KEA ಕಚೇರಿಯಲ್ಲಿ ಗೊಂದಲ, ಗದ್ದಲ: ಎಂಜಿನಿಯರಿಂಗ್ ಸೀಟು ರದ್ದುಗೊಳಿಸಲು ಬಹುಸಂಖ್ಯೆಯಲ್ಲಿ ಬಂದ ವಿದ್ಯಾರ್ಥಿಗಳು

ಸೀಟು ರದ್ದುಗೊಳಿಸಲು ಬಹಳ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಬರಬಹುದು ಎಂದು ನಿರೀಕ್ಷಿಸಿದ್ದೆವು. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ, ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳೂ ಸೀಟು ರದ್ದುಗೊಳಿಸಲು ಆಗಮಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.
Karnataka Examination authority
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿ
Updated on

ಬೆಂಗಳೂರು: ಎಂಜಿನಿಯರಿಂಗ್ ಸೀಟುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ನಿನ್ನೆ ಗುರುವಾರ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಗೆ ಆಗಮಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಎಂಜಿನಿಯರಿಂಗ್ ಸೀಟು ಪಡೆದಿದ್ದು, ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಗುಳಿಯಲು ಬಯಸುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಆನ್‌ಲೈನ್‌ ಮೂಲಕವೇ ಸೀಟು ರದ್ದುಗೊಳಿಸಲು KEA ಅವಕಾಶ ನೀಡಲಿದೆ.

ಸೀಟು ರದ್ದುಗೊಳಿಸಲು ಬಹಳ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಬರಬಹುದು ಎಂದು ನಿರೀಕ್ಷಿಸಿದ್ದೆವು. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ, ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳೂ ಸೀಟು ರದ್ದುಗೊಳಿಸಲು ಆಗಮಿಸಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.

Karnataka Examination authority
ಸಿಇಟಿ ಫಲಿತಾಂಶ ವಿಳಂಬಕ್ಕೆ ಕೆಇಎ ಅಧಿಕಾರಿಗಳ ಸಮರ್ಥನೆ: ಆತಂಕದಲ್ಲಿ ವಿದ್ಯಾರ್ಥಿಗಳು
Karnataka Examination authority
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸೆಲಿಂಗ್ ನಿಯಮಗಳಲ್ಲಿ ಬದಲಾವಣೆ: ವಿದ್ಯಾರ್ಥಿಗಳಲ್ಲಿ ಗೊಂದಲ

ಎರಡನೇ ಸುತ್ತಾಗಿದ್ದರಿಂದ ಹಾಗೂ ಪ್ರವೇಶವನ್ನು ಕಡ್ಡಾಯಗೊಳಿಸಿದ್ದರಿಂದ ಬಹಳ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಬರುವ ನಿರೀಕ್ಷೆಯಲ್ಲಿದ್ದೆವು. ಸೀಟು ಬ್ಲಾಕಿಂಗ್‌ ತಡೆಯುವ ಉದ್ದೇಶದಿಂದ ಸೀಟು ರದ್ದುಗೊಳಿಸಲು ವಿದ್ಯಾರ್ಥಿಗಳು ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದೆವು ಎಂದು ಅಧಿಕಾರಿಗಳು ಹೇಳುತ್ತಾರೆ.

ಆದರೆ, ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ ಹಿನ್ನೆಲೆಯಲ್ಲಿ KEA ಆನ್‌ಲೈನ್‌ ಮೂಲಕ ಸೀಟು ರದ್ದುಗೊಳಿಸುವ ಅವಕಾಶ ಕಲ್ಪಿಸಿದೆ. ಜತೆಗೆ, ಕಾಲೇಜುಗಳಿಗೆ ವರದಿ ಮಾಡುವ ಕೊನೆಯ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದ್ದು, ಸೀಟು ರದ್ದತಿ ಸೇರಿದಂತೆ ತಮ್ಮ ಆಯ್ಕೆಗಳನ್ನು ದಾಖಲಿಸಲು ಆಗಸ್ಟ್ 29ರವರೆಗೆ ಅವಕಾಶ ನೀಡಲಾಗಿದೆ.

ಹಲವು ವಿದ್ಯಾರ್ಥಿಗಳು ಸೀಟು ರದ್ದುಗೊಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲೇ ಈ ಅವಕಾಶ ನೀಡಲಾಗಿದೆ. ಆದರೆ, ಸೀಟು ಬ್ಲಾಕ್ ಮಾಡುವ ಉದ್ದೇಶದಿಂದ ಯಾರಾದರೂ ರದ್ದತಿ ಆಯ್ಕೆಯನ್ನು ಬಳಸಿಕೊಂಡರೆ, ಅವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಎಚ್ಚರಿಕೆ ನೀಡಿದರು.

ಪರಿಶೀಲನೆಗೆ ಒಳಪಡುವ ಪ್ರಕ್ರಿಯೆ

ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಸೀಟುಗಳನ್ನು ರದ್ದುಪಡಿಸುವುದು KEAಯ ಉದ್ದೇಶವಾಗಿತ್ತು. ಸೀಟು ಬ್ಲಾಕಿಂಗ್‌ ತಡೆಯಲು ವಿದ್ಯಾರ್ಥಿಗಳ ಫೋಟೋಗಳನ್ನು ಸಹ ಪಡೆಯಲು ಯೋಜಿಸಲಾಗಿತ್ತು

ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್ ಸೇರಿದಂತೆ ಇತರ ಕೋರ್ಸ್‌ಗಳಿಗೆ ಸೀಟು ಹಂಚಿಕೆ ನಡೆಯುತ್ತಿದೆ. ಹಂಚಿಕೆಯಾದ ಸೀಟು ಬೇಡವೆಂದಾದರೆ ವಿದ್ಯಾರ್ಥಿಗಳು ‘ಚಾಯ್ಸ್-4’ ಆಯ್ಕೆ ಮಾಡಬಹುದು. ಹಾಗೆ ಮಾಡಿದ ಬಳಿಕವೂ ಎರಡನೇ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಮುಂದುವರಿಸಬಹುದು ಎಂದು ಕೆ ಪ್ರಸನ್ನ ಸ್ಪಷ್ಟಪಡಿಸಿದರು.

ಎರಡನೇ ತಾತ್ಕಾಲಿಕ ಫಲಿತಾಂಶ ಪ್ರಕಟ

ಇದೇ ವೇಳೆ, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ಎರಡನೇ ತಾತ್ಕಾಲಿಕ ಫಲಿತಾಂಶಗಳನ್ನು KEA ಪ್ರಕಟಿಸಿದೆ.

ಮೊದಲ ಸುತ್ತಿನಲ್ಲೇ ಒಟ್ಟು 11,875 ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಲಾಗಿತ್ತು. ಅಖಿಲ ಭಾರತ ಕೋಟಾದಡಿ ಅಥವಾ ಇತರ ರಾಜ್ಯಗಳಲ್ಲಿ ಸೀಟು ಪಡೆದ 478 ಅಭ್ಯರ್ಥಿಗಳು KEAಯಿಂದ ತಮಗೆ ಹಂಚಿಕೆಯಾಗಿದ್ದ ಸೀಟುಗಳನ್ನು ರದ್ದುಪಡಿಸಿದ್ದಾರೆ.

ಖಾಲಿಯಾಗಿರುವ ಈ ಸೀಟುಗಳನ್ನು ಹೊಸ ಸೀಟು ಹಂಚಿಕೆಯಲ್ಲಿ ಸೇರಿಸಲಾಗುವುದು. ಮೊದಲ ಸುತ್ತಿನಲ್ಲಿ ಒಟ್ಟು 2,684 ದಂತ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com