ಕರ್ನಾಟಕದಲ್ಲಿ 2.9 ಬಿಲಿಯನ್ ಡಾಲರ್ ಹೂಡಿಕೆಗೆ Tata Group ಮುಂದು: ಸಿಎಂ ಭೇಟಿ ಮಾಡಿದ ನಿಯೋಗ

ಟಾಟಾ ಸಮೂಹವು ಮುಂಬರುವ ಯೋಜನೆಗಳಿಗೆ 2.9 ಬಿಲಿಯನ್ ಡಾಲರ್‌ (26,000 ಕೋಟಿ ರೂಪಾಯಿಗೂ ಹೆಚ್ಚು) ಹೂಡಿಕೆ ಘೋಷಿಸಿದೆ.
A delegation led by Tata Advanced Systems Chairman Banmali Agrawala greets Chief Minister Siddaramaiah in Bengaluru
Tata Advanced Systems ಅಧ್ಯಕ್ಷ ಬನ್ಮಾಲಿ ಅಗರವಾಲಾ ಅವರ ನೇತೃತ್ವದ ಪ್ರತಿನಿಧಿ ಮಂಡಳಿ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ Siddaramaiah ಅವರನ್ನು ಭೇಟಿಯಾಗಿ ಶುಭಾಶಯ ಕೋರಿತು.
Updated on

ಬೆಂಗಳೂರು: ಟಾಟಾ ಅಡ್ವಾನ್ಸ್ ಡ್ ಸಿಸ್ಟಮ್ಸ್ ಸಂಸ್ಥೆಯ ಅಧ್ಯಕ್ಷ ಬನ್ಮಾಲಿ ಅಗರವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕರ್ನಾಟಕದಲ್ಲಿ 1.36 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡು 5 ಬಿಲಿಯನ್ ಡಾಲರ್‌ (45,000 ಕೋಟಿಗೂ ಅಧಿಕ) ಹೂಡಿಕೆ ಮಾಡುತ್ತಿರುವುದಾಗಿ ತಿಳಿಸಿದರು.

ಟಾಟಾ ಸಮೂಹವು ಮುಂಬರುವ ಯೋಜನೆಗಳಿಗೆ 2.9 ಬಿಲಿಯನ್ ಡಾಲರ್‌ (26,000 ಕೋಟಿ ರೂಪಾಯಿಗೂ ಹೆಚ್ಚು) ಹೂಡಿಕೆ ಘೋಷಿಸಿದೆ. ಇದರಲ್ಲಿ ಸೆಮಿಕಂಡಕ್ಟರ್ ವಿಸ್ತರಣೆ, ವೈಟ್‌ಫೀಲ್ಡ್‌ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ಹೊಸ ಕ್ಯಾಂಪಸ್‌, ವಿಮಾನಯಾನ ನಿರ್ವಹಣೆ, ದುರಸ್ತಿ ಮತ್ತು ಕಾರ್ಯನಿರ್ವಹಣೆ (MRO) ಹಬ್‌, ನವೀಕರಿಸಬಹುದಾದ ಇಂಧನ ಯೋಜನೆಗಳು ಹಾಗೂ ರಕ್ಷಣಾ ತಯಾರಿಕಾ ಯೋಜನೆಗಳು ಸೇರಿವೆ.

ಟಾಟಾ ಸಮೂಹದ ಪ್ರಮುಖ ನೇರ ಉದ್ಯೋಗದಾತ ಸಂಸ್ಥೆಗಳಾಗಿ ಟಿಸಿಎಸ್‌, ಟಾಟಾ ಕನ್ಸ್ಯೂಮರ್ ಪ್ರೊಡಕ್ಟ್ಸ್ ಹಾಗೂ ಟಾಟಾ ಮೋಟಾರ್ಸ್ ಉಲ್ಲೇಖಿಸಲ್ಪಟ್ಟಿವೆ. ಜೊತೆಗೆ ಟಿಸಿಎಸ್‌, ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಟಾಟಾ ಮೋಟಾರ್ಸ್‌ಗಳು ಪರೋಕ್ಷ ಉದ್ಯೋಗಾವಕಾಶಗಳನ್ನು ಹೆಚ್ಚಾಗಿ ಸೃಷ್ಟಿಸುತ್ತಿವೆ. ಪ್ರಸ್ತುತ ಕರ್ನಾಟಕದಾದ್ಯಂತ 27 ಕಂಪನಿಗಳಲ್ಲಿ 1,36,600ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಲಾಗಿದೆ.

A delegation led by Tata Advanced Systems Chairman Banmali Agrawala greets Chief Minister Siddaramaiah in Bengaluru
Amazon: ಬೆಂಗಳೂರಿನಲ್ಲಿ ಹೊಸ ಕಚೇರಿ ಆರಂಭ; ಭರ್ಜರಿ ಹೂಡಿಕೆ, ಲಕ್ಷಾಂತರ ಉದ್ಯೋಗ ಸೃಷ್ಟಿ; Video

ಮುಂದಿನ ಅವಧಿಯಲ್ಲಿ 2.9 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹೂಡಿಕೆಗಳ ಮೂಲಕ ರಾಜ್ಯದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಲು ಸಮೂಹ ಯೋಜಿಸಿದೆ. ಪ್ರಮುಖ ಪ್ರಸ್ತಾವನೆಗಳಲ್ಲಿ ದಕ್ಷಿಣ ಭಾರತದ ಮೊದಲ ನಾಗರಿಕ ಹಾಗೂ ರಕ್ಷಣಾ ವಿಮಾನಯಾನ ಎಂಆರ್ ಒ ಹಬ್‌, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಸೇರ್ಪಡೆ ಮತ್ತು ಪ್ಯಾಕೇಜಿಂಗ್ ಘಟಕಗಳು, ಐದು ವರ್ಷಗಳಲ್ಲಿ 2,500 ಮೆಗಾವಾಟ್‌ಗಿಂತ ಹೆಚ್ಚಿನ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಸೇರಿವೆ.

ಟಿಸಿಎಸ್‌ ವೈಟ್‌ಫೀಲ್ಡ್‌ನಲ್ಲಿ 25 ಸಾವಿರ ಆಸನ ಸಾಮರ್ಥ್ಯದ ಹೊಸ ಕ್ಯಾಂಪಸ್‌ ನಿರ್ಮಿಸಲು ಯೋಜಿಸಿದೆ. ಟಾಟಾ ಎಲೆಕ್ಟ್ರಾನಿಕ್ಸ್‌ ಮುಂದಿನ ಎರಡು ವರ್ಷಗಳಲ್ಲಿ ತನ್ನ ಎಲೆಕ್ಟ್ರಾನಿಕ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಸರ್ವಿಸಸ್ ಹಾಗೂ ಸೆಮಿಕಂಡಕ್ಟರ್ ಸಂಯೋಜನೆ ಮತ್ತು ಟೆಸ್ಟ್ ಸೌಲಭ್ಯಗಳನ್ನು ವಿಸ್ತರಿಸಲಿದೆ. ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ಗಳ ಸಂಯುಕ್ತ ಎಂಆರ್ ಒ ಹಬ್‌ನ್ನು ಸುಮಾರು 455 ಮಿಲಿಯನ್ ಡಾಲರ್ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಇದೇ ವೇಳೆ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ ಹೆಚ್125 ಹೆಲಿಕಾಪ್ಟರ್ ಅಂತಿಮ ಸಂಯೋಜನಾ ಸರಣಿ, ಸ್ವದೇಶಿ ತೋಪು ಉತ್ಪಾದನೆ ಹಾಗೂ ಯುಎವಿ ವ್ಯವಸ್ಥೆಗಳ ಸ್ಥಾಪನೆ ಕೈಗೊಂಡಿದೆ. ಟಾಟಾ ಪವರ್ ಕರ್ನಾಟಕದಲ್ಲಿ 2,507 ಮೆಗಾವಾಟ್ ಸಾಮರ್ಥ್ಯದ ಯೋಜನೆಗಳನ್ನು ನಿರ್ಮಾಣ ಹಂತದಲ್ಲಿ ಹೊಂದಿದ್ದು, ಇಂಡಿಯನ್ ಹೊಟೇಲ್ಸ್ ಕಂಪೆನಿ ಲಿಮಿಟೆಡ್ ಒಂಬತ್ತು ಹೊಟೇಲ್ ಯೋಜನೆಗಳನ್ನು ಮುಂದಿನ ಹಂತದಲ್ಲಿ ಹೊಂದಿದೆ.

A delegation led by Tata Advanced Systems Chairman Banmali Agrawala greets Chief Minister Siddaramaiah in Bengaluru
ಟಾಟಾ ಟ್ರಸ್ಟಿಗಳ ಮಧ್ಯೆ ಬಿರುಕು: Ratan Tata ನಿಧನ ನಂತರ ಏನಾಯಿತು?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com