ಉದ್ಯಮಿಗೆ ಬ್ಲಾಕ್ ಮೇಲ್: ನಟಿ ಕೃಷಿ ತಾಪಂಡಗೆ ನೋಟಿಸ್, ಸ್ನೇಹಿತನ ಬಂಧನ!

ಕೃಷಿ ತಾಪಂಡ ಈ ಹಿಂದೆ ದೂರು ನೀಡಿದ್ದ ಉದ್ಯಮಿ ಅರವಿಂದ್‌ ರೆಡ್ಡಿಗೆ ಇತ್ತೀಚೆಗೆ ಬೆದರಿಕೆ ಪತ್ರವೊಂದು ಬಂದಿತ್ತು. ಅನಾಮಿಕನೊಬ್ಬ ಅರವಿಂದ ರೆಡ್ಡಿ ಬಳಿ ಏಳು ಕೋಟಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಬೆದರಿಕೆ ಸಹ ಹಾಕಲಾಗಿತ್ತು.
Actress Krishi Thapanda and businessman Arvind Reddy
ನಟಿ ಕೃಷಿ ತಾಪಂಡ ಮತ್ತು ಉದ್ಯಮಿ ಅರವಿಂದ್‌ ರೆಡ್ಡಿ
Updated on

ಬೆಂಗಳೂರು: ಎಆರ್‌ವಿ ಗ್ರೂಪ್‌ ಮಾಲೀಕ ಅರವಿಂದ್‌ ರೆಡ್ಡಿ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕೃಷಿ ತಾಪಂಡ ಈ ಹಿಂದೆ ದೂರು ನೀಡಿದ್ದ ಉದ್ಯಮಿ ಅರವಿಂದ್‌ ರೆಡ್ಡಿಗೆ ಇತ್ತೀಚೆಗೆ ಬೆದರಿಕೆ ಪತ್ರವೊಂದು ಬಂದಿತ್ತು. ಅನಾಮಿಕನೊಬ್ಬ ಅರವಿಂದ ರೆಡ್ಡಿ ಬಳಿ ಏಳು ಕೋಟಿಗೆ ಬೇಡಿಕೆ ಇಟ್ಟಿದ್ದಲ್ಲದೆ, ಬೆದರಿಕೆ ಸಹ ಹಾಕಲಾಗಿತ್ತು.

ಈ ಬಗ್ಗೆ ಅರವಿಂದ ರೆಡ್ಡಿ ಸಂಜಯ್​​ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡ ಆಪ್ತ ಎನ್ನಲಾಗಿದೆ.

ಅರವಿಂದ ರೆಡ್ಡಿಗೆ ಬರೆಯಲಾಗಿದ್ದ ಪತ್ರದಲ್ಲಿ ಮಹಿಳೆಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸಬೇಕು ಜೊತೆಗೆ ಏಳು ಕೋಟಿ ರೂಪಾಯಿ ಹಣ ನೀಡಬೇಕು ಎಂದು ಬೆದರಿಕೆ ಹಾಕಲಾಗಿತ್ತು. ಪತ್ರವನ್ನು ಅರವಿಂದ ರೆಡ್ಡಿ ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪತ್ರವನ್ನು ಬನಶಂಕರಿಯಿಂದ ಕೊರಿಯರ್ ಮಾಡಿದ್ದು ಪತ್ತೆ ಹಚ್ಚಿದರು.

Actress Krishi Thapanda and businessman Arvind Reddy
ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ; ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದ ಮಾತನಾಡುತ್ತಿದ್ದಾರೆ: ಕೃಷಿ ತಾಪಂಡ

ಆಪ್ತನ ಬಂಧನ

ಬಳಿಕ ಮೆಕ್ಯಾನಿಕ್ ಓರ್ವ ಆ ಪತ್ರವನ್ನು ಕೊರಿಯರ್ ಮಾಡಿದ್ದು ಪತ್ತೆ ಹಚ್ಚಿದರು. ಆ ಯುವಕ, ವೈಶಾಖ್ ಎಂಬಾತ ತಮಗೆ ಪತ್ರ ಕೊರಿಯರ್ ಮಾಡಲು ಎಂಬುದಾಗಿ ಹೇಳಿದ್ದಾನೆ.

ಇದೀಗ ಪೊಲೀಸರು ವೈಶಾಖ್ ನನ್ನು ಬಂಧಿಸಿದ್ದು, ಆತ ನಟಿ ಕೃಷಿ ತಾಪಂಡಗೆ ಆಪ್ತ ಎನ್ನಲಾಗಿದ್ದು, ವೈಶಾಖ್, ಕೃಷಿ ತಾಪಂಡ ಮನೆಯನ್ನೇ ಬಂಧನಕ್ಕೆ ಒಳಗಾಗಿದ್ದಾನೆ ಎಂದ ಸುದ್ದಿಯೂ ಹರಿದಾಡುತ್ತಿದೆ. ವೈಶಾಖ್ ತನ್ನ ಮೊಬೈಲ್ ಅನ್ನು ಕೃಷಿ ತಾಪಂಡ ಮನೆಯಲ್ಲೇ ಅಡಗಿಸಿಟ್ಟಿದ್ದಾನೆ ಎಂದು ಹೇಳಲಾಗಿದೆ.

ಉದ್ಯಮಿ ವಿರುದ್ಧ ಆರೋಪ ಮಾಡಿದ್ದ ನಟಿ

ಈ ಹಿಂದೆ ಇದೇ ಕೃಷಿ ತಾಪಂಡ ಅವರು ಉದ್ಯಮಿ ಅರವಿಂದ ರೆಡ್ಡಿ ವಿರುದ್ಧ ಮಾನಸಿಕ ಕಿರುಕುಳದ ದೂರು ದಾಖಲಿಸಿದ್ದರು. ಇದೀಗ ಕೃಷಿ ತಾಪಂಡ ಆಪ್ತನೇ ಅರವಿಂದ ರೆಡ್ಡಿಗೆ ಬ್ಲಾಕ್​​ಮೇಲ್ ಮಾಡಲು ಯತ್ನಿಸಿದ್ದು, ಏಳು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com