

ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು, ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ನೀರಿಗೆ ಯಾವುದೇ ತೊಂದರೆಗಳಿಲ್ಲ ಎಂಬ ಭರವಸೆ ಮೂಡಿಸಿತ್ತು, ಆದರೆ ವಾಸ್ತವ ಬೇರೆಯೇ ಇದೆ.
ರಾಜ್ಯದ 13 ಪ್ರಮುಖ ಅಣೆಕಟ್ಟುಗಳ ಪೈಕಿ ಹತ್ತು ಜಲಾಶಯಗಳಲ್ಲಿ ಈಗ ಹಿಂದಿನ ವರ್ಷಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಣೆಕಟ್ಟುಗಳಿಂದ ನೀರು ಆವಿಯಾಗುವಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ, ಅತಿಯಾದ ಬಳಕೆ ಅಂತರ್ಜಲದ ಮೇಲೂ ಪರಿಣಾಮ ಬೀರಿದೆ.
ಈ ಬೇಸಿಗೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಕುಡಿಯುವ ನೀರು ಕಳವಳಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಮಾಹಿತಿಯ ಪ್ರಕಾರ, 2025 ರಲ್ಲಿ ಎಲ್ಲಾ 13 ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವು 535 ಸಾವಿರ ಮಿಲಿಯನ್ ಘನ ಅಡಿ (ಟಿಎಂಸಿಎಫ್‌ಟಿ) ಆಗಿತ್ತು, ಆದರೆ ಈಗ ಅದು 493 ಟಿಎಂಸಿಎಫ್‌ಟಿ ಆಗಿದೆ, 42 ಟಿಎಂಸಿಎಫ್‌ಟಿಯ ವ್ಯತ್ಯಾಸವಾಗಿದೆ.
ಕಳೆದ ವರ್ಷ ತುಂಗಭದ್ರಾ ಅಣೆಕಟ್ಟೆಯಲ್ಲಿ ಸುಮಾರು 40 ಟಿಎಂಸಿಎಫ್‌ಟಿ ನೀರು ಇದ್ದು, ಈಗ ಅದು 24 ಟಿಎಂಸಿಎಫ್‌ಟಿಗೆ ಇಳಿದಿದೆ. ಅದೇ ರೀತಿ, ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಈಗ 87 ಟಿಎಂಸಿಎಫ್‌ಟಿ ಇದೆ, ಕಳೆದ ವರ್ಷ 78 ಟಿಎಂಸಿಎಫ್‌ಟಿ ಇದೆ.
ಸೂಪಾ ಅಣೆಕಟ್ಟಿನ ನೀರಿನ ಮಟ್ಟ 82 ಟಿಎಂಸಿಎಫ್‌ಟಿಯಿಂದ 77 ಅಡಿಗೆ ಇಳಿದಿದೆ. ಕೃಷ್ಣರಾಜ ಜಲಾಶಯದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಕಳೆದ ವರ್ಷ ಇದು 37.88 ಟಿಎಂಸಿಎಫ್‌ಟಿ ಇತ್ತು, ಈಗ ಅದು 38.64 ಟಿಎಂಸಿಎಫ್‌ಟಿ ಆಗಿದೆ. 13 ಅಣೆಕಟ್ಟುಗಳಲ್ಲಿ ಒಟ್ಟು ಸಾಮರ್ಥ್ಯ 895.07 ಟಿಎಂಸಿ ಅಡಿಯಿದೆ. ಆದರೆ ಸದ್ಯ 493.91 ಟಿಎಂಸಿ ಅಡಿಯಿದೆ. ಆಂದರೆ ಸಾಮರ್ಥ್ಯದ ಶೇ. 45 ರಷ್ಟು ಮಾತ್ರ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಕ್ರೆಸ್ಟ್ ಗೇಟ್‌ಗಳು ಮುರಿದು ನೀರು ನಷ್ಟವಾದ ಕಾರಣ ತುಂಗಭದ್ರಾ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿಯ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ. ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದರೂ, ಜಲಾಶಯವು ಅದರಲ್ಲಿ ಶೇ, 70 ರಷ್ಟು ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಕುಡಿಯುವ ನೀರಿನ ಅಗತ್ಯಗಳೇ ಆದ್ಯತೆಯಾಗಿರುವುದರಿಂದ ರೈತರು ಕೃಷಿ ಜಮೀನುಗಳಿಗೆ ನೀರು ಸರಬರಾಜು ಮಾಡದೆ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ನೀರಿನ ನಷ್ಟದ ಬಗ್ಗೆ ವಿವರಿಸಿದ ರೆಡ್ಡಿ, ಹೆಚ್ಚುತ್ತಿರುವ ತಾಪಮಾನವು ನೀರು ಆವಿಯಾಗಲು ಕಾರಣವಾಗುತ್ತಿದೆ ಎಂದು ಹೇಳಿದರು. ಕೃಷಿಗೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ ಏಕೆಂದರೆ ಸಸ್ಯಗಳು ಹೆಚ್ಚಿನ ನೀರನ್ನು ಬಯಸುತ್ತವೆ" ಎಂದು ಅವರು ಹೇಳಿದರು.
ಅಂತರ್ಜಲದ ತೀವ್ರ ಬಳಕೆಯಿಂದಾಗಿ 43 ತಾಲ್ಲೂಕುಗಳು ಈಗಾಗಲೇ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿವೆ ಎಂದು ವಿಪತ್ತು ನಿರ್ವಹಣಾ ಘಟಕಗದ ಮೂಲಗಳು ತಿಳಿಸಿವೆ. ಅಲ್ಲದೆ, ಕೊಳವೆಬಾವಿಗಳನ್ನು ಅವಲಂಬಿಸಿರುವ ಬೆಂಗಳೂರಿನ ಕೆಲವು ಪ್ರದೇಶಗಳು ಸಹ ಬಿಕ್ಕಟ್ಟನ್ನು ಎದುರಿಸುತ್ತವೆ.
ಅಂತರ್ಜಲದ ತೀವ್ರ ಶೋಷಣೆಯಿಂದಾಗಿ ರಾಜ್ಯಾದ್ಯಂತ 500 ಕ್ಕೂ ಹೆಚ್ಚು ಹಳ್ಳಿಗಳು ನೀರಿನ ಗುಣಮಟ್ಟದ ಸಮಸ್ಯೆಗಳನ್ನು ಎದುರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಜ್ಞರು ಜನರಿಗೆ ಕಡಿಮೆ ನೀರನ್ನು ಬಳಸುವಂತೆ ಮತ್ತು ಅಮೂಲ್ಯವಾದ ನೀರನ್ನು ವ್ಯರ್ಥ ಮಾಡದಂತೆ ಮನವಿ ಮಾಡಿದ್ದಾರೆ. ಕುಡಿಯುವ ನೀರು ಆದ್ಯತೆಯಾಗಿರುವುದರಿಂದ, ನೀರನ್ನು ಇತರ ಉದ್ದೇಶಗಳಿಗಾಗಿ ಬಳಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.
Advertisement