ಧಾರವಾಡದ ಶಾಲಾ ಮಕ್ಕಳ 'ಕಿಡ್ನಾಪ್': ಜೋಯಿಡಾ ಬಳಿ ಪತ್ತೆ! ಸುಳಿವು ಸಿಕ್ಕಿದ್ದು ಹೇಗೆ ಗೊತ್ತಾ?

ಉಳ್ಳಾವಿ ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮಕ್ಕಳನ್ನು ಆತ ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಸೋಮವಾರ ಸಂಜೆ ಮಕ್ಕಳ ನಾಪತ್ತೆ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ಪರಿಶೀಲನೆ ಆರಂಭಿಸಿದಾಗ ಬೈಕ್ ವೊಂದರಲ್ಲಿ ಮಕ್ಕಳು ತೆರಳುತ್ತಿರುವುದು ಕಂಡುಬಂದಿದೆ.
A view of CCTV footage of bike in which the person is taken the
children to Joida
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬೈಕ್ ಸಿಸಿಟಿವಿಯಲ್ಲಿ ಪತ್ತೆ
Updated on

ಧಾರವಾಡ: ಕಮಲಾಪುರ ಶಾಲೆಯಿಂದ ಕಿಡ್ನ್ಯಾಪ್‌ ಆಗಿದ್ದ ಇಬ್ಬರು ಮಕ್ಕಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ಪತ್ತೆಯಾಗಿದ್ದು, ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಕಮಲಾಪುರ ಪ್ರದೇಶದ ಸರ್ಕಾರಿ ಶಾಲೆ ಸಂಖ್ಯೆ-4 ರಿಂದ ಇಬ್ಬರನ್ನು ಮಕ್ಕಳನ್ನು ಕರೆದೊಯ್ಯುತ್ತಿದ್ದ ಬೈಕ್ ಜೋಯಿಡಾ ಬಳಿ ಸ್ಕಿಡ್ ಆಗಿದ್ದು, ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಅಷ್ಟರಲ್ಲಿ ಮಕ್ಕಳ ಹುಡುಕಾಟದಲ್ಲಿದ್ದ ಪಾಲಕರು ಹಾಗೂ ಪೊಲೀಸರಿಗೆ ಆ ಅಪಘಾತದ ಮಾಹಿತಿ ತಿಳಿದಿದೆ. ಈಗ ಮಕ್ಕಳನ್ನು ಕರೆತರಲಾಗಿದ್ದು, ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಕ್ಕಳನ್ನು ಕಿಡ್ನಾಪ್ ಮಾಡಿದ್ದ ಅಪರಿಚಿತ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದಾಗ್ಯೂ, ಈ ಘಟನೆ ಅವಳಿ ನಗರದ ಪೋಷಕರಲ್ಲಿ ಆತಂಕ ಮೂಡಿಸಿದೆ. ಅಪಹರಣಕಾರ ಅಪರಿಚಿತ ಎಂಬುದು ತಿಳಿದುಬಂದಿದೆ.

ಉಳ್ಳಾವಿ ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮಕ್ಕಳನ್ನು ಆತ ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಸೋಮವಾರ ಸಂಜೆ ಮಕ್ಕಳ ನಾಪತ್ತೆ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ಪರಿಶೀಲನೆ ಆರಂಭಿಸಿದಾಗ ಬೈಕ್ ವೊಂದರಲ್ಲಿ ಮಕ್ಕಳು ತೆರಳುತ್ತಿರುವುದು ಕಂಡುಬಂದಿದೆ.

ಈ ಸಿಸಿಟಿವಿ ಆಧಾರದ ಮೇಲೆ ಪೊಲೀಸರು ದಾಂಡೇಲಿಗೆ ತೆರಳಿದ್ದರು. ಅಷ್ಟರಲ್ಲಿ ಪಟೋಳಿ ಕ್ರಾಸ್ ನಲ್ಲಿ ಬೈಕ್ ಅಪಘಾತ ಸಂಭವಿಸಿದೆ ಎಂದು ಕಾರವಾರ ಪೊಲೀಸರಿಗೆ ಮಾಹಿತಿ ಬಂದಿದೆ. ಪೊಲೀಸರು ಫೋಟೋಗಳನ್ನು ಪರಿಶೀಲಿಸಿದಾಗ ನಾಪತ್ತೆಯಾದ ಮಕ್ಕಳು ಇವರೇ ಎಂಬುದು ತಿಳಿದುಬಂದಿತು ಎಂದು ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ತಿಳಿಸಿದರು.

ಬಳಿಕ ಪೊಲೀಸರು ಮೂವರನ್ನು ಧಾರವಾಡಕ್ಕೆ ಸಾಗಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಾಗ್ಯೂ, ಮಕ್ಕಳ ಮೇಲೆ ಯಾವುದೇ ಹಲ್ಲೆ ಬಗ್ಗೆ ಯಾವುದೇ ವರದಿಯಾಗಿಲ್ಲ. ಕೆಲವು ಗಾಯಗಳಾಗಿವೆ. ಅಪಘಾತದ ಕಾರಣದಿಂದಾಗಿ ಆ ಗಾಯಗಳಾಗಿವೆ.

A view of CCTV footage of bike in which the person is taken the
children to Joida
ಮಾಗಡಿ: ಬಾಲಕಿ ಕಿಡ್ನಾಪ್, ಅನುಚಿತ ವರ್ತನೆ ಆರೋಪ, ಗ್ರಾಮಸ್ಥರಿಂದ ಒದೆ ತಿಂದು ಅರೆಸ್ಟ್ ಆದ ಯೂ ಟ್ಯೂಬರ್!

ಮಕ್ಕಳನ್ನು ಕಿಡ್ನಾಪ್ ಮಾಡಿದ್ದ ವ್ಯಕ್ತಿಯನ್ನು ಧಾರವಾಡದ ರಾಜೀವ್ ಗಾಂಧಿ ನಗರದ ನಿವಾಸಿ ಅಬ್ದುಲ್ ಕರೀಂ ಎಂದು ತಿಳಿದುಬಂದಿದೆ. ಕಟ್ಟಡ ನಿರ್ಮಾಣದ ಕಾರ್ಮಿಕರು ಎನ್ನಲಾಗಿದೆ. ಅವರು ಡಿಸ್ಚಾರ್ಜ್ ಆದ ನಂತರ ಹೆಚ್ಚಿನ ವಿಷಯಗಳು ಬಹಿರಂಗಗೊಳ್ಳಲಿವೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ರೌಡಿ ಶೆಟ್ಟರ್ ಎಂಬುದು ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com