ಬೆಂಗಳೂರು: ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ ಬಾಲ್ಕನಿಯಿಂದ ಮನಸೋಇಚ್ಛೆ ಗುಂಡು ಹಾರಿಸಿದ ಟೆಕ್ಕಿ; ಬೆಚ್ಚಿಬಿದ್ದ ಜನ! Video

ಸುಮಾರು 45 ನಿಮಿಷಗಳ ಕಾಲ ಅನುರಾಗ್ ತಿವಾರಿ ಗುಂಡು ಹಾರಿಸುತ್ತಿದ್ದ. ಇದು ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
A 40-year-old IT professional was arrested after allegedly firing an air gun from the balcony of his apartment in Bengaluru
ಅನುರಾಗ್ ತಿವಾರಿ
Updated on

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ಆನೇಕಲ್ ತಾಲ್ಲೂಕಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಂಠಪೂರ್ತಿ ಕುಡಿದ ಟೆಕ್ಕಿಯೊಬ್ಬ ಬಾಲ್ಕನಿಯಿಂದ ಭದ್ರತಾ ಸಿಬ್ಬಂದಿ, ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಮತ್ತು ಪಾರ್ಕಿಂಗ್ ಶೆಡ್‌ ಮೇಲೆ ಏರ್ ಗನ್‌ನಿಂದ ಮನಸೋಇಚ್ಛೆ ಗುಂಡು ಹಾರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ಬಂಧಿತ ಟೆಕ್ಕಿಯನ್ನು ಉತ್ತರ ಪ್ರದೇಶದ ಲಖನೌ ಮೂಲದ 40 ವರ್ಷದ ಅನುರಾಗ್ ತಿವಾರಿ ಎಂದು ಗುರುತಿಸಲಾಗಿದ್ದು, ಆರೋಪಿ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಮತ್ತು ಕಳೆದ ಎಂಟು ತಿಂಗಳಿನಿಂದ ಬಂಡಾಪುರ ಬಳಿಯ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿರುವ ಬ್ಲಿಸ್ -1 ಬ್ಲಾಕ್‌ನ ಫ್ಲಾಟ್ ಬಿ 304 ರಲ್ಲಿ ವಾಸಿಸುತ್ತಿದ್ದ.

ಪೊಲೀಸರ ಪ್ರಕಾರ, ತಿವಾರಿ ಮದ್ಯ ಸೇವಿಸಿದ ನಂತರ ಮಧ್ಯರಾತ್ರಿ 2:30 ರ ಸುಮಾರಿಗೆ ತನ್ನ ಅಪಾರ್ಟ್‌ಮೆಂಟ್‌ನ ಬಾಲ್ಕನಿಗೆ ಬಂದು, ಫೋನ್‌ನಲ್ಲಿ ಮಾತನಾಡುತ್ತಾ ಕೂಗುತ್ತಿದ್ದ ಮತ್ತು ಏರ್ ಗನ್‌ನಿಂದ ಗುಂಡು ಹಾರಿಸುತ್ತಿದ್ದ ಎಂದು ನಿವಾಸಿಗಳು ಹೇಳಿದ್ದಾರೆ.

A 40-year-old IT professional was arrested after allegedly firing an air gun from the balcony of his apartment in Bengaluru
ನೆಲಮಂಗಲ: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿ ದರೋಡೆಗೆ ಯತ್ನ; ಮಾಲೀಕನ ಮೇಲೆ ಗುಂಡಿನ ದಾಳಿ, Video

ಸುಮಾರು 45 ನಿಮಿಷಗಳ ಕಾಲ ಅನುರಾಗ್ ತಿವಾರಿ ಗುಂಡು ಹಾರಿಸುತ್ತಿದ್ದ. ಇದು ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಮತ್ತು ಪಾರ್ಕಿಂಗ್ ಶೇಡ್‌ ಶೀಟ್‌ಗಳ ಮೇಲೆ ಫೈರ್‌ ಮಾಡಿದ್ದಾನೆ. ಶಬ್ದ ಕೇಳಿಸಿಕೊಂಡು ಅಲ್ಲಿಗೆ ಬಂದಿದ್ದ ಸೆಕ್ಯುರಿಟಿ ಗಾರ್ಡ್‌ಗಳ ಮೇಲೂ ದಾಳಿ ಮಾಡಿದ್ದಾನೆ. ಬಳಿಕ ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಅನುರಾಗ್ ತಿವಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ರಾತ್ರಿ ನನ್ನ ಕಾರಿನ ಮೇಲೆ ಏರ್ ಫೈರಿಂಗ್ ಆಗಿದೆ. ಮಧ್ಯರಾತ್ರಿ 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಸೆಕ್ಯುರಿಟಿ ಮೇಲೆ ಕೂಡ ಫೈರ್ ಮಾಡಿದ್ದಾರೆ. ಯಾರಿಗೂ ಏನು ಆಗಿಲ್ಲ. ಆದರೆ ಪಾರ್ಕಿಂಗ್​​ನಲ್ಲಿದ್ದ ಕಾರಿನ ಗ್ಲಾಸ್ ಪುಡಿಯಾಗಿವೆ. ಅವರು ಏಕೆ ಈ ರೀತಿ ಮಾಡಿದ್ದಾರೆ ಅಂತ ಗೊತ್ತಿಲ್ಲ. ಅವರಿಗೂ ನಮಗೂ ಯಾವುದೇ ಪರಿಚಯವಿಲ್ಲ. ಕುಡಿದು ಈ ರೀತಿ ಮಾಡಿರಬೇಕು. ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಅಲ್ಲಿನ ನಿವಾಸಿ ಬಿದ್ಯುತ್ ಹೇಳಿದ್ದಾರೆ.

ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಬಳಿ ಇದ್ದ ಏರ್‌ಗನ್ ಮತ್ತು ಬಾಲ್ಸ್ ಗಳನ್ನ ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com