ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್: ಆಗಸ್ಟ್‌ 20ರಿಂದ APAR, ಆಸ್ತಿ ವಿವರ ಆನ್‌ಲೈನ್‌ನಲ್ಲಿ ಸಲ್ಲಿಕೆ ಕಡ್ಡಾಯ..!

ಇದೂವರೆಗೆ ಈ ಪ್ರಕ್ರಿಯೆಯನ್ನು ಕೈಬರಹದ (ಮ್ಯಾನುಯಲ್) ಮೂಲಕ ನಡೆಸಲಾಗುತ್ತಿತ್ತು. ಅದು ಸಮಯ ತೆಗೆದುಕೊಳ್ಳುವ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿತ್ತು. ಈಗ ಡಿಜಿಟಲ್ ವ್ಯವಸ್ಥೆ ಜಾರಿಯಾಗಿರುವುದರಿಂದ ಕಡಿಮೆ ಸಮಯದಲ್ಲಿ ವಿವರಗಳನ್ನು ಸಲ್ಲಿಸಲು ಸಾಧ್ಯವಾಗಲಿದೆ.
Major IAS reshuffle in Karnataka
ವಿಧಾನಸೌಧ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಇನ್ನು ಮುಂದೆ ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿ (APAR) ಮತ್ತು ಸ್ಥಿರಾಸ್ತಿ ವಿವರಗಳ (Immovable Property Return - IPR) ಸಲ್ಲಿಕೆಯನ್ನು ಕಡ್ಡಾಯವಾಗಿ ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಕಾರ, 2026ರ ಆಗಸ್ಟ್‌ 20ರಿಂದ ರಾಜ್ಯದ e-PAR Application ಮೂಲಕವೇ APAR ಹಾಗೂ IPR ಸಲ್ಲಿಕೆ ಮಾಡಬೇಕು.

ಈ ಉದ್ದೇಶಕ್ಕಾಗಿ e-PAR ವೇದಿಕೆಯಲ್ಲಿ IPR Module ಅನ್ನು ಪರಿಚಯಿಸಲಾಗಿದ್ದು, ಇದರ ಮೂಲಕ ವಾರ್ಷಿಕ ಆಸ್ತಿ ಮತ್ತು ಇತರೆ ವಿವರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಡಿಪಿಎಆರ್ ಅಧಿಕಾರಿಗಳ ಪ್ರಕಾರ, ಇದೂವರೆಗೆ ಈ ಪ್ರಕ್ರಿಯೆಯನ್ನು ಕೈಬರಹದ (ಮ್ಯಾನುಯಲ್) ಮೂಲಕ ನಡೆಸಲಾಗುತ್ತಿತ್ತು. ಅದು ಸಮಯ ತೆಗೆದುಕೊಳ್ಳುವ ಮತ್ತು ಸಂಕೀರ್ಣ ಪ್ರಕ್ರಿಯೆಯಾಗಿತ್ತು. ಈಗ ಡಿಜಿಟಲ್ ವ್ಯವಸ್ಥೆ ಜಾರಿಯಾಗಿರುವುದರಿಂದ ಕಡಿಮೆ ಸಮಯದಲ್ಲಿ ವಿವರಗಳನ್ನು ಸಲ್ಲಿಸಲು ಸಾಧ್ಯವಾಗಲಿದೆ.

Major IAS reshuffle in Karnataka
ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ವೇತನ ಪರಿಷ್ಕರಣೆ ಈ ತಿಂಗಳಿನಿಂದಲೇ ಖಾತೆಗೆ ಜಮೆ!

ಅಧಿಕಾರಿಗಳು ಅಥವಾ ನೌಕರರು ಸಲ್ಲಿಸುವ ಕಾರ್ಯಕ್ಷಮತೆ ವರದಿ ಹಾಗೂ ಆಸ್ತಿ-ಹೊಣೆಗಾರಿಕೆಗಳ ವಿವರಗಳನ್ನು e-PAR ವ್ಯವಸ್ಥೆ ಸ್ವೀಕರಿಸಲಿದ್ದು, ಬಳಿಕ ಸಂಬಂಧಿತ ಇಲಾಖೆ ಅವುಗಳನ್ನು ಪರಿಶೀಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಪ್ರಕಾರ, ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆಯನ್ನು ಸಂಪೂರ್ಣವಾಗಿ ಡಿಜಿಟಲ್‌ಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ವ್ಯವಸ್ಥೆಯನ್ನು ಈಗಾಗಲೇ ಐಎಎಸ್ (IAS), ಐಪಿಎಸ್ (IPS) ಮತ್ತು ಐಎಫ್‌ಎಸ್ (IFS) ಅಧಿಕಾರಿಗಳು ಬಳಸುತ್ತಿರುವ e-PAR ಮಾದರಿಯಲ್ಲಿಯೇ ರಾಷ್ಟ್ರೀಯ ಮಾಹಿತಿ ವಿಜ್ಞಾನ ಕೇಂದ್ರ (NIC) ಅಭಿವೃದ್ಧಿಪಡಿಸಿದೆ.

ಸರ್ಕಾರದ 1994ರ ಸುತ್ತೋಲೆಯಲ್ಲಿ ನಿಗದಿಪಡಿಸಿರುವ ನಮೂನೆಯಲ್ಲಿಯೇ ಆಸ್ತಿ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಸಲ್ಲಿಕೆ ಮಾತ್ರ ಆನ್‌ಲೈನ್‌ ಮೂಲಕ ನಡೆಯಲಿದೆ.

ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು 2025-26ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರವನ್ನು ಆಗಸ್ಟ್‌ 20ರಿಂದ e-PAR Application ಮೂಲಕ ಸಲ್ಲಿಸಬೇಕು. ಇನ್ನು ಮುಂಜೆ ಪ್ರತಿ ವರ್ಷ ಮಾರ್ಚ್ ಅಂತ್ಯದೊಳಗೆ ಇದೇ ವ್ಯವಸ್ಥೆಯ ಮೂಲಕ ವಾರ್ಷಿಕ ಆಸ್ತಿ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com