KSIC ಕಾರ್ಖಾನೆ ಆವರಣದಲ್ಲಿ Stadium ನಿರ್ಮಾಣಕ್ಕೆ ಸರ್ಕಾರ ಮುಂದು: ಭಾರೀ ವಿರೋಧ

1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಈ ಕಾರ್ಖಾನೆ ಉನ್ನತ ಗುಣಮಟ್ಟದ ರೇಷ್ಮೆ ನೂಲು ಉತ್ಪಾದಿಸಿ ಮೈಸೂರು ಹಾಗೂ ಚನ್ನಪಟ್ಟಣದ ನೇಯ್ಗೆ ಘಟಕಗಳಿಗೆ ಪೂರೈಕೆ ಮಾಡುತ್ತಿದೆ.
File photo
ಸಂಗ್ರಹ ಚಿತ್ರ
Updated on

ಮೈಸೂರು: ಮೈಸೂರು ಸಮೀಪದ ಟಿ. ನರಸೀಪುರದಲ್ಲಿರುವ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (KSIC) ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ 5 ಎಕರೆ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕಾರ್ಮಿಕರು, ಸ್ಥಳೀಯರು ಹಾಗೂ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಈ ಕಾರ್ಖಾನೆ ಉನ್ನತ ಗುಣಮಟ್ಟದ ರೇಷ್ಮೆ ನೂಲು ಉತ್ಪಾದಿಸಿ ಮೈಸೂರು ಹಾಗೂ ಚನ್ನಪಟ್ಟಣದ ನೇಯ್ಗೆ ಘಟಕಗಳಿಗೆ ಪೂರೈಕೆ ಮಾಡುತ್ತಿದೆ.

ಜಿಯೋಗ್ರಾಫಿಕಲ್ ಇಂಡಿಕೇಶನ್ (GI) ಸ್ಥಾನಮಾನ ಪಡೆದ ಮೈಸೂರು ರೇಷ್ಮೆ ಸೀರೆಗಳ ತಯಾರಿಕೆಗೆ ಈ ನೂಲಿಗೆ ಭಾರೀ ಬೇಡಿಕೆಯಿದೆ.

ಕಾರ್ಖಾನೆ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದ್ದು, 2018–19 ಮತ್ತು 2019–20ರಲ್ಲಿ ಮುಖ್ಯಮಂತ್ರಿ ಸ್ವರ್ಣ ಪದಕವನ್ನು ಪಡೆದಿತ್ತು.

ಇಂತಹ ಸಂದರ್ಭದಲ್ಲಿ ಕಾರ್ಖಾನೆ ಕಾರ್ಯಾಚರಣೆಗೆ ಅಡ್ಡಿಯಾಗುವ ಅಥವಾ ಉತ್ಪಾದನೆ ಕುಗ್ಗಿಸುವ ಯಾವುದೇ ಕ್ರಮವು ಕಾರ್ಮಿಕರ ಜೀವನೋಪಾಯಕ್ಕೆ ಹಾಗೂ ನೇಯ್ಗೆ ಘಟಕಗಳಿಗೆ ದೊಡ್ಡ ಹೊಡೆತ ನೀಡಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆ ಉತ್ಪಾದನಾ ಸಾಮರ್ಥ್ಯವನ್ನು ಕುಗ್ಗಿಸುವ ಬದಲು ವಿಸ್ತರಣೆ ಮಾಡಬೇಕು ಹಾಗೂ ಕ್ರೀಡಾಂಗಣ ಯೋಜನೆಯನ್ನು ಹಿಂಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

File photo
ವಿರೋಧ-ಟೀಕೆಗಳಿಗೆ ಮಣಿದ ಸರ್ಕಾರ: ನಿಯಮ ಪಾಲನೆಗೆ ಮುಂದು; ಕೋಗಿಲು ನಿರಾಶ್ರಿತರಿಗೆ ಮನೆ ಹಂಚಿಕೆಗೆ ತಡೆ..!

ಈ ನಡುವೆ ಸರ್ಕಾರದ ಈ ಯೋಜನೆಗೆ ರಾಜಕೀಯ ಪಕ್ಷಗಳ ನಾಯಕರಿಂದ ಹಿಡಿದು ಕಾರ್ಮಿಕ ಸಂಘಟನೆಗಳು, ಪರಿಸರವಾದಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಪಕ್ಷಾತೀತವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

“ಪರಿಸರಕ್ಕಾಗಿ ನಾವು” ಸೇರಿದಂತೆ ಹಲವು ಸಂಘಟನೆಗಳು ಉಪ ಆಯುಕ್ತರಿಗೆ ಮನವಿ ಸಲ್ಲಿಸಿ, ಭೂಮಿಯನ್ನು ಮತ್ತೆ KSICಗೆ ಮರಳಿಸಿ ಹಾಗೂ ಕ್ರೀಡಾಂಗಣಕ್ಕೆ ಪರ್ಯಾಯ ಸ್ಥಳ ಗುರುತಿಸಬೇಕು ಎಂದು ಪರಿಸರ ಸಂಘಟನೆಗಳು ಆಗ್ರಹಿಸಿವೆ. ಈ ಭೂಮಿಯನ್ನು ಇತ್ತೀಚೆಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವರ್ಗಾಯಿಸಲಾಗಿತ್ತು.

ಮನವಿಯಲ್ಲಿ 5 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳು ಇದ್ದು, ಅನೇಕ ಮರಗಳು ಶತಮಾನಕ್ಕಿಂತ ಹಳೆಯದಾಗಿವೆ ಎಂದು ಉಲ್ಲೇಖಿಸಲಾಗಿದೆ. ಈ ಪ್ರದೇಶವು ಪಕ್ಷಿಗಳು, ಚಿಟ್ಟೆಗಳು, ಕೀಟಗಳು ಮತ್ತು ಸಣ್ಣ ಪ್ರಾಣಿಗಳ ಉತ್ತರ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ಇಲ್ಲಿ 40ಕ್ಕೂ ಹೆಚ್ಚು ಪಕ್ಷಿ ಜಾತಿಗಳು ಹಾಗೂ 10ಕ್ಕೂ ಹೆಚ್ಚು ಚಿಟ್ಟೆಗಳ ಪ್ರಭೇದಗಳಿವೆ. “ಇಲ್ಲಿ ಕ್ರೀಡಾಂಗಣ ನಿರ್ಮಿಸಿದರೆ 500ಕ್ಕೂ ಹೆಚ್ಚು ಮರಗಳು ಮತ್ತು ಅಮೂಲ್ಯ ಪರಿಸರ ವ್ಯವಸ್ಥೆ ನಾಶವಾಗುತ್ತದೆ ಎಂದು ಪರಿಸರವಾದಿ ಪರಶುರಾಮೇ ಗೌಡ ಅವರು ಹೇಳಿದ್ದಾರೆ.

ದೊಡ್ಡ ಪ್ರಮಾಣದ ಮರ ಕಡಿಯುವಿಕೆ ಮತ್ತು ಪರಿಸರ ಅಡಚಣೆಯು ಕಾರ್ಖಾನೆಯ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದೂ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com