೆಗೆ ಪಟ್ಟಣ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.

“ಒಬ್ಬರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವುದು ಮಾನವೀಯತೆಯ ವಿರುದ್ಧ. ಇಂತಹ ಸಂದರ್ಭಗಳಲ್ಲಿ ಮೂಲಭೂತ ಮಾನವೀಯತೆ ಮರೆಯಬಾರದು” ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com