Bengaluru Traffic ಸಮಸ್ಯೆಗೆ ಬ್ರೇಕ್ ಹಾಕಲು ಪಂಚಸೂತ್ರ: ಡೇನಲ್ಲಿ ಖಾಸಗಿ‌ ಬಸ್​ಗಳಿಗೆ ನಿರ್ಬಂಧ, ಫ್ಲೈಓವರ್‌ನಲ್ಲಿ ಬೈಕ್‌ ಸಂಚಾರ ನಿಷೇಧ!

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕಾರ್ ಪೂಲಿಂಗ್ ಅನ್ನು ಅಧಿಕೃತಗೊಳಿಸುವುದು, ಹಗಲಿನಲ್ಲಿ ಆಲ್‌ ಇಂಡಿಯಾ ಪರ್ಮಿಟ್‌ ಹೊಂದಿರುವ ಎಲ್ಲಾ ಖಾಸಗಿ ಬಸ್‌ಗಳ ಸಂಚಾರಕ್ಕೆ ಸಪೂರ್ಣ ನಿರ್ಬಂಧ ಮತ್ತು ಭಾರೀ ಸರಕು ಸಾಗಾಣಿಕೆ ವಾಹನಗಳಿಗೆ ನಿಗದಿತ ಅವಧಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ.
Casual Images
ಬೆಂಗಳೂರು ಟ್ರಾಫಿಕ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಕಾಡುತ್ತಿರುವ ಟ್ರಾಫಿಕ್‌ ಸಮಸ್ಯೆಗೆ ಬ್ರೇಕ್ ಹಾಕಲು ಹತ್ತಾರು ಮಾರ್ಗೋಪಾಯಗಳನ್ನು ಹುಡುಕುತ್ತಿರುವ ನಗರ ಸಂಚಾರ ಪೊಲೀಸ್‌ ವಿಭಾಗವು ಇದೀಗ ಹೈದರಾಬಾದ್ ಮಾದರಿಯಲ್ಲಿ ಪಂಚಸೂತ್ರಗಳನ್ನು ಜಾರಿಗೊಳಿಸಲು ಸಿದ್ಧವಾಗಿದೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕಾರ್ ಪೂಲಿಂಗ್ ಅನ್ನು ಅಧಿಕೃತಗೊಳಿಸುವುದು, ಹಗಲಿನಲ್ಲಿ ಆಲ್‌ ಇಂಡಿಯಾ ಪರ್ಮಿಟ್‌ ಹೊಂದಿರುವ ಎಲ್ಲಾ ಖಾಸಗಿ ಬಸ್‌ಗಳ ಸಂಚಾರಕ್ಕೆ ಸಪೂರ್ಣ ನಿರ್ಬಂಧ ಮತ್ತು ಭಾರೀ ಸರಕು ಸಾಗಾಣಿಕೆ ವಾಹನಗಳಿಗೆ ನಿಗದಿತ ಅವಧಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಸೇರಿದಂತೆ ಪಂಚಸೂತ್ರಗಳನ್ನು ಸಂಚಾರ ವಿಭಾಗದ ಪೊಲೀಸರು ಪ್ರಸ್ತಾಪ ಮಾಡಿದ್ದಾರೆ.

ಮುಖ್ಯವಾಗಿ ನಿಧಾನಗತಿಯ ಸಂಚಾರ ವ್ಯವಸ್ಥೆ ಹೊಂದಿರುವ ಐದು ಮಾದರಿಯ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಸಮಯ ಫಿಕ್ಸ್‌ ಮಾಡಲು ನಿರ್ಧರಿಸಿದೆ. ಈ ಮೂಲಕ ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಯಶಸ್ವಿಯಾಗಿರುವ ಪಂಚ ಪರಿಹಾರ ಸೂತ್ರಗಳ ರೂಪುರೇಷೆ ಸಿದ್ಧಪಡಿಸಿದೆ. ಈಗಾಗಲೇ ಹೈದರಾಬಾದ್‌ನಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪೂರಕವಾಗಿರುವ ಮಾದರಿ ಅಧ್ಯಯನ ನಡೆಸಿ ಇಲ್ಲಿಯೂ ಅದೇ ಮಾದರಿ ಅನುಷ್ಠಾನಕ್ಕೆ ತರಲು ಇಲಾಖೆ ಚಿಂತನೆ ನಡೆಸಿದೆ.

Casual Images
Bengaluru tunnel project: ಟ್ರಾಫಿಕ್ ಸಮಸ್ಯೆ ಹೋಗಲಾಡಿಸುವ ಯೋಜನೆಗೆ ವಿರೋಧವೇಕೆ? ಸಿಎಂ ಸಿದ್ದರಾಮಯ್ಯ
Casual Images
ರಾಜಧಾನಿಯ ಟ್ರಾಫಿಕ್ ಜಂಜಾಟಕ್ಕೆ ವೀಕೆಂಡ್ ಬ್ರೇಕ್; ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಕ್ಕೆ ದಿ ಬೆಸ್ಟ್ ಪ್ರವಾಸಿ ತಾಣಗಳು!

ಬೆಂಗಳೂರಿನಲ್ಲಿ ವಾಹನಗಳ ಸುಗಮ ಓಡಾಟಕ್ಕೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರ ನೇತೃತ್ವದಲ್ಲಿ ‘ಪಂಚಸೂತ್ರ’ವನ್ನು ಪೊಲೀಸರು ಸಿದ್ಧಪಡಿಸಿದ್ದಾರೆ.

ಖಾಸಗಿ ಬಸ್‌ಗಳಿಗೆ ನಿರ್ಬಂಧ

ನಗರ ವ್ಯಾಪ್ತಿಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಆಲ್‌ ಇಂಡಿಯಾ ಪರ್ಮಿಟ್‌ ಹೊಂದಿರುವ ಖಾಸಗಿ ಬಸ್‌ಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ನಗರಕ್ಕೆ ಅತಿಹೆಚ್ಚು ವಾಹನಗಳು ಆಗಮಿಸುತ್ತಿವೆ. ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿಯೂ ಈ ಬಸ್‌ಗಳು ಹಾದು ಹೋಗುವುದರಿಂದ ಹೆಚ್ಚು ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ, ಹಗಲಿನಲ್ಲಿ ಖಾಸಗಿ ಬಸ್‌ಗಳ ಸಂಚಾರ ಕಡಿಮೆ ಇದ್ದರೆ ಇತರ ವಾಹನಗಳು ಸಂಚಾರವೂ ಸುಗಮವಾಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಲಾರಿಗಳಿಗೂ ನಿರ್ಬಂಧ

ಸಂಚಾರ ಪೊಲೀಸರು ಸಿದ್ಧಪಡಿಸಿರುವ ಮಾರ್ಗೋಪಾಯದಲ್ಲಿ ಮೊದಲನೆಯದಾಗಿ ಅತೀ ಉದ್ದದ ಟ್ರಕ್‌, ಸರಕು ಸಾಗಾಣಿಕೆಯ ಭಾರೀ ವಾಹನಗಳಿಗೆ ಹಗಲಿನ ವೇಳೆ ನಗರದಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ.

ಫ್ಲೈಓವರ್‌ನಲ್ಲಿ ಬೈಕ್‌ ಸಂಚಾರ ನಿಷೇಧ

ಮತ್ತೊಂದೆಡೆ ನಗರದ ಮೇಲ್ಸೇತುವೆಗಳಲ್ಲಿ ಅತಿಹೆಚ್ಚಿನ ಅಪಘಾತ ಹಾಗೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ, ಬೆಳಗ್ಗೆ ಹಾಗೂ ಸಾಯಂಕಾಲ ಪೀಕ್‌ ಅವರ್‌ಗಳಲ್ಲಿ ಬೈಕ್‌ಗಳ ಸಂಚಾರಕ್ಕೆ ನಿಷೇಧ ವಿಧಿಸಲು ತೀರ್ಮಾನಿಸಲಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ಕಾರಿಡಾರ್‌ , ಬಾಲಗಂಗಾಧರನಾಥ ಸ್ವಾಮೀಜಿ ಮೆಲ್ಸೇತುವೆ, ರಾಗಿಗುಡ್ಡ ಡಬಲ್‌ ಡೆಕ್ಕರ್‌ ಹಾಗೂ ಜಕ್ಕೂರು ಮೇಲ್ಸೇತುವೆಯಲ್ಲಿ ಈ ಪ್ರಯೋಗ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com