

ಬೆಂಗಳೂರು: ಈ ಬಾರಿ ಅವಧಿಗೂ ಮುನ್ನವೇ ಬೇಸಿಗೆ ಆರಂಭವಾಗಿರುವಂತೆ ಭಾಸವಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಬೇಸಿಗೆ, ಈ ಬಾರಿ ಫೆಬ್ರವರಿಯಲ್ಲೇ ಶುರುವಾಗಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿರು ಬಿಸಿಲಿಗೆ ಜನತೆ ತತ್ತರಿಸಿ ಹೋಗುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಶನಿವಾರ (ಫೆಬ್ರವರಿ 21) ದಿಂದ ನಗರದ ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ದಾಟಿದೆ ಎಂದು ತಿಳಿದುಬಂದಿದೆ.
ಮಾರ್ಚ್‌ನಲ್ಲಿ ಅಧಿಕೃತವಾಗಿ ಬೇಸಿಗೆ ಪ್ರಾರಂಭವಾಗುವ ಮೊದಲು, ಫೆಬ್ರವರಿ ಅಂತ್ಯದಲ್ಲಿ ಬೆಂಗಳೂರಿನಲ್ಲಿ ತಾಪಮಾನ ಇದ್ದಕ್ಕಿದ್ದಂತೆ ಏರುತ್ತದೆ, ಗರಿಷ್ಠ ತಾಪಮಾನದಲ್ಲಿ ಹೆಚ್ಚಳವಾಗುತ್ತದೆ ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿ 21ರಂದು 30.8°C, 22ರಂದು 32.4°C, 23ರಂದು 32.8°C, 24ರಂದು 31.1°C ಹಾಗೂ 25ರಂದು 31.6°C ದಾಖಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿಯೂ ಫೆಬ್ರವರಿಯಲ್ಲಿ 34°C ಮೀರಿದ ಉಷ್ಣಾಂಶ ದಾಖಲಾಗಿರುವುದು ಗಮನಾರ್ಹ. ಫೆಬ್ರವರಿ 17, 2005 ರಂದು ಸಾರ್ವಕಾಲಿಕ ಗರಿಷ್ಠ 35.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಜಠರಗರುಳಿನ ಸೋಂಕುಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಬಿಸಿಲ ಝಳವನ್ನು ಎದುರಿಸಲು ಮಧ್ಯಾಹ್ನ 12ರಿಂದ 3ರ ನಡುವೆ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಹಾಗೂ ಸಾಕಷ್ಟು ನೀರು ಕುಡಿಯುವಂತೆ ಸಲಹೆ ನೀಡಿದ್ದಾರೆ.
2018-2025 ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಕಂಡು ಬಂದ ತಾಪಮಾನ ಇಂತಿದೆ...
2018 ಫೆಬ್ರವರಿ 28 33 ಡಿಗ್ರಿ ಸೆಲ್ಸಿಯಸ್
2019 ಫೆಬ್ರವರಿ 26 35.5 ಡಿಗ್ರಿ ಸೆಲ್ಸಿಯಸ್
2020 ಫೆಬ್ರವರಿ 16 33.1 ಡಿಗ್ರಿ ಸೆಲ್ಸಿಯಸ್
2021 ಫೆಬ್ರವರಿ 27 34.1 ಡಿಗ್ರಿ ಸೆಲ್ಸಿಯಸ್
2022 ಫೆಬ್ರವರಿ 22 31.8 ಡಿಗ್ರಿ ಸೆಲ್ಸಿಯಸ್
2023 ಫೆಬ್ರವರಿ 16 30.9 ಡಿಗ್ರಿ ಸೆಲ್ಸಿಯಸ್
2024 ಫೆಬ್ರವರಿ 24 34.5 ಡಿಗ್ರಿ ಸೆಲ್ಸಿಯಸ್
2025 ಫೆಬ್ರವರಿ 20 34.4 ಡಿಗ್ರಿ ಸೆಲ್ಸಿಯಸ್
Advertisement