

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಕೆಲ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಎಸಿಪಿ ಚಂದನ್ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಸಂಘಟನೆಗಳು ದೊಡ್ಡ ಪ್ರತಿಭಟನೆಗೆ ಮುಂದಾಗಿವೆ. ಮಾತ್ರವಲ್ಲದೇ ಇಬ್ಬರೂ ಅಧಿಕಾರಿಗಳ ಅಮಾನತಿಗೆ ಆಗ್ರಹ ಕೇಳಿ ಬಂದಿದೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ವಿರುದ್ಧ ಇವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 11ರಂದು ಬುಧವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ನಟರಾಜ್ ಬೊಮ್ಮಸಂದ್ರ ಮಾಹಿತಿ ನೀಡಿದ್ದಾರೆ.
ಈ ಪ್ರತಿಭಟನೆಗೆ ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟ ಕರೆ ನೀಡಿದ್ದು, ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಭಾಗವಹಿಸುವ ಸಾಧ್ಯತೆ ಇದೆ.
ಸಂಘಟನೆಯ ಮುಖಂಡ ನಟರಾಜ್ ಬೊಮ್ಮಸಂದ್ರ ಈ ಕುರಿತು ಮಾಹಿತಿ ನೀಡಿದ್ದು, ಚಿತ್ರನಟ ದರ್ಶನ್ ತಪ್ಪೇ ಮಾಡಿದ್ದರೆ, ಕಾನೂನಿನಡಿಯಲ್ಲಿ ಶಿಕ್ಷೆಯಾಗಲಿ. ಆದರೆ ಪೋಲಿಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸದೆ.
ಅವರ ವಿರುದ್ದ ಸುಳ್ಳು ದಾಖಲೆ ಸೃಷ್ಟಿಸಿದ ಎಸಿಪಿ ಚಂದನ್ ಹಾಗೂ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ಅಮಾನತಿಗೆ ಆಗ್ರಹಿಸಿ ಮಾರ್ಚ್ 11ರಂದು ಬುಧವಾರ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸುಳ್ಳು ದಾಖಲೆ ಸೃಷ್ಟಿ ಆರೋಪ:
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ 6 ತಿಂಗಳು ಕಳೆದಿದೆ. ಈ ಮಧ್ಯೆ ಕೇಸ್ ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೇಸ್ ನ ತನಿಖೆ ನಡೆಸುತ್ತಿದ್ದ ಕಾಮಾಕ್ಷಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ವಿರುದ್ಧ ಸುಳ್ಳು ಸಾಕ್ಷಿ ಸೃಷ್ಟಿ ಮತ್ತು ದಾಖಲೆಗಳಲ್ಲಿ ದೋಷಾರೋಪಣೆ ಆರೋಪಗಳು ಎದ್ದಿವೆ.
ಆರೋಪಿಗಳ ಫೋನ್ ಸೀಜ್ ಮಾಡಿದ್ದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದರೂ, ಸೀಜ್ ಫೋಟೋಗಳಲ್ಲಿ ಠಾಣೆಯ ಫ್ಲೋರಿಂಗ್ ಮಿಸ್‌ಮ್ಯಾಚ್ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ಸೀಜ್ ಸಂದರ್ಭದ ಫೋಟೋಗಳಲ್ಲಿ ಆರೋಪಿಗಳು ನಿಂತಿರುವ ಸ್ಥಳದ ಫ್ಲೋರಿಂಗ್ ವೆಟ್ರಿಪೈಡ್ ಟೈಲ್ಸ್ ಇದ್ದರೆ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಮಜಾಕ್ ಟೈಲ್ಸ್ ಅಳವಡಿಸಲಾಗಿದೆ ಎಂಬುದು ಗಮನಕ್ಕೆ ಬಂದಿದೆ.
ಇದರಿಂದಾಗಿ ಫೋನ್ ಸೀಜ್ ಬೇರೆಡೆ ನಡೆದು, ಠಾಣೆಯಲ್ಲಿ ನಡೆದಂತೆ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ ಎಂಬ ಆರೋಪ ಎದ್ದಿದೆ.
ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಅವರನ್ನು ಆರೋಪಿಯನ್ನಾಗಿ ಮಾಡುವಂತೆ ವಕೀಲ ಸುಧನ್ವ ಅವರು ಸೆಷನ್ಸ್ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
Advertisement