ತಂತ್ರಜ್ಞಾನ ಲೋಕದಲ್ಲಿ ಕರ್ನಾಟಕದ ಹೊಸ ಮೈಲಿಗಲ್ಲು: 1.5 ಲಕ್ಷಕ್ಕೂ ಅಧಿಕ ದತ್ತಾಂಶ ಒಂದೇ ವೇದಿಕೆಯಲ್ಲಿ; ಏನಿದು 'Tathyakosh' ಪೋರ್ಟಲ್..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

ಇದರಿಂದ ಅಗತ್ಯ ಮಾಹಿತಿಯನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ತಥ್ಯಕೋಶವು 458 ದತ್ತಾಂಶ ಮೂಲಗಳಿಂದ 15 ಲಕ್ಷಕ್ಕೂ ಅಧಿಕ ದತ್ತಾಂಶಗಳನ್ನು ಒಂದೇ ಹುಡುಕಬಹುದಾದ ವೇದಿಕೆಯಲ್ಲಿ ಒಗ್ಗೂಡಿಸಿದೆ.
Minister Priyank Kharge during the launch of Tathyakosh on Wednesday.
ತಥ್ಯಕೋಶ ಬಿಡುಗಡೆ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ.
Updated on

ಬೆಂಗಳೂರು: ರಾಜ್ಯದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಮತ್ತೊಂದು ದೊಡ್ಡ ಹೆಜ್ಜೆ ಇಡಲಾಗಿದೆ. ಭಾರತದಾದ್ಯಂತ ಚದುರಿಹೋಗಿರುವ ಸಾರ್ವಜನಿಕ ದತ್ತಾಂಶಗಳನ್ನು (Public Datasets) ಒಂದೇ ಸೂರಿನಡಿ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು 'Tathyakosh.in' (ತಥ್ಯಕೋಶ) ಎಂಬ ವಿನೂತನ ಮುಕ್ತ ಪೋರ್ಟಲ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಮಹತ್ವಾಕಾಂಕ್ಷಿ ಜಾಲತಾಣವನ್ನು ಲೋಕಾರ್ಪಣೆ ಮಾಡಿದರು.

ಈ ಪೋರ್ಟಲ್‌ನಲ್ಲಿ ಒಟ್ಟು 1.5 ಮಿಲಿಯನ್ ಸಾರ್ವಜನಿಕ ದತ್ತಾಂಶಗಳನ್ನು ಸುಲಭವಾಗಿ ಹುಡುಕುವಂತೆ ಇಂಡೆಕ್ಸ್ ಮಾಡಲಾಗಿದೆ. ಇದು ಲಾಭರಹಿತ 'ಡಿಜಿಟಲ್ ಸಾರ್ವಜನಿಕ ಆಸ್ತಿ' (Digital Public Good) ಆಗಿ ಕಾರ್ಯನಿರ್ವಹಿಸಲಿದ್ದು, ದೇಶದ ನವೋದ್ಯಮಗಳು (Startups), ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ರೂಪಿಸುವವರಿಗೆ ಇದು ದತ್ತಾಂಶದ ಗಣಿಯಾಗಲಿದೆ.

ಭಾರತದಲ್ಲಿ ಸಾರ್ವಜನಿಕ ದತ್ತಾಂಶಗಳು ವಿವಿಧ ಸರ್ಕಾರಿ ಜಾಲತಾಣಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಇತರೆ ಸಂಗ್ರಹಗಳಲ್ಲಿ ಚದುರಿಕೊಂಡಿವೆ.

ಇದರಿಂದ ಅಗತ್ಯ ಮಾಹಿತಿಯನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ತಥ್ಯಕೋಶವು 458 ದತ್ತಾಂಶ ಮೂಲಗಳಿಂದ 15 ಲಕ್ಷಕ್ಕೂ ಅಧಿಕ ದತ್ತಾಂಶಗಳನ್ನು ಒಂದೇ ಹುಡುಕಬಹುದಾದ ವೇದಿಕೆಯಲ್ಲಿ ಒಗ್ಗೂಡಿಸಿದೆ.

‘ತಥ್ಯಕೋಶ’ ಎಂಬ ಹೆಸರು ಸಂಸ್ಕೃತದ ‘ತಥ್ಯ’ ಮತ್ತು ‘ಕೋಶ’ ಎಂಬ ಪದಗಳಿಂದ ಬಂದಿದೆ. ‘ತಥ್ಯ’ ಎಂದರೆ ಸತ್ಯ ಅಥವಾ ವಾಸ್ತವಾಂಶ, ‘ಕೋಶ’ ಎಂದರೆ ಸಂಗ್ರಹ ಅಥವಾ ಭಂಡಾರ ಎಂಬ ಅರ್ಥ.

ವಿವಿಧ ಮೂಲಗಳಿಂದ ಸಾರ್ವಜನಿಕ ದತ್ತಾಂಶಗಳನ್ನು ಒಂದೆಡೆ ಸೇರಿಸುವ ಮೂಲಕ ಸಂಶೋಧಕರು, ಅಭಿವೃದ್ಧಿಪಡಿಸುವವರು, ನವೋದ್ಯಮಗಳು ಹಾಗೂ ನೀತಿ ನಿರೂಪಕರಿಗೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪತ್ತೆಹಚ್ಚಲು ವೇದಿಕೆ ನೆರವಾಗಲಿದೆ.

Minister Priyank Kharge during the launch of Tathyakosh on Wednesday.
Watch | ಕೈದಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ: ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು..!

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರು, “ಭಾರತದ ಕೃತಕ ಬುದ್ಧಿಮತ್ತೆಯ ಮಹತ್ವಾಕಾಂಕ್ಷೆಗಳು ಪ್ರತಿಭೆ ಮತ್ತು ಗಣಕ ಸಾಮರ್ಥ್ಯದ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ನಮ್ಮ ಸಂಸ್ಥೆಗಳಲ್ಲಿ ಈಗಾಗಲೇ ಲಭ್ಯವಿರುವ ಅಪಾರ ಪ್ರಮಾಣದ ದತ್ತಾಂಶವನ್ನು ಹುಡುಕಿ ಬಳಸಿಕೊಳ್ಳುವ ಸಾಮರ್ಥ್ಯವೂ ಮುಖ್ಯವಾಗಿದೆ” ಎಂದು ಹೇಳಿದರು.

ಈ ದತ್ತಾಂಶವನ್ನು ಸುಲಭವಾಗಿ ಪತ್ತೆಹಚ್ಚಲು, ವ್ಯವಸ್ಥಿತಗೊಳಿಸಲು ಮತ್ತು ಬಳಸಿಕೊಳ್ಳಲು ತಥ್ಯಕೋಶ ನೆರವಾಗಲಿದೆ. ಮುಕ್ತ ಹಾಗೂ ವಾಣಿಜ್ಯೇತರ ಡಿಜಿಟಲ್ ಸಾರ್ವಜನಿಕ ಸೌಲಭ್ಯವಾಗಿ ಇದನ್ನು ನಿರ್ಮಿಸುವ ಮೂಲಕ ಸಂಶೋಧಕರು, ನವೋದ್ಯಮಗಳು, ಅಭಿವೃದ್ಧಿಪಡಿಸುವವರು ಮತ್ತು ನೀತಿ ನಿರೂಪಕರು ಭಾರತೀಯ ದತ್ತಾಂಶದ ಆಧಾರದ ಮೇಲೆ ಹೊಸ ಯೋಜನೆಗಳನ್ನು ರೂಪಿಸಲು ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ” ಎಂದು ತಿಳಿಸಿದರು,

ಎಸಿಇಎಸ್‌ಎಲ್‌ ತಂತ್ರಜ್ಞಾನ ವೇದಿಕೆಯ ನಿರ್ದೇಶಕ ಅಶೋಕ್‌ ಕಾಮತ್‌ ಮಾತನಾಡಿ, “ಭಾರತದಲ್ಲಿ ದತ್ತಾಂಶದ ಕೊರತೆಯಿಲ್ಲ. ಆದರೆ ದತ್ತಾಂಶ ಎಲ್ಲಿದೆ, ಅದು ಸಂಬಂಧಿತವೇ, ವಿಶ್ವಾಸಾರ್ಹವೇ ಮತ್ತು ಅದನ್ನು ಬಳಸಬಹುದೇ ಎಂಬುದನ್ನು ತಿಳಿದುಕೊಳ್ಳುವುದೇ ಸವಾಲಾಗಿದೆ” ಎಂದರು.

16 ಕ್ಷೇತ್ರಗಳ ದತ್ತಾಂಶ ಲಭ್ಯ

ತಥ್ಯಕೋಶದಲ್ಲಿ ಪ್ರಸ್ತುತ 458 ಮೂಲಗಳಿಂದ 15 ಲಕ್ಷಕ್ಕೂ ಅಧಿಕ ದತ್ತಾಂಶ ಸಂಗ್ರಹಗಳನ್ನು ಪಟ್ಟಿ ಮಾಡಲಾಗಿದೆ. ಕ್ಷೇತ್ರ, ಭೌಗೋಳಿಕ ವ್ಯಾಪ್ತಿ, ಕಾಲಾವಧಿ, ಸ್ವರೂಪ ಮತ್ತು ಪ್ರವೇಶದ ವಿಧ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ದತ್ತಾಂಶಗಳನ್ನು ವ್ಯವಸ್ಥಿತವಾಗಿ ವರ್ಗೀಕರಿಸಲಾಗಿದೆ.

ವೇದಿಕೆಯಲ್ಲಿ ಆರೋಗ್ಯ, ಕೃಷಿ, ಶಿಕ್ಷಣ, ಮೂಲಸೌಕರ್ಯ, ಪರಿಸರ, ಆರ್ಥಿಕತೆ ಮತ್ತು ಆಡಳಿತ ಸೇರಿದಂತೆ ಒಟ್ಟು 16 ಕ್ಷೇತ್ರಗಳ ದತ್ತಾಂಶ ಲಭ್ಯವಿದೆ.

ಇವುಗಳಲ್ಲಿ 346 ಭಾರತೀಯ ಮೂಲಗಳು ಹಾಗೂ ಭಾರತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡ 37 ಅಂತಾರಾಷ್ಟ್ರೀಯ ದತ್ತಾಂಶ ಸಂಗ್ರಹಗಳು ಸೇರಿವೆ.

ವೇದಿಕೆಯಲ್ಲಿ ಪಟ್ಟಿ ಮಾಡಿರುವ ದತ್ತಾಂಶಗಳ ಪೈಕಿ ಶೇ.92ಕ್ಕೂ ಹೆಚ್ಚು ಮುಕ್ತ ಪ್ರವೇಶ ಹೊಂದಿವೆ. ಅಲ್ಲದೆ, ಶೇ.95ರಷ್ಟು ದತ್ತಾಂಶಗಳು ಯಂತ್ರ-ಓದಬಹುದಾದ ಸ್ವರೂಪದಲ್ಲಿ ಲಭ್ಯವಿವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com