

ವಿಧಾನಸೌಧದ ಸಮೀಪದ ಹೊಟೇಲ್ ಚಾಲುಕ್ಯದಲ್ಲಿದ್ದ ಬೆಂಗಳೂರಿನ ಪ್ರಸಿದ್ಧ ಸಮ್ರಾಟ್ ರೆಸ್ಟೋರೆಂಟ್, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ವಕೀಲರ ನೆಚ್ಚಿನ ಅನೌಪಚಾರಿಕ ತಾಣವಾಗಿ ಹಲವು ದಶಕಗಳಿಂದ ಗುರುತಿಸಿಕೊಂಡಿತ್ತು.
‘ಪವರ್ ಅಡ್ಡಾ’
ಹಲವು ದಶಕಗಳಿಂದ ವಿವಿಧ ಪಕ್ಷಗಳ ಪ್ರಮುಖ ರಾಜಕೀಯ ನಾಯಕರು ಸಾಮ್ರಾಟ್ ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಿದ್ದರು. ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಇಲ್ಲಿ ಮಸಾಲೆ ದೋಸೆ, ಬಾದಾಮಿ ಹಲ್ವಾ ಸೇರಿದಂತೆ ದಕ್ಷಿಣ ಭಾರತೀಯ ಖಾದ್ಯಗಳನ್ನು ಸವಿಯುತ್ತಾ ರಾಜಕೀಯ ವಿಷಯಗಳನ್ನು ಚರ್ಚಿಸುತ್ತಿದ್ದರು.
ವಿಧಾನಸೌಧದ ಸಮೀಪ
ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದಿಂದ ಕೆಲವೇ ನಿಮಿಷಗಳ ನಡಿಗೆಯ ದೂರದಲ್ಲಿದ್ದ ಸಾಮ್ರಾಟ್, ರಾಜಕೀಯ ಪಕ್ಷಭೇದ ಮರೆತು ನಾಯಕರು, ಸಚಿವರು, ಶಾಸಕರು ಹಾಗೂ ಸ್ಥಳೀಯ ಪಕ್ಷದ ಮುಖಂಡರು ಫಿಲ್ಟರ್ ಕಾಫಿ ಸವಿಯುತ್ತಾ ಅನೌಪಚಾರಿಕ ಮಾತುಕತೆ ನಡೆಸುತ್ತಿದ್ದ ತಾಣವಾಗಿತ್ತು.
ಸ್ಥಳಾಂತರ ಮತ್ತು ಪುನರಾರಂಭ
ಮೂಲ ರೇಸ್‌ಕೋರ್ಸ್ ರಸ್ತೆಯಲ್ಲಿದ್ದ ಸಾಮ್ರಾಟ್ ರೆಸ್ಟೋರೆಂಟ್‌ನ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ 2022ರ ಸೆಪ್ಟೆಂಬರ್‌ನಲ್ಲಿ ಅದು ಮುಚ್ಚಿತ್ತು.
ಬಳಿಕ ಶೇಷಾದ್ರಿಪುರಂ/ವಸಂತನಗರದಲ್ಲಿ ಚಾಲುಕ್ಯ ಸಾಮ್ರಾಟ್ ಹೆಸರಿನಲ್ಲಿ ಬ್ರ್ಯಾಂಡ್ ಪುನಾರಂಭಗೊಂಡಿದ್ದು, ಹಳೆಯ ಗ್ರಾಹಕರು ಹಾಗೂ ಪ್ರಮುಖ ಸ್ಥಳೀಯ ಮತ್ತು ಪ್ರಾದೇಶಿಕ ರಾಜಕೀಯ ನಾಯಕರನ್ನು ಸೆಳೆಯುತ್ತಿದೆ.
ತಮ್ಮ ಹೊಟೇಲ್ ಕೊಠಡಿ, ಆವರಣವನ್ನು ಪದೇಪದೇ ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದನ್ನು ಕಂಡು ಬೇಸತ್ತಿರುವ ಸಾಮ್ರಾಟ್ ಹೋಟೆಲ್ ವ್ಯವಸ್ಥಾಪಕರು, ಇದೀಗ ರಾಜಕೀಯಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಹೊಟೇಲ್ ಆವರಣದಲ್ಲಿ ರಾಜಕೀಯ ಚಟುವಟಿಕೆಗಳಿಗೆ ಇನ್ನು ಮುಂದೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಫಲಕವನ್ನು ಹೊಟೇಲ್ ಆಡಳಿತ ಅಳವಡಿಸಿದೆ.