ಚಾಡ್‌ನಲ್ಲಿ ಸಿಲುಕಿರುವ ರಾಜ್ಯದ ಎಂಟು ಹಕ್ಕಿ ಪಿಕ್ಕಿ ಪುರುಷರಿಗೆ ವಿದೇಶಾಂಗ ಇಲಾಖೆ ನೆರವು: ಪ್ರಭಾ ಮಲ್ಲಿಕಾರ್ಜುನ್

ವಿದೇಶಾಂಗ ಸಚಿವಾಲಯವು ತಕ್ಷಣವೇ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆ, ಯಾವುದೇ ದಂಡವಿಲ್ಲದೆ ಸಿಕ್ಕಿಬಿದ್ದ ವ್ಯಕ್ತಿಗಳ ವೀಸಾಗಳನ್ನು ನವೀಕರಿಸಲು ವ್ಯವಸ್ಥೆ ಮಾಡಿದೆ ಎಂದು ಡಾ. ಪ್ರಭಾ ಮಾಹಿತಿ ನೀಡಿದ್ದಾರೆ.
Prabha Mallikarjun
ಪ್ರಭಾ ಮಲ್ಲಿಕಾರ್ಜುನ್
Updated on

ದಾವಣಗೆರೆ: ಆಫ್ರಿಕಾದ ಚಾಡ್ ದೇಶದಲ್ಲಿ ಸಿಲುಕಿರುವ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ ಎಂಟು ಜನರ ಸಮಸ್ಯೆಯನ್ನು ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಗಮನಕ್ಕೆ ತಂದಿದ್ದ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಅವರನ್ನು ಭಾರತಕ್ಕೆ ವಾಪಸ್ ಕರೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಡ್‌ನಲ್ಲಿ ಸಿಲುಕಿದ್ದ ಕರ್ನಾಟಕದ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಎಂಟು ಜನರ ವೀಸಾ ಸಮಸ್ಯೆಯನ್ನು ಜೈಶಂಕರ್ ಅವರ ಗಮನಕ್ಕೆ ತಂದಿದ್ದೇನೆ ಸಮಸ್ಯೆಯನ್ನು ಪರಿಹರಿಸಿದ್ದೇನೆ" ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ದಾವಣಗೆರೆ ಜಿಲ್ಲೆಯ ಇಬ್ಬರು, ಶಿವಮೊಗ್ಗದ ಐದು ಮತ್ತು ಚಿಕ್ಕಮಗಳೂರಿನ ಒಬ್ಬರು ವೀಸಾ ಅವಧಿ ಮುಗಿದ ನಂತರ ಬಂಧನ ಭೀತಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ವಿದೇಶಾಂಗ ಸಚಿವಾಲಯವು ತಕ್ಷಣವೇ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆ, ಯಾವುದೇ ದಂಡವಿಲ್ಲದೆ ಸಿಕ್ಕಿಬಿದ್ದ ವ್ಯಕ್ತಿಗಳ ವೀಸಾಗಳನ್ನು ನವೀಕರಿಸಲು ವ್ಯವಸ್ಥೆ ಮಾಡಿದೆ ಎಂದು ಡಾ. ಪ್ರಭಾ ಮಾಹಿತಿ ನೀಡಿದ್ದಾರೆ.

ಇವರೆಲ್ಲರ ವೀಸಾ ಅವಧಿ ಡಿಸೆಂಬರ್ 22, 2025 ರಂದು ಮುಕ್ತಾಯಗೊಂಡಿತು, ನಂತರ ಸ್ಥಳೀಯ ಪೊಲೀಸರು ವೀಸಾ ನವೀಕರಣಕ್ಕಾಗಿ ತಲಾ 1.5 ಲಕ್ಷ ರೂ. ದಂಡ ಪಾವತಿಸಲು ಸೂಚಿಸಿದ್ದರು. ದಂಡ ಪಾವತಿಸಲು ವಿಳಂಬವಾದರೆ ಜೈಲು ಶಿಕ್ಷೆ ವಿಧಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ.

Prabha Mallikarjun
ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಪ್ರಾಯೋಜಕತ್ವದಲ್ಲಿ 9 SSLC ಟಾಪರ್‌ಗಳಿಗೆ ದೆಹಲಿ ಶೈಕ್ಷಣಿಕ ಪ್ರವಾಸ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com