ವೇಗವಾಗಿ ಬಂದ ಕಂಟೈನರ್ ಟ್ರಕ್ ಢಿಕ್ಕಿ; ದಾವಣಗೆರೆ ಟೋಲ್ ಪ್ಲಾಜಾ ಬಳಿ ಪಾರಾದ ವ್ಯಕ್ತಿ! Video

CCTV ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಕಂಟೈನರ್ ಟ್ರಕ್ ವೇಗವಾಗಿ ಟೋಲ್‌ಲೇನ್‌ ನತ್ತ ಬರುತ್ತಿರುವುದು ಹಾಗೂ ಬಳಿಕ ನಿಯಂತ್ರಣ ತಪ್ಪಿದಂತೆ ಕಾಣಿಸುವುದು ಕಂಡುಬರುತ್ತದೆ.
Major accident averted in Davanagere Toll plaza
ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಘಾತ
Updated on

ದಾವಣಗೆರೆ: ಕರ್ನಾಟಕದ ದಾವಣಗೆರೆ ಜಿಲ್ಲೆಯ ಟೋಲ್‌ಪ್ಲಾಜಾದಲ್ಲಿ ಭಾರೀ ಅಪಘಾತದಲ್ಲಿ ವ್ಯಕ್ತಿಯೋರ್ವ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಘಟನೆಯ CCTV ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ದಾವಣಗೆರೆಯ ಹೆಬ್ಬಾಳ್ ಟೋಲ್‌ಪ್ಲಾಜಾ ಕಡೆಗೆ ವೇಗವಾಗಿ ಬಂದ ಕಂಟೈನರ್ ಟ್ರಕ್ ವೊಂದು ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು, ಪರಿಣಾಮ, ಟೋಲ್‌ಬೂತ್‌ನಲ್ಲಿದ್ದ ಸಿಬ್ಬಂದಿ ಹಾಗೂ ಅಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

CCTV ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಕಂಟೈನರ್ ಟ್ರಕ್ ವೇಗವಾಗಿ ಟೋಲ್‌ಲೇನ್‌ ನತ್ತ ಬರುತ್ತಿರುವುದು ಹಾಗೂ ಬಳಿಕ ನಿಯಂತ್ರಣ ತಪ್ಪಿದಂತೆ ಕಾಣಿಸುವುದು ಕಂಡುಬರುತ್ತದೆ.

Major accident averted in Davanagere Toll plaza
ಪತ್ನಿ ಮೇಲೆ ಅನುಮಾನ; ಜೆಲಟಿನ್ ಕಡ್ಡಿ ಇಟ್ಟು ಮಾವನ ಮನೆ ಸ್ಫೋಟಿಸಿದ ಅಳಿಯ! ಇಬ್ಬರು ಸಾವು

ಕಂಟೈನರ್ ಟೋಲ್ ನಲ್ಲಿ ನಿಂತಿದ್ದ ಕಾರಿಗೆ ಢಿಕ್ಕಿಯಾಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದಕ್ಕೂ ಮೊದಲು ಕಾರಿನ ಬಳಿ ವ್ಯಕ್ತಿಯೊಬ್ಬರು ನಿಂತಿದ್ದರು. ಹಿಂದಿನಿಂದ ಟ್ರಕ್ ಬರುತ್ತಿರುವುದನ್ನು ನೋಡಿ ಅಲ್ಲಿಂದ ಪಾರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com