

ಬೆಂಗಳೂರು: ನೆಲಮಂಗಲ ಟೋಲ್ ಸಮೀಪ BMTC ಬಸ್‌ಗೆ ಹತ್ತಲು ಮುಂದಾಗಿದ್ದ ಭಿಕ್ಷುಕನನ್ನು ಕಂಡಕ್ಟರ್ ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ ಅಮಾನವೀಯ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನಿರ್ವಾಹಕನ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಡಕ್ಟರ್ ಭಿಕ್ಷುಕನಿಗೆ ಕಾಲಿನಿಂದ ಹೊದ್ದಿರುವ ದೃಶ್ಯ ಬೈಕ್ ಸವಾರನೊಬ್ಬನ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇನ್ನು ಭಿಕ್ಷುಕ ಕೆಳಗೆ ಬಿದ್ದರೂ ಕಂಡಕ್ಟರ್ ಆತನಿಗೆ ಏನಾಯಿತು ಎಂದು ನೋಡದೇ ಬಸ್ ಹತ್ತಿ ಹೋಗಿದ್ದಾನೆ. ಇದರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ತಪ್ಪಿತಸ್ಥ ಕಂಡಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನು ವಿಡಿಯೋ ವೈರಲ್ ಬೆನ್ನಲ್ಲೇ ಬಿಎಂಟಿಸಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಸ್ ನಿರ್ವಾಹಕ ಕೃಷ್ಣಮೂರ್ತಿಯನ್ನು ಅಮಾನತು ಮಾಡಿದೆ.